Karunadu Studio

ಕರ್ನಾಟಕ

Bomb Blast Attempt: ಅಮೃತಸರದಲ್ಲಿ ಸ್ಫೋಟಕ್ಕೆ ಸಂಚು; ಗಾಯಗೊಂಡಿದ್ದ ಶಂಕಿತ ಬಬ್ಬರ್ ಖಾಲ್ಸಾದ ಉಗ್ರ ಸಾವು – Kannada News | Suspected Babbar Khalsa Terrorist Killed In Amritsar Blast, Probe On


ಚಂಡೀಗಢ: ಪಂಜಾಬ್‌ನ (Punjab) ಅಮೃತಸರದಲ್ಲಿ ಬಾಂಬ್‌ ಸ್ಫೋಟಕ್ಕೆ (Bomb Blast Attempt) ಯತ್ನಿಸಿದ್ದ ವ್ಯಕ್ತಿಯೊಬ್ಬನ ಕೈಯಲ್ಲೇ ಅದು ಸ್ಫೋಟಗೊಂಡು ಗಾಯ ಗೊಂಡಿದ್ದನು. ಇದೀಗ ಆತ ಇದೀಗ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಶಂಕಿತ ಭಯೋತ್ಪಾದಕನನ್ನು ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ ಉಗ್ರ ಎಂದು ಹೇಳಲಾಗಿದೆ. ಅಮೃತಸರದಲ್ಲಿ ಸ್ಫೋಟ ಸಂಭವಿಸಿದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಅಮೃತಸರ ಗ್ರಾಮೀಣ ಎಸ್‌ಎಸ್‌ಪಿ ಮಣಿಂದರ್ ಸಿಂಗ್ ತಿಳಿಸಿದ್ದಾರೆ.

ಆರೋಪಿಯು ಸ್ಫೋಟಕಗಳ ಸರಕನ್ನು ಸ್ವೀಕರಿಸಲು ಬಂದಿದ್ದ ಭಯೋತ್ಪಾದಕ ಸಂಘಟನೆಯ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಫೋಟಕವನ್ನು ಸರಿಯಾಗಿ ನಿರ್ವಹಿಸದ ಕಾರಣ ಆತನ ಕೈಯಲ್ಲೇ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಬ್ಬರ್ ಖಾಲ್ಸಾ ಮತ್ತು ಐಎಸ್ಐ ಪಂಜಾಬ್‌ನಲ್ಲಿ ಸಕ್ರಿಯವಾಗಿದೆ. ಈಗ ಸಾವನ್ನತ್ತಿದ್ದ ಶಂಕಿತ ಉಗ್ರ ಬಬ್ಬರ್ ಖಾಲ್ಸಾದ ಸದಸ್ಯನಾಗಿರುವ ಸಾಧ್ಯತೆ ಇದೆ ಎಂದು ಎಂದು ಡಿಐಜಿ (ಗಡಿ ಶ್ರೇಣಿ) ಸತೀಂದರ್ ಸಿಂಗ್ ಹೇಳಿದ್ದಾರೆ.

ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು.ಈ ಘಟನೆ ನಡೆದ ಪ್ರದೇಶವು ಅಮೃತಸರ ಗ್ರಾಮೀಣ ಪೊಲೀಸರ ವ್ಯಾಪ್ತಿಗೆ ಬರುತ್ತದೆ.

ಏಪ್ರಿಲ್‌ನಲ್ಲಿ ಪಂಜಾಬ್‌ ರಾಜ್ಯದ ಜಲಂಧರ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಹೊರಗೆ ಭಾರೀ ಸ್ಫೋಟ ಸಂಭವಿಸಿತ್ತು. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದರು. ರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟದ ಶಬ್ಧ ಕೇಳಿಸಿತು. ಈ ವೇಳೆ ಎಲ್ಲರೂ ಮಲಗಿದ್ದೆವು. ಭೂಮಿಯೇ ನಡುಗಿದ ಶಬ್ಧ ಕೇಳಿಸಿತು. ನಂತರವೇ ಸ್ಫೋಟ ಎಂಬ ವಿಚಾರ ನನ್ನ ಗಮನಕ್ಕೆ ಬಂದಿತು. ಬಳಿಕ ನನ್ನ ಗನ್ ಮ್ಯಾನ್ ಅನ್ನು ಪೊಲೀಸ್ ಠಾಣೆಗೆ ಕಳುಹಿಸಿದೆ. ಸಿಸಿಟಿವಿ ತನಿಖೆ ನಡೆಸಲಾಗುತ್ತಿದೆ. ವಿಧಿವಿಜ್ಞಾನ ತಜ್ಞರು ಸಹ ಸ್ಥಳದಲ್ಲಿದ್ದಾರೆಂದು ಬಿಜೆಪಿ ನಾಯಕ ಮನೋರಂಜನ್ ಅವರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Bomb Blast Attempt: ತಪ್ಪಿದ ಭಾರೀ ದುರಂತ; ಬಾಂಬ್‌ ಸ್ಫೋಟಕ್ಕೆ ಯತ್ನ; ಕಿಡಿಗೇಡಿಯ ಕೈಯಲ್ಲೇ ಬ್ಲಾಸ್ಟ್‌

ನಂತರ ತನಿಖೆ ನಡೆಸಿ ಗ್ರೇನೇಡ್‌ ದಾಳಿ ಸಂಚುಕೋರನನ್ನು ಪೊಲೀಸರು ಬಂಧಿಸಿದ್ದರು. ಆರೋಪಿಯು ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಜೊತೆ ಲಿಂಕ್‌ ಹೊಂದಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿತ್ತು. ಈತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಆಪ್ತ ಸಹಚರ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬೇಕಾಗಿರುವ ಆರೋಪಿ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »