Karunadu Studio

ಕರ್ನಾಟಕ

Tasmac liquor scam: ED ತನ್ನ ಎಲ್ಲಾ ಮಿತಿಯನ್ನು ಮೀರುತ್ತಿದೆ; ತಮಿಳುನಾಡು ಸರ್ಕಾರದ ಪರ ಬ್ಯಾಟ್‌ ಬೀಸಿದ ಸುಪ್ರೀಂ – Kannada News | ED crossing all limits: Supreme Court pauses action into Tasmac liquor scam


ಚೆನ್ನೈ: ತಮಿಳುನಾಡಿನ (Tamilnadu) ಸರ್ಕಾರಿ ಸ್ವಾಮ್ಯದ ಮದ್ಯ ಸಂಸ್ಥೆ ಟಾಸ್ಮ್ಯಾಕ್ (Supreme Court) (ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್) ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿದ್ದ ತನಿಖೆ ಮತ್ತು ದಾಳಿಗಳಿಗೆ ಸುಪ್ರೀಂ ಕೋರ್ಟ್ ಗುರುವಾರ ತಾತ್ಕಾಲಿಕ ತಡೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಕೇಂದ್ರ ಸಂಸ್ಥೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯ ವಿಷಯವಾಗಿರುವುದರಿಂದ ಇಡಿಯ ಕ್ರಮಗಳು ಅಸಮಾನ ಮತ್ತು ಬಹುಶಃ ಅಸಂವಿಧಾನಿಕ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇಡಿ ತನ್ನ ಎಲ್ಲಾ ಮಿತಿಗಳನ್ನು ಮೀರುತ್ತಿದೆ. ರಾಜ್ಯ ನಿಗಮವನ್ನು ಗುರಿಯಾಗಿಸಿಕೊಂಡು “ಫೆಡರಲ್ ರಚನೆಯನ್ನು ಉಲ್ಲಂಘಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿಗಳೂ ಹೇಳಿದ್ದಾರೆ. ಮದ್ರಾಸ್ ಹೈಕೋರ್ಟ್‌ನ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಮಂಗಳವಾರ (ಮೇ 20) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಈ ಆದೇಶ ಬಂದಿದೆ. ಏಪ್ರಿಲ್ 23 ರಂದು ಮದ್ರಾಸ್ ಹೈಕೋರ್ಟ್ ಇಡಿ ತನಿಖೆ ಮುಂದುವರಿಸಲು ಅವಕಾಶ ನೀಡಿದ ನಂತರ ಈ ಮೇಲ್ಮನವಿ ಸಲ್ಲಿಸಲಾಗಿತ್ತು.

ತಮಿಳುನಾಡಿನಲ್ಲಿ 1,000 ಕೋಟಿ ರೂಪಾಯಿಗಳ ಮದ್ಯ ಹಗರಣ ನಡೆದಿದೆ ಎಂದು ED ಆರೋಪಿಸಿದೆ. ಸರ್ಕಾರಿ ಸ್ವಾಮ್ಯದ ಮದ್ಯದ ಚಿಲ್ಲರೆ ವ್ಯಾಪಾರಿ ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಷನ್ ಲಿಮಿಟೆಡ್ (TASMAC)ನಲ್ಲಿ ಹಗರಣ ನಡೆದಿದೆ ಎನ್ನಲಾಗಿದೆ. TASMAC ಅಧಿಕಾರಿಗಳ “ಪಾಲುದಾರಿಕೆ”ಯೊಂದಿಗೆ TASMAC ಮಳಿಗೆಗಳು ಮಾರಾಟ ಮಾಡುವ ಪ್ರತಿ ಬಾಟಲಿಗೆ 10 ರಿಂದ 30 ರೂ.ಗಳವರೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗಿದ್ದ ವಂಚನೆಯ ಬೆಲೆಗಳ ಬಗ್ಗೆ “ಪುರಾವೆಗಳು” ಸಹ ಇದ್ದವು ಎಂದು ED ಹೇಳಿತ್ತು.

ಈ ಸುದ್ದಿಯನ್ನೂ ಓದಿ: NEP Row: ಎನ್‌ಇಪಿ ವಿವಾದ; ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಟಾಸ್ಮ್ಯಾಕ್ ಮೇಲಿನ ಇಡಿ ದಾಳಿಗಳ ಕುರಿತು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದು, ಇದು ಕೇಂದ್ರ ಸಂಸ್ಥೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಇದೀಗ ಕೋರ್ಟ್‌ ತಮಿಳುನಾಡಿನ ಸರ್ಕಾರದ ಪರ ಬ್ಯಾಟ್‌ ಬೀಸಿದೆ. ತಮಿಳುನಾಡು ಅಬಕಾರಿ ಸಚಿವ ಎಸ್. ಮುತ್ತುಸ್ವಾಮಿ ಇಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ, ತಪಾಸಣೆಯ ಸಮಯದಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ ಟಾಸ್ಮ್ಯಾಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಮಾಡಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »