Karunadu Studio

ಕರ್ನಾಟಕ

Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ರೈಡ್‌, 30ಕ್ಕೂ ಹೆಚ್ಚು ಮಂದಿ ವಶಕ್ಕೆ – Kannada News | rave party near devanahalli police raid and 30 persons held


ಬೆಂಗಳೂರು: ದೇವನಹಳ್ಳಿ (Devanahalli) ಬಳಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ರೇವ್​ ಪಾರ್ಟಿ ನಡೀತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ ತಾಲೂಕಿನ ಕನ್ನಮಂಗಲ ಗ್ರಾಮದ ಬಳಿ ಪಾರ್ಮ್ ಹೌಸ್​ನಲ್ಲಿ ರೇವ್ ಪಾರ್ಟಿ ನಡೀತಿತ್ತು. ರಾತ್ರಿಯಿಂದ ಬೆಳಗಿನ ಜಾವದ ತನಕ ರೇವ್ ಪಾರ್ಟಿ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ರೇವ್ ಪಾರ್ಟಿಯಲ್ಲಿ 30ಕ್ಕೂ ಹೆಚ್ಚು ಯುವಕ ಯುವತಿಯರು ಮೈ ಮರೆತಿದ್ದುದು ಕಂಡುಬಂದಿದೆ.

ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವಕ-ಯುವತಿಯರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯುವಕ ಯುವತಿಯರ ವಿಚಾರಣೆ ಅಂತ್ಯದ ಬಳಿಕ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ಪೊಲೀಸ್ ವ್ಯಾನ್‌ನಲ್ಲಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಮೆಡಿಕಲ್ ಚೆಕ್​ ಅಪ್ ಕೂಡ ಮಾಡಿಸಿದ್ದಾರೆ. ಮೆಡಿಕಲ್ ಟೆಸ್ಟ್ ಬಳಿಕ ಎಲ್ಲರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕನ್ನಮಂಗಲ ಬಳಿ ಮುಂಜಾನೆವರೆಗೂ ರೇವ್ ಪಾರ್ಟಿ ನಡೆದಿದ್ದು, ಇದು ನಡೆದ ಫಾರ್ಮ್‌ ಹೌಸ್‌ ಪ್ರಭಾವಿ ರಿಯಲ್‌ ಎಸ್ಟೇಟ್‌ ಮಾಲಿಕರಿಗೆ ಸೇರಿದೆ ಎಂದು ತಿಳಿದುಬಂದಿದೆ. ರೇವ್‌ ಪಾರ್ಟಿಯಲ್ಲಿ ಆಲ್ಕೋಹಾಲ್‌ ಸೇರಿದಂತೆ ಸಾಕಷ್ಟು ಮಾದಕ ದ್ರವ್ಯ ಕಂಡುಬಂದಿದೆ. ಇವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವ್ಹೀಲಿಂಗ್‌ ಮಾಡಿದ ಪುಂಡರು ಪೊಲೀಸ್‌ ವಶಕ್ಕೆ

ಮಂಡ್ಯ: ವ್ಹೀಲಿಂಗ್‌ ಮಾಡಿದ ಯುವಕರು ಪೊಲೀಸರ ಅತಿಥಿಯಾದ ಘಟನೆ ಮಂಡ್ಯದ ಶ್ರೀನಿವಾಸಪುರ ಗೇಟ್ ಬಳಿ ನಡೆದಿದೆ. ಮಂಡ್ಯದ ಗುತ್ತಲು ಬಡಾವಣೆಯ ಸಾದಿಕ್ ಪಾಷ, ವ್ಹೀಲಿಂಗ್ ಮಾಡಿದ ಯುವಕ. ಹೆಲ್ಮೆಟ್ ಇಲ್ಲದೆ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಸಾದಿಕ್ ಪಾಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾದಿಕ್ ವ್ಹೀಲಿಂಗ್​ ಮಾಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯವನ್ನು ಆಧರಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು, ಆರೋಪಿ ಸಾದಿಕ್ ವಿರುದ್ಧ ಕ್ರಮ ಕೈಗೊಂಡು, ಮಂಜೇಶ್ವರಿ ಗ್ರಾಮಾಂತರ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Murder Case: ಹಳೆ ದ್ವೇಷ, ಚೂರಿಯಿಂದ ಇರಿದು ಯುವಕನ ಭೀಕರ ಹತ್ಯೆ



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »