Karunadu Studio

ಕರ್ನಾಟಕ

ಶಾಕಿಂಗ್‌: ತಿರುಮಲ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್‌; ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೊ ಇಲ್ಲಿದೆ – Kannada News | Muslim man offers namaz near Tirumala Temple


ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ (Tirupati Temple) ಹಿಂದುಗಳು ಮಾತ್ರ ಕೆಲಸ ಮಾಡಬೇಕು ಎಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಈ ಮಧ್ಯೆ ಗುರುವಾರ (ಮೇ 22) ತಿರುಮಲ ದೇವಸ್ಥಾನ (Tirumala Temple) ಪರಿಸರದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಟೋಪಿ‍ ಧರಿಸಿ ನಮಾಜ್‌ ಮಾಡಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿರುಮಲದ ಕಲ್ಯಾಣ ಮಂಟಪದ ಬಳಿ ಮುಸ್ಲಿಂ ವ್ಯಕ್ತಿ ನಮಾಜ್ ಮಾಡುವ ದೃಶ್ಯ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ನಮಾಜ್‌ ಸಲ್ಲಿಸುವ ವೇಳೆ ಮುಸ್ಲಿಂ ವ್ಯಕ್ತಿ ಹಜರತ್ ಟೋಪಿ ಧರಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಆ ವ್ಯಕ್ತಿ ದೇವಾಲಯದ ಪರಿಸರದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಕಾಲ ನಮಾಜ್‌ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಏ. 22ರಂದು ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಈ ಘಟನೆ ಆಕ್ರೋಶ ಹುಟ್ಟುಹಾಕಿದೆ. ಕಾರಿನಲ್ಲಿ ಬಂದ ಮಧ್ಯವಯಸ್ಕ ಮುಸ್ಲಿಂ ವ್ಯಕ್ತಿ ನಮಾಜ್‌ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Tirupati temple: ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದುಗಳಿಗೆ ಮಾತ್ರ ಉದ್ಯೋಗ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ತನಿಖೆಗೆ ಆದೇಶ

ವಿಡಿಯೊ ವೈರಲ್‌ ಆಗಿ ವಿವಾದ ಸೃಷ್ಟಿಸುತ್ತಿದ್ದಂತೆ ತಿರುಮಲ ತಿರುಪತಿ ದೇವಸ್ಥಾನಂ (TTD)ನ ವಿಜಿಲೆನ್ಸ್ ತಂಡ ನಮಾಜ್ ಮಾಡುತ್ತಿರುವ ಆ ವ್ಯಕ್ತಿಯನ್ನು ಗುರುತಿಸಲು ತನಿಖೆ ಪ್ರಾರಂಭಿಸಿದೆ. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕಾರಿನ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿ ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯು ತಿರುಪತಿಯ ಭದ್ರತೆಯ ಪ್ರಶ್ನೆ ಮೂಡುವಂತೆ ಮಾಡಿದೆ.

ನೆಟ್ಟಿಗರು ಹೇಳಿದ್ದೇನು?

ವಿಡಿಯೊ ನೋಡಿದ ನೆಟ್ಟಿಗರು ಆಘಾತ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼಇವರು ಅನಗತ್ಯವಾಗಿ ಹಿಂದುಗಳು ಮತ್ತು ದೇವಾಲಯಗಳನ್ನು ಕೆಣಕಲು ಬರುತ್ತಾರೆ. ಟಿಎನ್‌ 83 ನಂಬರ್‌ ಪ್ಲೇಟ್‌ನ ಕಾರು ತಮಿಳುನಾಡಿನ ತಿರುಪತ್ತೂರಿನಿಂದ ಬಂದಿದೆ. ನಿಮಗೆ ನೆನಪಿರಬಹುದು ಮಾಜಿ ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ತಂದೆ ರಾಜಶೇಖರ್ ರೆಡ್ಡಿ ತಿರುಮಲ ಬೆಟ್ಟಗಳ ಮೇಲೆ ಚರ್ಚ್ ನಿರ್ಮಿಸಲು ಮತ್ತು ಬೃಹತ್ ಶಿಲುಬೆಯನ್ನು ಸ್ಥಾಪಿಸಲು ಮುಂದಾಗಿದ್ದರು. ಹಿಂದುಗಳು ಸೇರಿದಂತೆ ಯಾರೂ ತಿರುಮಲ ಬೆಟ್ಟಗಳ ಮೇಲೆ ಯಾವುದೇ ಸಾಹಸ ಮಾಡಲು ಮುಂದಾಗಬಾರದು. ಭಗವಾನ್ ಬಾಲಾಜಿ ತಪ್ಪು ಮಾಡುವವರನ್ನು ಎಂದಿಗೂ ಸುಮ್ಮನೆ ಬಿಡುವುದಿಲ್ಲ” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕೆಲವರು ಇದನ್ನು ಸಮಾಜದ ಶಾಂತಿ ಕದಡುವ ಯತ್ನ ಎಂದು ಕರೆದಿದ್ದಾರೆ. ಮುಸ್ಲಿಂ ವ್ಯಕ್ತಿಗೆ ಹಿಂದು ದೇವಾಲಯದಲ್ಲೇನು ಕೆಲಸ ಎಂದು ಇನ್ನು ಹಲವರು ಪ್ರಶ್ನಿಸಿದ್ದಾರೆ. ಆತನನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಕಿಚ್ಚು ಹಚ್ಚಿದೆ. ಏ. 22ರಂದು ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಧರ್ಮ ವಿಚಾರಿಸಿ ಹಿಂದುಗಳನ್ನು ಹತ್ಯೆ ಮಾಡಿದ್ದರು. ಹೀಗಾಗಿ ಈ ವಿಡಿಯೊ ಭಾರಿ ಸದ್ದು ಮಾಡುತ್ತಿದೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »