Karunadu Studio

ಕರ್ನಾಟಕ

Donald Trump: ಹಾರ್ವರ್ಡ್ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ನಿಷೇಧ; ಟ್ರಂಪ್‌ ನಡೆಗೆ ಕೋರ್ಟ್ ತಡೆ – Kannada News | US Judge Blocks Trump’s Order Barring Harvard From Enrolling Foreign Students


ವಾಷಿಂಗ್ಟನ್‌: ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ (Harvard University) ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿಷೇಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump)ಆದೇಶಕ್ಕೆ ಸ್ಥಳೀಯ ನ್ಯಾಯಾಲಯ ತಡೆಯಾಜ್ಞೆ ತಂದಿದೆ. ಹಾರ್ವರ್ಡ್ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವನ್ನು ರದ್ದುಗೊಳಿಸುವ ಟ್ರಂಪ್ ಆಡಳಿತದ ಕ್ರಮವನ್ನು ಅಮೆರಿಕದ ನ್ಯಾಯಾಧೀಶರು ಶುಕ್ರವಾರ ತಡೆಹಿಡಿದಿದ್ದಾರೆ.

ಶುಕ್ರವಾರದಂದು ಬೋಸ್ಟನ್ ಫೆಡರಲ್ ನ್ಯಾಯಾಲಯದಲ್ಲಿ ಸಲ್ಲಿಸಲಾದ ದೂರಿನಲ್ಲಿ, ಹಾರ್ವರ್ಡ್ ದಾಖಲಾತಿ ರದುಗೊಳಿಸುವುದು ಅಮೆರಿಕ ಸಂವಿಧಾನ ಮತ್ತು ಇತರ ಫೆಡರಲ್ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಎಂದು ಕರೆದಿದೆ. ಸರ್ಕಾರದ ಈ ನಿರ್ಧಾರದಿಂದ ವಿಶ್ವವಿದ್ಯಾನಿಲಯ ಮತ್ತು 7,000 ಕ್ಕೂ ಹೆಚ್ಚು ವೀಸಾ ಹೊಂದಿರುವವರ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ ಎಂದು ದೂರುದಾರರು ಅರ್ಜಿಯಲ್ಲಿ ತಿಳಿಸಿದ್ದಾರೆ.

ಏನಿದು ಟ್ರಂಪ್‌ ಹೊಸ ನೀತಿ?

ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಟ್ರಂಪ್‌ ಆಡಳಿತ ತಡೆ ನೀಡಿದೆ. ಜತೆಗೆ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಸ್ತಿತ್ವದಲ್ಲಿರುವ ಬೇರೆ ಕಾಲೇಜುಗಳು ಅಥವಾ ಶಾಲೆಗಳಿಗೆ ವರ್ಗಾವಣೆ ಆಗಬಹುದಾಗಿದೆ. ಇಲ್ಲವಾದ್ದಲ್ಲಿ ಕಾನೂನಿನ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಎಚ್ಚರಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಗೃಹ ಭದ್ರತಾ ಇಲಾಖೆಯ ತನಿಖೆ ನಡೆಯುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ವಿದೇಶಿ ವಿದ್ಯಾರ್ಥಿಗಳ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಓದುವ ಕನಸು ಭಗ್ನಗೊಂಡಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿ ವೀಸಾ ಹೊಂದಿರುವವರು ನಡೆಸುತ್ತಿರುವ ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಏಪ್ರಿಲ್ 30ರ ಒಳಗಾಗಿ ಸಲ್ಲಿಸುವಂತೆ ಅಮೆರಿಕ ಗೃಹ ಇಲಾಖೆಯು ಈಚೆಗೆ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಸೂಚಿಸಿತ್ತು.

ಹಾರ್ವರ್ಡ್ ವಿಶ್ವವಿದ್ಯಾನಿಲಯವು ಟ್ರಂಪ್‌ ಅವರ ಆಡಳಿತದ ಈ ಕ್ರಮವನ್ನು ಖಂಡಿಸಿದೆ. ಸರ್ಕಾರ ನಮಗೆ ಬೆದರಿಕೆ ಹಾಕುತ್ತಿದೆ ಎಂದು ಅದು ಆರೋಪಿಸಿದೆ. ರ್ಕಾರದ ಕ್ರಮವು ಕಾನೂನುಬಾಹಿರವಾಗಿದೆ. 140 ಕ್ಕೂ ಹೆಚ್ಚು ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಈ ರಾಷ್ಟ್ರವನ್ನು ಶ್ರೀಮಂತಗೊಳಿಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರನ್ನು ಆತಿಥ್ಯ ವಹಿಸುವ ಹಾರ್ವರ್ಡ್‌ನ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ” ಎಂದು ವಿಶ್ವವಿದ್ಯಾನಿಲಯವು ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Modi-Trump Meet: 5ನೇ ಜನರೇಷನ್‌ ಜೆಟ್‌, ಮಿಷನ್‌ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್‌-ಮೋದಿ ಒಪ್ಪಂದಗಳ ಲಿಸ್ಟ್‌ ಇಲ್ಲಿದೆ

ಕಳೆದ ತಿಂಗಳು ಟ್ರಂಪ್‌ ಸರ್ಕಾರ ವಿಶ್ವವಿದ್ಯಾಲಯಕ್ಕೆ ನೀಡುವ 2.2 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿನ ಅನುದಾನಗಳು ಮತ್ತು 60 ಮಿಲಿಯನ್ ಡಾಲರ್ ಒಪ್ಪಂದಗಳನ್ನು ರದ್ದುಗೊಳಿಸಿತ್ತು. ಹಾರ್ವರ್ಡ್‌ಗೆ ಬರೆದ ಪತ್ರದಲ್ಲಿ, ಟ್ರಂಪ್ ಆಡಳಿತವು ವಿಶಾಲವಾದ ಸರ್ಕಾರ ಮತ್ತು ನಾಯಕತ್ವ ಸುಧಾರಣೆಗಳಿಗೆ ಕರೆ ನೀಡಿತು, ಹಾರ್ವರ್ಡ್ ಅರ್ಹತೆ ಆಧಾರಿತ ಪ್ರವೇಶಗಳು ಮತ್ತು ನೇಮಕಾತಿ ನೀತಿಗಳನ್ನು ಸ್ಥಾಪಿಸುವುದರ ಜೊತೆಗೆ ವೈವಿಧ್ಯತೆಯ ಬಗ್ಗೆ ಅಭಿಪ್ರಾಯಗಳ ಕುರಿತು ಅಧ್ಯಯನ ಸಂಸ್ಥೆ, ಅಧ್ಯಾಪಕರು ಮತ್ತು ನಾಯಕತ್ವದ ಲೆಕ್ಕಪರಿಶೋಧನೆಯನ್ನು ನಡೆಸಬೇಕು ಎಂದು ಹೇಳಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »