Karunadu Studio

ಕರ್ನಾಟಕ

Income Tax Return: ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೆ ಗುಡ್‌ ನ್ಯೂಸ್‌ ; ಕೊನೆ ದಿನಾಂಕ ವಿಸ್ತರಿಸಿದ ಇಲಾಖೆ – Kannada News | ITR filing last date extended from July 31, 2025, for FY 2024-25 (AY 2025-26): Check the new date here


ನವದೆಹಲಿ: ಆದಾಯ ತೆರಿಗೆ ಇಲಾಖೆಯು (Income Tax Return) 2024-25ನೇ ಹಣಕಾಸು ವರ್ಷ (AY 2025-26) ಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31, 2025 ರಿಂದ ಸೆಪ್ಟೆಂಬರ್ 15, 2025 ರವರೆಗೆ ಅಂತಿಮ ದಿನಾಂಕವನ್ನು ವಿಸ್ತರಿಸಿದೆ. ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳ ಅಧಿಸೂಚನೆಯನ್ನು ನೀಡುವಲ್ಲಿ ವಿಳಂಬವಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತು ಆದಾಯ ಇಲಾಖೆ ಅಧಿಕೃತವಾಗಿ ಟ್ವೀಟ್‌ ಮಾಡಿ ತಿಳಿಸಿದೆ. “ದಯವಿಟ್ಟು ತೆರಿಗೆದಾರರೇ ಗಮನಿಸಿ! CBDT ಜುಲೈ 31, 2025 ರೊಳಗೆ ಸಲ್ಲಿಸಬೇಕಾದ ITR ಗಳ ಸಲ್ಲಿಕೆಯ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಅಂತಿಮ ದಿನಾಂಕ ವಿಸ್ತರಣೆಗೊಂಡಿರುವುದರಿಂದ ತೆರಿಗೆ ಪಾವತಿಸುವವರಿಗೆ ಅನುಕೂಲಕರವಾಗಲಿದೆ. ಸಾಮಾನ್ಯವಾಗಿ, ಐಟಿಆರ್ ಫೈಲಿಂಗ್ ಪ್ರಕ್ರಿಯೆಯು ಮೌಲ್ಯಮಾಪನ ವರ್ಷದ ಏಪ್ರಿಲ್ 1 ರಂದು ಪ್ರಾರಂಭವಾಗುತ್ತದೆ. ಅದರಂತೆ, ಹಣಕಾಸು ವರ್ಷ 2024–25 ಕ್ಕೆ, ಫೈಲಿಂಗ್ ಏಪ್ರಿಲ್ 1, 2025 ರಂದು ಪ್ರಾರಂಭವಾಗಬೇಕಿತ್ತು. ಆದಾಗ್ಯೂ, ಈ ವರ್ಷ, ವಿಳಂಬವಾಗಿತ್ತು.

ಸಂಬಳ ಪಡೆಯುವ ಉದ್ಯೋಗಿಗಳಿಗೆ ಲಾಭ!

ಜುಲೈ 31, 2025 ರ ಐಟಿಆರ್ ಫೈಲಿಂಗ್, ಹೆಚ್ಚಿನ ಸಾಮಾನ್ಯ ತೆರಿಗೆದಾರರಿಗೆ ಅನ್ವಯಿಸುತ್ತದೆ. ಇದರಲ್ಲಿ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗಿಗಳು ಮತ್ತು ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧಿಸುವ ಅಗತ್ಯವಿಲ್ಲದ ಎಲ್ಲಾ ತೆರಿಗೆದಾರರು ಸೇರಿದ್ದಾರೆ. ಸಂಬಳ ಪಡೆಯುವ ಉದ್ಯೋಗಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೆಚ್ಚುವರಿಯಾಗಿ 46 ದಿನಗಳ ಕಾಲಾವಕಾಶ ಪಡೆಯುತ್ತಾರೆ. ಕೊನೆಯ ದಿನಾಂಕದೊಳಗೆ ಐಟಿಆರ್ ಸಲ್ಲಿಸದಿದ್ದರೆ 5,000 ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ.

ಫಾರ್ಮ್ 16 ಇಲ್ಲದೇಯೂ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು!

ಈ ಸುದ್ದಿಯನ್ನೂ ಓದಿ: ITR Filing 2025: ಫಾರ್ಮ್ 16 ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದಾ? ಅದು ಹೇಗೆ ಇಲ್ಲಿದೆ ಮಾಹಿತಿ

ಹೌದು ಫಾರ್ಮ್ 16 ಇಲ್ಲದೆಯೂ ಸಹ ಐಟಿಆರ್ ಸಲ್ಲಿಸಬಹುದಾಗಿದೆ. ಫಾರ್ಮ್ 16 ನಿಮ್ಮ ಉದ್ಯೋಗದಾತರು ನೀಡುವ ಟಿಡಿಎಸ್ ಪ್ರಮಾಣಪತ್ರವಾಗಿದ್ದು, ನಿಮ್ಮ ವಾರ್ಷಿಕ ಸಂಬಳ, ತೆರಿಗೆ ಕಡಿತಗಳು ಮತ್ತು 80C ಮತ್ತು 80D ನಂತಹ ವಿಭಾಗಗಳ ಅಡಿಯಲ್ಲಿ ವಿನಾಯಿತಿಗಳ ವಿವರಗಳನ್ನು ಒಳಗೊಂಡಿದೆ. ಫಾರ್ಮ್ 16 ಇಲ್ಲದಿದ್ದರೆ, ಫಾರ್ಮ್ 26AS ಅತ್ಯಗತ್ಯವಾಗುತ್ತದೆ. ಇದು ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆಯ ಮೊತ್ತ (TDS), ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (TCS).ಇದು ಪಾವತಿಸಿದ ಮುಂಗಡ ತೆರಿಗೆಯ ವಿವರಗಳು ಮತ್ತು ಮಾಡಿದ ಯಾವುದೇ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ತೋರಿಸುವ ತೆರಿಗೆ ಕ್ರೆಡಿಟ್ ಹೇಳಿಕೆಯಾಗಿದೆ. ಇದರಿಂದ ಸುಲಭವಾಗಿ ಆದಾಯ ತೆರಿಗೆ ಪಾವತಿಸಬಹುದಾಗಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »