Karunadu Studio

ಕರ್ನಾಟಕ

Shakira: ಲೈವ್‌ ಶೋ ವೇಳೆ ವೇದಿಕೆಯಲ್ಲೇ ಬಿದ್ದ ಖ್ಯಾತ ಗಾಯಕಿ- ವಿಡಿಯೊ ವೈರಲ್! – Kannada News | Shakira Falls On Stage Video goes Viral


ವಾಷಿಂಗ್ಟನ್‌: ಕೊಲಂಬಿಯಾ ಮೂಲದ ಖ್ಯಾತ ಗಾಯಕಿ ಶಕೀರಾ (Singer Shakira) ತಮ್ಮ ಅದ್ಭುತ ನೃತ್ಯ ಮತ್ತು ಗಾಯನದ ಮೂಲಕ ವಿಶ್ವಾದ್ಯಂತ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ನೈಟ್ ಕ್ಲಬ್ ,ಇತರ ಇವೆಂಟ್ ಮೂಲಕ ಲೈವ್ ಶೋ ನೀಡುವ ಇವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಬಹಳ ಆ್ಯಕ್ಟಿವ್ ಇದ್ದಾರೆ. ಇತ್ತೀಚೆಗಷ್ಟೇ ಇವರು ಲಾಸ್ ಮುಜೆರೆಸ್ ಯಾ ನೋ ಲೊರಾನ್ ಪ್ರವಾಸಕ್ಕೆಂದು ತೆರಳಿದ್ದು ಅಲ್ಲಿ ಸಿಂಗಿಂಗ್ ಲೈವ್ ಶೋ ನೀಡಿದ್ದಾರೆ. ಇಲ್ಲಿ ಹಾಡು ಹಾಡಿ ನೃತ್ಯ ಮಾಡುತ್ತಾ ಲೈವ್ ಶೋ ನೀಡುತ್ತಿರುವಾಗಲೇ ಕಾಲು ಜಾರಿ ಕೆಳಗೆ ಬಿದ್ದಿದ್ದು ಇವರ ವಿಡಿಯೋ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಗಾಯಕಿ, ಬರಹಗಾರ್ತಿ ಶಕೀರಾ ಅವರಿಗೆ ವಯಸ್ಸು 48 ಆಗಿದ್ದರೂ ಈಗಲೂ ಟೀನೇಜ್ ಹುಡುಗಿಯಂತೆ ಕಾಣುವ ಇವರು ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಮೇ 20ರಂದು ಲಾಸ್ ಮುಜೆರೆಸ್ ಯಾ ನೋ ಲೊರಾನ್ ನ ಪ್ರವಾಸ ಸ್ಥಳಕ್ಕೆ ತೆರಳಿ ಅಲ್ಲಿನ ಕ್ವಿಬೆಕ್ ನ ಮಾಂಟ್ರಿಯಲ್ ನಲ್ಲಿರುವ ಬೆಲ್ ಸೆಂಟರ್‌ನಲ್ಲಿ ಲೈವ್ ಶೋ ನೀಡುವಾಗಲೇ ವೇದಿಕೆ ಮೇಲೆ ಜಾರಿ ಬಿದ್ದು ಎಡವಟ್ಟು ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

ಶಕೀರಾ ವಿಡಿಯೊ ಇಲ್ಲಿದೆ

ವೈರಲ್ ವಿಡಿಯೋದಲ್ಲಿ ಶಕೀರಾ ತನ್ನ ಜನಪ್ರಿಯ ಹಾಡಾದ ಎನಿವರ್, ವೇರ್‌ವೇರ್ ಅನ್ನೊ ಹಾಡು ಹಾಡಿ ನೃತ್ಯ ಮಾಡು ತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ವೇದಿಕೆಯ ಮೇಲೆ ಜಾರಿ ಬಿದ್ದಿದ್ದಾರೆ. ಅವರು ಕಾಲು ಸ್ಕಿಡ್ ಆಗಿ ಬಿದ್ದರೂ ಕೂಡ ಬಹಳ ಚಾಣಾಕ್ಷತನದಿಂದ ಬಿದ್ದಲ್ಲಿಯೇ ಡ್ಯಾನ್ಸ್ ಸ್ಟೆಪ್ ಹಾಕುತ್ತಾ ಮೇಲೆದಿದ್ದಾರೆ. ಬಳಿಕ ಏನು ಆಗಿಲ್ಲದಂತೆ ಹಾಡನ್ನು ಮುಂದು ವರೆಸಿದ್ದಾರೆ. ಈ ಮೂಲಕ ಲೈವ್ ಪ್ರದರ್ಶನದ ವೇಳೆಯಲ್ಲಿ ಅಭಿಮಾನಿಗಳು ಗೊಂದಲ ಗೊಳ್ಳದಂತೆ ಪರಿಸ್ಥಿತಿ ನಿಭಾಯಿ ಸಿದ್ದಾರೆ..

ಇದನ್ನು ಓದಿ: Viral Video: ಬೆಂಗಳೂರಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ರೊಮ್ಯಾನ್ಸ್; ಸನ್‌ ರೂಫ್‌ ತೆಗೆದು ಯುವತಿಗೆ ಚುಂಬಿಸಿದ ಯುವಕ!

ಇವರ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಾನಾ ಬಗೆಯ ಕಾಮೆಂಟ್ ಹಾಕಿದ್ದಾರೆ‌‌. ಅಭಿಮಾನಿಗಳನ್ನು ರಂಜಿಸಲು ಸದಾ ಸಿದ್ಧ ಇರುವ ಶಕೀರಾ ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗರು ಅದ್ಭುತ ಕಲಾವಿದೆಯ ಚಾಣಕ್ಷತನಕ್ಕೆ ಮೆಚ್ಚಲೇ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶಕೀರಾ ಅವರು 21 ನೇ ಶತಮಾನದ ಆರಂಭದಲ್ಲಿ ಅತ್ಯಂತ ಜನಪ್ರಿಯ ಲ್ಯಾಟಿನ್ ಅಮೇರಿಕನ್ ರೆಕಾರ್ಡಿಂಗ್ ಕಲಾವಿದ ರಲ್ಲಿ ಒಬ್ಬರೆಂಬ ಖ್ಯಾತಿ ಪಡೆದಿದ್ದಾರೆ. ಹಿಪ್ಸ್ ಡೋಂಟ್ ಲೈ ಎಂಬ ಖ್ಯಾತ ಹಾಡಿನ ಮೂಲಕ ವಿಶ್ವಾದ್ಯಂತ ಗುರುತಿಸಲ್ಪ ಟ್ಟಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಆರೋಗ್ಯದ ಸಮಸ್ಯೆ ಇದ್ದ ಕಾರಣ ಪೆರುವಿನ ಲಿಮಾದಲ್ಲಿ ತನ್ನ ಸಂಗೀತ ಕಾರ್ಯಕ್ರಮ ಮುಂದೂಡಿದ್ದರು. ಸದ್ಯ ಅವರ ಆರೋಗ್ಯ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಪುನಃ ಹಾಡಿನ ಮೂಲಕ ಅಭಿಮಾನಿಗಳನ್ನು ಮನೋರಂಜಿಸುತ್ತಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »