Karunadu Studio

ಕರ್ನಾಟಕ

Geetha Vishnu: ಟಿಟಿಡಿ ಮಾಜಿ ಅಧ್ಯಕ್ಷನ ಮಗ ಗೀತಾ ವಿಷ್ಣು ಬೆಂಗಳೂರಿನಲ್ಲಿ ಪುಂಡಾಟಿಕೆ, ದೂರು ದಾಖಲು – Kannada News | bengaluru assault case booked on Former TTD chairman Adikesavulu Naidu’s grandson geetha vishnu


ಬೆಂಗಳೂರು: ಬೆಂಗಳೂರಿನಲ್ಲಿರುವ (Bengaluru) ಶಾಂಗ್ರಿ-ಲಾ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ (Assault Case) ನಡೆಸಿದ ಆರೋಪದ ಮೇಲೆ ಗೀತಾ ವಿಷ್ಣು (Geetha Vishnu) ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈತ ತಿರುಮಲ ತಿರುಪತಿ ದೇವಸ್ಥಾನದ (TTD) ಮಾಜಿ ಅಧ್ಯಕ್ಷ ಮತ್ತು ಮಾಜಿ ಸಂಸದ ಡಿ ಕೆ ಆದಿಕೇಶವುಲು ನಾಯ್ಡು ಅವರ ಮೊಮ್ಮಗ. ಮೇ 19ರಂದು ವಿಷ್ಣು (35) ತನ್ನ ಮೇಲೆ ಹಲ್ಲೆ ನಡೆಸಿ, ತಳ್ಳಿ, ಬೆನ್ನಿಗೆ ಗಾಯಗೊಳಿಸಿದ್ದಾರೆ ಎಂದು ಉಮರ್ ನಗರ ನಿವಾಸಿ ಮತ್ತು ಹೋಟೆಲ್‌ನ ಕ್ಲಬ್‌ನ ಸದಸ್ಯ ಸೈಯದ್ ಸಾದಿಕ್ ಎಚ್ (40) ಆರೋಪಿಸಿದ್ದರು.

ಗೀತಾ ವಿಷ್ಣು ತನ್ನ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಸಾದಿಕ್ ರಾತ್ರಿ 10.45 ರ ಸುಮಾರಿಗೆ ಪೊಲೀಸ್ ದೂರು ದಾಖಲಿಸಿದ್ದಾರೆ. ಗೀತಾ ವಿಷ್ಣು ರಾತ್ರಿ 11.30 ಕ್ಕೆ ಸೈಯದ್ ಸಾದಿಕ್ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾನೆ. ಗೀತಾ ವಿಷ್ಣು ಪ್ರಕಾರ, ಜಿಮ್ ಸೆಷನ್ ನಂತರ ಬಟ್ಟೆ ಬದಲಾಯಿಸುತ್ತಿದ್ದಾಗ, ಸೈಯದ್ ಸಾದಿಕ್ ಮೇಲೆ ಅವರ ಬೆವರು ಸಿಡಿದಿತ್ತು. ಇದರಿಂದ ಕೋಪಗೊಂಡ ಸೈಯದ್ ಸಾದಿಕ್, ಗೀತಾ ವಿಷ್ಣುವಿನ ಕಣ್ಣಿಗೆ ಹೊಡೆದ ಮತ್ತು ಜಿಮ್‌ಗೆ ಮತ್ತೆ ಬಂದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ಗೀತಾ ವಿಷ್ಣು ತಮ್ಮ ದೂರಿನಲ್ಲಿ ಹೇಳಿದ್ದಾನೆ.

“ಎರಡೂ ದೂರುಗಳ ಆಧಾರದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಘಟನೆ ರಾತ್ರಿ 8 ರಿಂದ 9 ಗಂಟೆಯ ನಡುವೆ ನಡೆದಿದೆ ಎಂದು ವರದಿಯಾಗಿದೆ. ತನಿಖೆ ನಡೆಯುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೀತಾ ವಿಷ್ಣು ವಿವಾದ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. 2017ರಲ್ಲಿ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ತನ್ನ ಎಸ್‌ಯುವಿಯನ್ನು ಮತ್ತೊಂದು ವಾಹನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೈನ್ ಬೋರ್ಡ್‌ಗೆ ಡಿಕ್ಕಿ ಹೊಡೆಸಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಗಾಯಗೊಂಡಿದ್ದರು.

ನಂತರ ಪೊಲೀಸರು ಗೀತಾ ವಿಷ್ಣು ಗಾಂಜಾ ಸೇವಿಸಿದ್ದ ಎಂದು ಹೇಳಿದ್ದರು. ಸಣ್ಣಪುಟ್ಟ ಗಾಯಗಳೊಂದಿಗೆ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದ ಗೀತಾ ವಿಷ್ಣು ಸೆಪ್ಟೆಂಬರ್ 29, 2017ರಂದು ಆಸ್ಪತ್ರೆಯ ಸಿಬ್ಬಂದಿಯ ಸಹಾಯದಿಂದ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. 2022ರಲ್ಲಿ ಗೀತಾ ವಿಷ್ಣುವಿನ ತಂದೆ, ಕೈಗಾರಿಕೋದ್ಯಮಿ ಡಿ ಕೆ ಆದಿ ಶ್ರೀನಿವಾಸ್ ನಾಯ್ಡು ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಂಧಿಸಿತ್ತು.

ಇದನ್ನೂ ಓದಿ: Madenuru Manu: ಅತ್ಯಾಚಾರ, ಗರ್ಭಪಾತ, ಹಲ್ಲೆ, ಕೊಲೆ ಬೆದರಿಕೆ: ನಟ ಮಡೆನೂರು ಮನು ಮೇಲೆ ನಟಿ ದೂರು



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »