Karunadu Studio

ಕರ್ನಾಟಕ

ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿಗೆ ತಪ್ಪಿದ ಮಣಿಪುರ ಮುಖ್ಯನ್ಯಾಯಮೂರ್ತಿ ಹುದ್ದೆ: ಅಖಿಲ ಕರ್ನಾಟಕ ಕುಳುವ ಮಹಾಸಂಘ, ಬೆಂಗಳೂರು ಅಸಮಾಧಾನ – Kannada News | Justice P B Bajantri denied the post of Chief Justice of Manipur: Akhil Karnataka Kuluva Mahasangh, Bengaluru unhappy


ಬೆಂಗಳೂರು: ಸುಪ್ರೀಂ ಕೋರ್ಟ್ ಇತ್ತೀಚೆಗೆ ಮಣಿಪುರದ ಮುಖ್ಯ ನ್ಯಾಯಮೂರ್ತಿ ನೇಮಕದಲ್ಲಿ ಸೇವಾ ಹಿರಿತವನ್ನು ಪರಿಗಣಿಸಿಲ್ಲ. ಹಿರಿಯ ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರನ್ನು ನಿರ್ಲಕ್ಷಿಸಿ ಮಣಿಪುರದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಅವರಿಗಿಂತ ಕಿರಿಯ ಅಭ್ಯರ್ಥಿಯಾದ ನ್ಯಾಯ ಮೂರ್ತಿ ಕೆಂಪಯ್ಯ ಸೋಮಶೇಖರ್ ಅವರ ನೇಮಕಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೊರಮ, ಕೊರಚ, ಕೊರವ ಸಮುದಾಯಗಳ ಒಕ್ಕೂಟವಾದ ಅಖಿಲ ಕರ್ನಾಟಕ ಕೊಳವ ಮಹಾ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಅಖಿಲ ಕರ್ನಾಟಕ ಕೊಳವ ಮಹಾ ಸಂಘದ ಅಧ್ಯಕ್ಷ ಶಿವಾನಂದ ಎಂ ಭಜಂತ್ರಿ ಮತ್ತು ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ. ಇಬ್ಬರೂ ನ್ಯಾಯಾ ಧೀಶರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರು.

ಇದನ್ನೂ ಓದಿ: Bangalore News: ಭೂತಾನ್‌ನ ಬೋಧನಾ ಸಮುದಾಯಕ್ಕಾಗಿ ಸ್ಯಾಮ್‌ಸಂಗ್ ‘ಗ್ಯಾಲಕ್ಸಿ ಸಬಲೀಕರಣ’ ಇಮ್ಮರ್ಸಿವ್ ಕಾರ್ಯಕ್ರಮ ಪ್ರಾರಂಭ

ಆದರೆ ಸೇವಾ ಪಟ್ಟಿಯಲ್ಲಿ ಕಿರಿಯರಾದ ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಅವರ ಹೆಸರನ್ನು ಮಣಿಪುರ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಇದೇ ಮೇ 15 ರಂದು ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅವರ ಕ್ರಮ ಸಂಖ್ಯೆ 1. ನ್ಯಾಯಮೂರ್ತಿ ಸೋಮ ಶೇಖರ್ ಕ್ರಮ ಸಂಖ್ಯೆ 2. ಅಖಿಲ ಭಾರತ ನ್ಯಾಯಾಧೀಶರ ಹಿರಿತನ, ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರ ಕ್ರಮ ಸಂಖ್ಯೆ 66, ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಅವರ ಕ್ರಮ ಸಂಖ್ಯೆ 105.

ನ್ಯಾ. ಪಿ. ಬಿ. ಬಜಂತ್ರಿ. ಕರ್ನಾಟಕ ರಾಜ್ಯದ “ಕೊರಮ” ಪರಿಶಿಷ್ಟ ಜಾತಿಯ ಅತೀ ಸೂಕ್ಷ್ಮ ಅಲೆಮಾರಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರು. ಭಾರತ ಸ್ವತಂತ್ರ ಪಡೆದು 78 ವರ್ಷಗಳ ಅವಧಿ ಯಲ್ಲಿ ಅತೀ ಸೂಕ್ಷ್ಮ ಅಲೆಮಾರಿ ಕೊರಮ ಜನಾಂಗದ ಪರಿಶಿಷ್ಟ ಜಾತಿಯ ನ್ಯಾಯಾದೀಶ್ ರಾದ ಪಿ ಬಿ ಭಜಂತ್ರಿ ರವರು 2015 ರ ಜನವರಿ 2 ರಂದು ಕರ್ನಾಟಕದ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ನೇಮಕಾತಿ ಆದ ರಾಜ್ಯದ ಏಕೈಕ ನ್ಯಾಯಾಧೀಶರಾಗಿದ್ದಾರೆ ಎಂದು ತಿಳಿಸಿದ್ದಾರೆ.

ನ್ಯಾಯಮೂರ್ತಿ ಕೆಂಪಯ್ಯ ಸೋಮಶೇಖರ್ ಅವರು ಎಸ್‌ಸಿ ಅಭ್ಯರ್ಥಿಗಳಲ್ಲಿ ಕಿರಿಯರಾಗಿದ್ದಾರೆ. ಸುಪ್ರೀಂ ಕೋರ್ಟ್ ಅತ್ಯಂತ ಹಿರಿಯ ಮತ್ತು ಅತೀ ಸೂಕ್ಷ್ಮ ಪರಿಶಿಷ್ಟ ಜಾತಿಯ ಅಲೆಮಾರಿ ಸಮು ದಾಯದ ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರ ಹಿರಿತನವನ್ನು ಕಡೆಗಣಿಸಲಾಗಿದೆ. ಮಣಿಪುರದ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡುವುದು ಸಂಪೂರ್ಣವಾಗಿ ಅನಿಯಂತ್ರಿತ ವಾಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನ ಪ್ರಕ್ರಿಯೆಯು ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರಿಗೆ ಅನ್ಯಾಯ ಮಾಡಿದೆ. ನ್ಯಾಯಮೂರ್ತಿ ಪಿ ಬಿ ಬಜಂತ್ರಿ ಅವರನ್ನು ಮಣಿಪುರದ ಮುಖ್ಯ ನ್ಯಾಯ ಮೂರ್ತಿ ಹುದ್ದೆಗೆ ಉಮೇದುವಾರಿಕೆಯನ್ನು ದಯೆಯಿಂದ ಮರುಪರಿಶೀಲಿಸುವಂತೆ ಮತ್ತು ಅವರಿಗೆ ನಿರ್ದಿಷ್ಟವಾಗಿ ಮತ್ತು ಒಟ್ಟಾರೆಯಾಗಿ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »