Karunadu Studio

ಕರ್ನಾಟಕ

Viral Video: ವೇದಿಕೆಯ ಮೇಲೆಯೇ ಕುರ್ಚಿಯಿಂದ ಬಿದ್ದ ವಧು; ವರ ಮಾಡಿದ್ದು ನೋಡಿ ನೆಟ್ಟಿಗರು ಫುಲ್‌ ಶಾಕ್!‌ ವಿಡಿಯೊ ಇದೆ – Kannada News | Viral Video: The bride fell off the chair on the stage


ಬೆಂಗಳೂರು: ಮದುವೆಯೆಂದರೆ ಸಂಭ್ರಮ, ಸಡಗರವಿರುತ್ತದೆ. ಈಗಂತೂ ಸೋಶಿಯಲ್‌ ಮೀಡಿಯಾದಲ್ಲಿ ಮದುವೆಗೆ ಸಂಬಂಧಪಟ್ಟ ಚಿತ್ರ-ವಿಚಿತ್ರವಾದ ವಿಡಿಯೊಗಳು ವೈರಲ್‌ ಆಗುತ್ತಿರುತ್ತವೆ. ವಧು ವೇದಿಕೆ ಮೇಲೆ ಬರುವಾಗ ವರ ಕೈಹಿಡಿದುಕೊಂಡಿದ್ದಕ್ಕೆ ಸಿಟ್ಟಾಗಿ ವಧುವೊಬ್ಬಳು ಎಲ್ಲರ ಎದುರೇ ಆತನ ಮುಖಕ್ಕೆ ಎಂಜಲು ಉಗಿದ ದೃಶ್ಯ ನೆಟ್ಟಿಗರನ್ನು ಶಾಕ್‌ ಆಗಿಸಿತ್ತು. ಇದೀಗ ಮದುವೆ ಮಂಟಪದ ವೇದಿಕೆಯ ಮೇಲೆ ಕುಳಿತ ವಧು ಕುರ್ಚಿ ಸಮೇತ ಕೆಳಕ್ಕೆ ಬಿದ್ದಾಗ ವರ ಮಾತ್ರ ತುಟಿಕ್‌ ಪಿಟಿಕ್‌ ಅನ್ನದೇ ತನಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಸುಮ್ಮನೇ ಕುಳಿತಿದ್ದಾನೆ. ಇದನ್ನು ನೋಡಿ ನೆಟ್ಟಿಗರಂತೂ ಫುಲ್‌ ಶಾಕ್‌ ಆಗಿದ್ದಾರೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ವರನ ಈ ನಡವಳಿಕೆಗೆ ಕಾರಣವೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವೇದಿಕೆ ಮೇಲೆ ನವ ವಧು-ವರರು ಕುಳಿತಿದ್ದರು. ಅದೇನಾಯ್ತೋ ಗೊತ್ತಿಲ್ಲ ವಧು ಕುಳಿತಿದ್ದ ಕುರ್ಚಿ ಉರುಳಿ ಬಿದ್ದಿದ್ದಾಳೆ. ಅತಿಥಿಗಳು ಭಯಭೀತರಾಗಿ ಆಕೆಯ ಸಹಾಯಕ್ಕೆ ಧಾವಿಸಿದರೆ, ವರನು ಮಾತ್ರ ತನ್ನ ಪಾಡಿಗೆ ತಾನು ಕುರ್ಚಿಯ ಮೇಲೆ ಕುಳಿತಿದ್ದನು. ಆತ ಕೆಳಗೆ ಬಿದ್ದ ವಧುವನ್ನು ನೋಡಲು ಸಹ ಎದ್ದೇಳಲಿಲ್ಲ. ವಧು ಬಿದ್ದಿದ್ದಕ್ಕಿಂತ ವರನು ಸುಮ್ಮನೇ ಕುಳಿತ ದೃಶ್ಯ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ…

ಈ ವಿಡಿಯೊ ವೈರಲ್ ಆಗಿ ಈಗಾಗಲೇ 18,133 ಲೈಕ್ಸ್‌ ಬಂದಿದೆ. ನೆಟ್ಟಿಗರು ವರನು ವಧುವಿನ ಬಗ್ಗೆ ಸ್ವಲ್ಪವೂ ಕಾಳಜಿ ತೋರಿಸದಿರುವುದನ್ನು ಕಂಡು ಹಾಸ್ಯಾಸ್ಪದ ರೀತಿಯಲ್ಲಿ ಖಂಡಿಸಿದ್ದಾರೆ.

“ಈ ವರನು ಖಂಡಿತವಾಗಿಯೂ ವಧುವಿನ ಬಗ್ಗೆ ಕೇರ್‌ ಮಾಡುವುದಿಲ್ಲ” ಎಂದು ಒಬ್ಬರು ಬರೆದಿದ್ದಾರೆ. ವರನನ್ನು ನೋಡಿ, ಅವನು ಹೇಗೆ ಕುಳಿತಿದ್ದಾನೆ…ಎದ್ದು ಕೂಡ ನಿಲ್ಲಲಿಲ್ಲ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. “5 ಸ್ಟಾರ್ ತಿನ್ನು, ಏನೂ ಮಾಡಬೇಡ” ಎಂದು ಮೂರನೇ ವ್ಯಕ್ತಿ ಚಾಕೊಲೇಟ್ ಜಾಹೀರಾತನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ. “ವಾವ್… ವರನ ನಿಜವಾದ ಸ್ವಭಾವವು ಮದುವೆಯ ವೇದಿಕೆಯಲ್ಲಿಯೇ ಬಟಾಬಯಲಾಗಿದೆ” ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. “ ಅರೇಂಜ್ ಮ್ಯಾರೇಜ್‍ಗಳು ಭಯಾನಕವಾಗುತ್ತವೆ” ಎಂದು ಇನ್ನೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಮದ್ವೆ ಎಂಜಾಯ್‌ ಮಾಡ್ತಿದ್ದ ವಧುವಿಗೆ ತ್ರಾಸ್‌ ಕೊಟ್ಟ ಕಂದಮ್ಮ; ಈ ವಿಡಿಯೊ ನೋಡಿ.. ಫುಲ್‌ ಫನ್ನಿ ಆಗಿದೆ!

ಈ ಘಟನೆಯು ವರನ ನಡವಳಿಕೆಯ ಬಗ್ಗೆ ಮಾತ್ರವಲ್ಲ, ಸಂಬಂಧಗಳಲ್ಲಿ ಸಹಾನುಭೂತಿ ಮತ್ತು ಗೌರವದ ಬಗ್ಗೆಯೂ ಚರ್ಚೆಯನ್ನು ಹುಟ್ಟುಹಾಕಿದೆ. ಮದುವೆ ಎನ್ನುವುದು ಆಚರಣೆಗಳು ಮತ್ತು ಸಂಪ್ರದಾಯಗಳಿಗಿಂತ ಮಿಗಿಲಾದುದ್ದು. ಅಲ್ಲಿ ಸಂಗಾತಿಗಳಿಬ್ಬರು ಒಬ್ಬರ ಮೇಲೆ ಮತ್ತೊಬ್ಬರು ಕಾಳಜಿ, ಒಡನಾಟ ಮತ್ತು ಪರಸ್ಪರ ಜೊತೆಯಾಗಿರುವುದು ಅವಶ್ಯಕ. ಇದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »