Karunadu Studio

ಕರ್ನಾಟಕ

ENG vs ZIM: ಎಂಟು ವಿಭಿನ್ನ ರಾಷ್ಟ್ರಗಳ ವಿರುದ್ದ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಒಲ್ಲಿ ಪೋಪ್‌! – Kannada News | ENG vs ZIM: England’s Ollie Pope Sets World Record With 8 Test Tons Against 8 Different Nations


ನಾಟಿಂಗ್‌ಹ್ಯಾಮ್‌: ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ ಕ್ರೀಡಾಂಗಣದಲ್ಲಿ ಜಿಂಬಾಬ್ವೆ ವಿರುದ್ದ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದಲ್ಲಿ (ENG vs ZIM) ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಒಲ್ಲಿ ಪೋಪ್‌ (Ollie Pope) ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ವಿಶ್ವದ ವಿಭಿನ್ನ ಎಂಟು ರಾಷ್ಟ್ರಗಳ ಎದುರು ಶತಕವನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶ್ವ ದಾಖಲೆಯನ್ನು ಇಂಗ್ಲೆಂಡ್‌ ಆಟಗಾರ ಬರೆದಿದ್ದಾರೆ. ಪಂದ್ಯದ ಮೊದಲ ದಿನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಒಲ್ಲಿ ಪೋಪ್‌ ಅಜೇಯ 169 ರನ್‌ಗಳನ್ನು ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.

ಪಂದ್ಯದ ಮೊದಲನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ 88 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 498 ರನ್‌ಗಳನ್ನು ಕಲೆ ಹಾಕಿತ್ತು. ಇವರ ಜೊತೆಗೆ ಇಂಗ್ಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಝ್ಯಾಕ್‌ ಕ್ರಾವ್ಲಿ (124 ರನ್‌) ಹಾಗೂ ಬೆನ್‌ ಡಕೆಟ್‌ (140 ರನ್‌) ಕೂಡ ಶತಕಗಳನ್ನು ಬಾರಿಸಿದ್ದರು. ಎರಡನೇ ದಿನವಾದ ಶುಕ್ರವಾರ ಕ್ರೀಸ್‌ಗೆ ಬಂದ ಒಲ್ಲಿ ಪೋಪ್‌ಗೆ ದ್ವಿಶತಕವನ್ನು ಸಿಡಿಸಲು ಅವಕಾಶವಿತ್ತು. ಆದರೆ, 166 ಎಸೆತಗಳಲ್ಲಿ 171 ರನ್‌ ಗಳಿಸಿ ಟಣಕ ಚಿವಂಗಾ ಅವರ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ತಮ್ಮ ಇನಿಂಗ್ಸ್‌ನಲ್ಲಿ ಪೋಪ್‌, ಎರಡು ಸಿಕ್ಸರ್‌ ಹಾಗೂ 24 ಮನಮೋಹಕ ಬೌಂಡರಿಗಳನ್ನು ಬಾರಿಸಿದರು.

Joe Root: ಟೆಸ್ಟ್‌ನಲ್ಲಿ 13 ಸಾವಿರ ರನ್‌ ಪೂರೈಸಿ ದಾಖಲೆ ಬರೆದ ಜೋ ರೂಟ್‌

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಒಲ್ಲಿ ಪೋಪ್‌ ಶತಕವನ್ನು ಪೂರ್ಣಗೊಳಿಸಲು 109 ಎಸೆತಗಳನ್ನು ತೆಗೆದುಕೊಂಡಿದ್ದರು. ಇಂಗ್ಲೆಂಡ್‌ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಮೂಡಿ ಬಂದ ಏಳನೇ ಶತಕ ಇದಾಗಿದೆ. ಇದಕ್ಕೂ ಮುನ್ನ ಜೋನಾಥನ್‌ ಟ್ರಾಟ್‌ ಕೂಡ ಇಷ್ಟೇ ಶತಗಳನ್ನು ಮೂರನೇ ಕ್ರಮಾಂಕದಲ್ಲಿ ಬಾರಿಸಿದ್ದರು. ಇದೀಗ ಟ್ರಾಟ್‌ ಅವರ ದಾಖಲೆಯನ್ನು ಒಲ್ಲಿ ಪೋಪ್‌ ಸರಿದೂಗಿಸಿದ್ದಾರೆ. ಇಂಗ್ಲೆಂಡ್‌ ಟೆಸ್ಟ್‌ ತಂಡದ ಮೂರನೇ ಕ್ರಮಾಂಕದಲ್ಲಿ ಟ್ರಾಟ್‌ ಹಾಗೂ ಪೋಪ್‌ ಅವರಿಗಿಂತ ಹೆಚ್ಚಿನ ಶತಕಗಳನ್ನು ವಾಲ್ಲಿ ಹ್ಯಾಮಂಡ್‌, ಕೆನ್‌ ಬ್ಯಾರಿಂಗ್ಟನ್‌ ಹಾಗೂ ಡೇವಿಡ್‌ ಗೋವರ್‌ ಬಾರಿಸಿದ್ದಾರೆ.



ವಿಶ್ವದ ದಾಖಲೆ ಬರೆದ ಒಲ್ಲಿ ಪೋಪ್‌

ಒಲ್ಲಿ ಪೋಪ್‌ ಅವರು ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ ಎಂಟು ವಿಭಿನ್ನ ಎದುರಾಳಿ ತಂಡಗಳ ವಿರುದ್ಧ ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಒಲ್ಲಿ ಪೋಪ್‌ ಬರೆದಿದ್ದಾರೆ. ಇದೀಗ 27ರ ಪ್ರಾಯದ ಬ್ಯಾಟ್ಸ್‌ಮನ್‌ ತಮ್ಮ ಮತ್ತೊಂದು ದಾಖಲೆಯನ್ನು ಮುಂದುವರಿಸಿದ್ದಾರೆ. ತಮ್ಮ ಆರಂಭಿಕ ಎಂಟು ಶತಕಗಳನ್ನು ವಿಭಿನ್ನ ಎದುರಾಳಿ ತಂಡಗಳ ವಿರುದ್ಧ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಕನಿಷ್ಠ ಎಂಟು ವಿಭಿನ್ನ ದೇಶಗಳ ಎದುರು ಶತಕವನ್ನು ಸಿಡಿಸಿದ ವಿಶ್ವದ 30ನೇ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೂ ಒಲ್ಲಿ ಪೋಪ್‌ ಭಾಜನರಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುವ ಆಶಸ್‌ ಟೆಸ್ಟ್‌ ಸರಣಿಯ ವೇಳೆ ಇವರು ಒಟ್ಟಾರೆ ದಾಖಲೆಯನ್ನು ಸರಿಗಟ್ಟುವ ಸಾಧ್ಯತೆ ಇದೆ.



13000 ರನ್‌ಗಳನ್ನು ಪೂರ್ಣಗೊಳಿಸಿದ ಜೋ ರೂಟ್‌

ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ ಅವರು ಇದೇ ಪಂದ್ಯದಲ್ಲಿ 44 ಎಸೆತಗಳಲ್ಲಿ 34 ರನ್‌ಗಳನ್ನು ಕಲೆ ಹಾಕಿದರು. ಇವರು ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಅವರು 28 ರನ್‌ ಗಳನ್ನು ಗಳಿಸುತ್ತಿದ್ದಂತೆ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 13000 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್‌ ಕಾಲಿಸ್‌ ಅವರ ದಾಖಲೆಯನ್ನು ಮುರಿದಿದ್ದಾರೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »