Karunadu Studio

ಕರ್ನಾಟಕ

Tumkur News: ಕಾರ್ಖಾನೆ ಸಂಪ್‌ ಸ್ವಚ್ಛಗೊಳಿಸಲು ಹೋಗಿ ಇಬ್ಬರು ಕಾರ್ಮಿಕರ ಸಾವು, ಮತ್ತಿಬ್ಬರು ಅಸ್ವಸ್ಥ – Kannada News | Two workers die while cleaning factory sump at tumkur


ತುಮಕೂರು: ಕಾರ್ಖಾನೆಯ ಸಂಪ್‌ ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಜರುಗಿದೆ. ಮಧುಗಿರಿ ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್ (23), ಶಿರಾ ತಾಲೂಕಿನ ತರೂರು ಗ್ರಾಮದ ವೆಂಕಟೇಶ್ (32) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶದ ಲಾರೋಸ್ ಬಯೋ ರಾಸಾಯನಿಕ ಕಾರ್ಖಾನೆಯ ಸಂಪ್‌ ಸ್ವಚ್ಛಗೊಳಿಸಲು ಹೋದ ವೇಳೆ ಈ ದುರ್ಘಟನೆ ನಡೆದಿದೆ. ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ (42) ಹಾಗೂ ಯುವರಾಜ್ (32) ಅಸ್ವಸ್ಥರಾಗಿದ್ದು, ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

1 ಲಕ್ಷ ಲೀಟರ್ ಸಾಮರ್ಥ್ಯದ ಸಂಪ್‌ ಸ್ವಚ್ಛಗೊಳಿಸುವ ವೇಳೆ ಈ ಘಟನೆ ನಡೆದಿದೆ. ಮೊದಲು ಮಂಜಣ್ಣ ಹಾಗೂ ಯುವರಾಜ್ ಎಂಬುವವರು ಸ್ವಚ್ಛಗೊಳಿಸಲು ಹೋಗಿದ್ದು ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅವರನ್ನು ಉಳಿಸಲು ಹೋದ ಪ್ರತಾಪ್, ವೆಂಕಟೇಶ್ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ | Indian Origin Techie: ಅಮೆರಿಕದಲ್ಲಿ ಭಾರತೀಯ ಮೂಲದ ಉದ್ಯಮಿಯ ಭೀಕರ ಹತ್ಯೆ: ಈ ಕಾರಣಕ್ಕೂ ಕೊಲೆ ಮಾಡ್ತಾರ?

ಬೆಂಗಳೂರಿನಲ್ಲಿ ಸೂಟ್​ಕೇಸ್​ನಲ್ಲಿ ಯುವತಿಯ ಶವ ಪತ್ತೆ!

ಆನೇಕಲ್: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈಲ್ವೆ ಬ್ರಿಡ್ಜ್ ಸಮೀಪ ಅಪರಿಚಿತ ಯುವತಿಯ ಶವ (Dead Body Found) ಸೂಟ್ ಕೇಸ್‌ನಲ್ಲಿ ಪತ್ತೆಯಾಗಿದೆ. ನೀಲಿ ಬಣ್ಣದ ಸೂಟ್ ಕೇಸ್ ಕಂಡಿದ್ದು, ಅದನ್ನು ಪರಿಶೀಲಿಸಿದಾಗ ಸಾರ್ವಜನಿಕರು ಶಾಕ್ ಆಗಿದ್ದಾರೆ. ಸುಮಾರು 18 ವರ್ಷ ವಯಸ್ಸಿನ ಯುವತಿ ಶವ ಸೂಟ್ ಕೇಸ್‌ನಲ್ಲಿ ಪತ್ತೆಯಾಗಿದೆ.

ಯುವತಿ ಗುಲಾಬಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕೈ ಕಾಲುಗಳನ್ನು ಮಡಚಿ ಇಡೀ ದೇಹವನ್ನು ಸೂಟ್ ಕೇಸ್‌ನಲ್ಲಿ ತುಂಬಲಾಗಿದೆ. ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವ ಆಗಿರುವ ಕುರುಹು ಇದ್ದು, ಉಳಿದಂತೆ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಬೇರೆಲ್ಲೋ ಕೊಲೆಗೈದು ರೈಲಿನಲ್ಲಿ ಸಾಗುವ ವೇಳೆ ಮೃತದೇಹವನ್ನು ಹೊರಗೆ ಎಸೆದಿರುವ ಶಂಕೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಆರಂಭದಲ್ಲಿ ಸ್ಥಳೀಯರಿಗೆ ಸೂಟ್ ಕೇಸ್‌ನಲ್ಲಿ ಯುವತಿ ಮುಖ ಮಾತ್ರ ಕಾಣಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸೂರ್ಯನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈಲ್ವೆ ಹಳಿ ಸಮೀಪ ಯುವತಿ ಶವ ಪತ್ತೆ ಹಿನ್ನೆಲೆ ರೈಲ್ವೆ ಕೇಸ್ ದಾಖಲಿಸಿಕೊಳ್ಳಲಿದ್ದಾರೆ ಎಂದು ಪೊಲೀಸರು ಕಾದು ಕುಳಿತಿದ್ದರು. ಆದರೆ ರೈಲ್ವೆ ಪೊಲೀಸರು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದ ಬಳಿಕ ಸೂರ್ಯನಗರ ಠಾಣೆ ಪೊಲೀಸರು ‌ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Viral Video: ಯುವಕನ ಮೇಲೆ ನಾಲ್ವರಿಂದ ಭೀಕರ ಹಲ್ಲೆ; ಶಾಕಿಂಗ್‌ ವಿಡಿಯೊ ವೈರಲ್



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »