Karunadu Studio

ಕರ್ನಾಟಕ

Visa cancellation: ಕೋರ್ಸ್‌ ಡ್ರಾಪ್‌ ಔಟ್‌ ಮಾಡಿದ್ರೆ ವೀಸಾ ಬ್ಯಾನ್‌; ವಿದೇಶಿ ವಿದ್ಯಾರ್ಥಿಗಳಿಗೆ ಅಮೆರಿಕ ಎಚ್ಚರಿಕೆ – Kannada News | US warns Indian, foreign students, threatens visa cancellation for dropping out, skipping classes


ವಾಷಿಂಗ್ಟನ್‌: ಹಾರ್ವರ್ಡ್ ವಿಶ್ವವಿದ್ಯಾಲಯವು (Harvard University ) ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಾಖಲಾತಿಯನ್ನು ನಿಷೇಧಿಸಿತ್ತು. (Visa cancellation) ಇದೀಗ ಮೆರಿಕವು ದೇಶದಲ್ಲಿರುವ ಭಾರತೀಯ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ಹೊಸ ಎಚ್ಚರಿಕೆ ನೀಡಿದೆ. ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಹಂಚಿಕೊಂಡ ಇತ್ತೀಚಿನ ಪ್ರಕಟಣೆಯ ಪ್ರಕಾರ, ವಿದೇಶಿ ವಿದ್ಯಾರ್ಥಿಗಳು ತರಗತಿಗಳಿಗೆ ನಿರಂತರವಾಗಿ ಗೈರು ಹಾಜರಾದರೆ, ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಕೊಂಡವರ ವೀಸಾವನ್ನು ರದ್ದುಗೊಳಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿದ್ಯಾರ್ಥಿಗಳು ತಮ್ಮ ಕೋರ್ಸ್‌ಗಳನ್ನು ಅರ್ಧಕ್ಕೇ ತೊರೆದು ವಿಶ್ವವಿದ್ಯಾಲಯ ಹೋದರೆ ಅಂತವರ ವೀಸಾವನ್ನು ರದ್ದುಗೊಳಿಸಲಾಗುತ್ತದೆ ಎಂದು ಅಮೆರಿಕ ಆಡಳಿತ ಹೇಳಿದೆ. ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ಯಾವಾಗಲೂ ನಿಮ್ಮ ವೀಸಾದ ನಿಯಮಗಳನ್ನು ಪಾಲಿಸಿ ಮತ್ತು ನಿಮ್ಮ ವಿದ್ಯಾರ್ಥಿ ಸ್ಥಿತಿಯನ್ನು ಕಾಪಾಡಿಕೊಳ್ಳಿ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಅಮೆರಿಕ ಸರ್ಕಾರವು ಪ್ರಮುಖ ಗಡೀಪಾರು ಕಾರ್ಯಾಚರಣೆಯನ್ನು ನಡೆಸಿದ ನಂತರ ಈ ಎಚ್ಚರಿಕೆ ಬಂದಿದೆ. ಈ ತಿಂಗಳ ಆರಂಭದಲ್ಲಿ, ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ (ICE), ಅಮೆರಿಕದಲ್ಲಿ ಐಚ್ಛಿಕ ಪ್ರಾಯೋಗಿಕ ತರಬೇತಿ (OPT) ವೀಸಾಗಳಲ್ಲಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿತ್ತು. ಅವರು ತಮ್ಮ OPT ಪ್ರಾರಂಭಿಸಿದ 90 ದಿನಗಳ ಒಳಗೆ ತಮ್ಮ ಉದ್ಯೋಗವನ್ನು ವರದಿ ಮಾಡದಿದ್ದರೆ, ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕರ ಮಾಹಿತಿ ವ್ಯವಸ್ಥೆಯಲ್ಲಿ (SEVIS) ಅವರ ಕಾನೂನು ಸ್ಥಾನಮಾನವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Asaduddin Owaisi: “ನಕಲು ಮಾಡಲೂ ಬುದ್ಧಿ ಇಲ್ಲ”; ಚೀನಾದ ಫೋಟೋ ಬಳಕೆಗೆ ಪಾಕಿಸ್ತಾನವನ್ನು ಟೀಕಿಸಿದ ಓವೈಸಿ

ಡೊನಾಲ್ಡ್‌ ಟ್ರಂಪ್‌ (Donald Trump) ಅಮೆರಿಕದ ಅಧ್ಯಕ್ಷರಾಗಿ ಆಡಳಿತದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ, ಹಾಗೂ ಕೆಲ ಪ್ರತಿಭಟನೆಗಳ ಕುರಿತಾಗಿ ತನಿಖೆ ನಡೆಯುತ್ತಿದೆ. ಪ್ಯಾಲಸ್ತೀನ್‌ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಭಾರತ ಸೇರಿದಂತೆ ಹಲವು ದೇಶಗಳ ವಿದ್ಯಾರ್ಥಿಗಳನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ನಂತರ ವಿಶ್ವ ವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ನಿಷೇಧ ಹೇರಲಾಗಿತ್ತು. ಇದಕ್ಕೂ ಮೊದಲು ಟ್ರಂಪ್‌ ಸರ್ಕಾರ ವಿಶ್ವವಿದ್ಯಾಲಯಕ್ಕೆ ನೀಡುವ 2.2 ಶತಕೋಟಿ ಡಾಲರ್ ಗಿಂತಲೂ ಹೆಚ್ಚಿನ ಅನುದಾನಗಳು ಮತ್ತು 60 ಮಿಲಿಯನ್ ಡಾಲರ್ ಒಪ್ಪಂದಗಳನ್ನು ಸ್ಥಗಿತಗೊಳಿತ್ತು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »