Karunadu Studio

ಕರ್ನಾಟಕ

Pralhad Joshi: ಇ ಕಾಮರ್ಸ್‌ ಆಂತರಿಕ ಲೆಕ್ಕ ಪರಿಶೋಧನೆ ಕಡ್ಡಾಯ: ಪ್ರಲ್ಹಾದ್‌ ಜೋಶಿ – Kannada News | Pralhad Joshi E commerce internal audit mandatory says Union Minister Pralhad Joshi


ನವದೆಹಲಿ: ಇ ಕಾಮರ್ಸ್‌ ವೇದಿಕೆಗಳಲ್ಲಿ 13 ಮಾದರಿ ಡಾರ್ಕ್‌ ಪ್ಯಾಟ್ರನ್‌ಗಳನ್ನು ಗುರುತಿಸಿದ್ದು, ವಂಚನೆ ನಿಯಂತ್ರಣಕ್ಕಾಗಿ ಮೂರು ವಿಧದ ಜಾಗೃತಿ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi)‌ ತಿಳಿಸಿದರು. ನವದೆಹಲಿಯಲ್ಲಿ ಮಂಗಳವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿ, ಇ ಕಾಮರ್ಸ್‌ ವೇದಿಕೆ, ಡಿಜಿಟಲ್‌ ವಹಿವಾಟಿನಲ್ಲಿ ವಂಚನೆ ತಡೆಯಲು, ಡಾರ್ಕ್‌ ಪ್ಯಾಟ್ರನ್‌ ಪರಿಹಾರ ಕ್ರಮವಾಗಿ ಆಂತರಿಕ ಲೆಕ್ಕ ಪರಿಶೋಧನೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಗ್ರಾಹಕರ ರಕ್ಷಣೆಗಾಗಿ ಡಾರ್ಕ್‌ ಪ್ಯಾಟ್ರನ್‌ಗಳನ್ನು ವಿಶ್ಲೇಷಿಸಲು, ತೆಗೆದುಹಾಕಲು ಸ್ವಯಂ ಲೆಕ್ಕಪರಿಶೋಧನೆಯನ್ನು ಅವಶ್ಯವಾಗಿ ನಡೆಸುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಇದಲ್ಲದೆ, ಹಲವು ನಿಯಂತ್ರಣ ಕ್ರಮಗಳನ್ನು ಗ್ರಾಹಕ ರಕ್ಷಣಾ ಪ್ರಾಧಿಕಾರ ಕೈಗೊಳ್ಳುತ್ತಿದೆ ಎಂದು ತಿಳಿಸಿದರು. ಎಲ್ಲಾ ಕಂಪನಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಆಂತರಿಕ ಆಡಳಿತ, ಗ್ರಾಹಕ ರಕ್ಷಣಾ ಕಾರ್ಯವಿಧಾನಗಳಲ್ಲಿ ಸಂಯೋಜಿಸಬೇಕು ಎಂದು ಸೂಚನೆ ನೀಡಿದರು.

ಮೂರು ಅಪ್ಲಿಕೇಷನ್‌ಗಳು

ಡಾರ್ಕ್ ಪ್ಯಾಟರ್ನ್‌ ಕುರಿತಂತೆ ಗ್ರಾಹಕರ ರಕ್ಷಣೆಗಾಗಿ IIT BHU ಸಹಯೋಗದೊಂದಿಗೆ ಈಗಾಗಲೇ ಮೂರು ಪ್ರಬಲ ಅಪ್ಲಿಕೇಷನ್‌ಗಳನ್ನು ಸಿದ್ಧಪಡಿಸಲಾಗಿದೆ. ʼಜಾಗೃತಿ ಅಪ್ಲಿಕೇಶನ್ʼ, ʼಜಾಗೋ ಗ್ರಹಕ್ ಜಾಗೋʼ ಮತ್ತು ʼಜಾಗೃತಿ ಡ್ಯಾಶ್‌ಬೋರ್ಡ್ʼ ಅನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ʼಜಾಗೃತಿ ಅಪ್ಲಿಕೇಶನ್ʼ ಗ್ರಾಹಕರು ಇ-ಕಾಮರ್ಸ್ ವೇದಿಕೆಗಳಲ್ಲಿನ ಡಾರ್ಕ್ ಪ್ಯಾಟರ್ನ್‌ಗಳ ಬಗ್ಗೆ ನೇರವಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ಕೆ ವರದಿ ಮಾಡಲು ಮತ್ತು ಅನುಮಾನಾಸ್ಪದ ವೆಬ್‌ಸೈಟ್‌ಗಳನ್ನು ಫ್ಲ್ಯಾಗ್ ಮಾಡಲು ನೆರವಾಗುತ್ತದೆ. ʼಜಾಗೋ ಗ್ರಹಕ್ ಜಾಗೋʼ ಅಪ್ಲಿಕೇಶನ್ ದುರುದ್ದೇಶಪೂರಿತ ಇ ಕಾಮರ್ಸ್‌ ವೇದಿಕೆಗಳಿಂದ ಬಳಕೆದಾರರನ್ನು ರಕ್ಷಿಸುತ್ತದೆ ಮತ್ತು ಗ್ರಾಹಕರು ಭೇಟಿ ನೀಡುವ ಇ-ಕಾಮರ್ಸ್ ಲಿಂಕ್‌ಗಾಗಿ ನೈಜ ಸುರಕ್ಷತಾ ಸ್ಕೋರ್‌ ನೀಡುತ್ತದೆ. ಇನ್ನು, ʼಜಾಗೃತಿ ಡ್ಯಾಶ್‌ಬೋರ್ಡ್ʼ ದೃಢವಾದ ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಸಚಿವರು ವಿವರಿಸಿದರು.

ಈ ಅಪ್ಲಿಕೇಷನ್‌ಗಳನ್ನು ಪರಿಶೀಲಿಸುವ ಮೂಲಕ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಡಾರ್ಕ್ ಪ್ಯಾಟರ್ನ್‌ಗಳ ಕುರಿತು ವಿವರವಾದ ವರದಿ ಸಿದ್ಧಪಡಿಸಿ ನೀಡುತ್ತದೆ. ಇದರಿಂದ ಡಿಜಿಟಲ್ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ. ನಮ್ಮ ಈ ಕ್ರಮ ಆನ್‌ಲೈನ್‌ನಲ್ಲಿ ದಾರಿ ತಪ್ಪಿಸುವ, ಮೋಸಗೊಳಿಸುವ ವಿನ್ಯಾಸ ಪದ್ಧತಿಗಳನ್ನು ಎದುರಿಸುವ ದೃಢ ಸಂಕಲ್ಪವಾಗಿದೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ನವದೆಹಲಿಯ ವಿಜ್ಞಾನ ಭವನದಲ್ಲಿ ಮಧ್ಯಾಹ್ನ, ಪ್ರಮುಖ ಇ-ಕಾಮರ್ಸ್ ಕಂಪನಿಗಳು, ಉದ್ಯಮ ಸಂಘಗಳು, ಸ್ವಯಂ ಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರಮುಖ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ಏರ್ಪಡಿಸಿ, ಆನ್‌ಲೈನ್‌ ವಂಚನೆ ನಿರ್ಮೂಲನೆ ಬಗ್ಗೆ ಸಚಿವ ಪ್ರಲ್ಹಾದ್‌ ಜೋಶಿ ಅವರು ಖುದ್ದು ಸಂವಾದ ನಡೆಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಗ್ರಾಹಕರು ಜಾಗರೂಕರಾಗಿದ್ದಾರೆ ಮತ್ತು ಮಾಹಿತಿ ಉಳ್ಳವರಾಗಿದ್ದಾರೆ. ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಅವರು ಯಾವುದೇ ರೀತಿಯ ಮೋಸ-ವಂಚನೆಯನ್ನು ಸಹಿಸುವುದಿಲ್ಲ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸಹ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಎನ್‌ಸಿಎಚ್‌ನಲ್ಲಿ ದೂರು ಹೆಚ್ಚಳ

ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ (NCH) ಡಾರ್ಕ್ ಪ್ಯಾಟರ್ನ್‌ ಕುರಿತಂತೆ ವ್ಯಾಪಕ ದೂರುಗಳು ದಾಖಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಸಚಿವರು, ಇದರ ವಿರುದ್ಧ ಕಠಿಣ ಕ್ರಮಕ್ಕೆ ಗ್ರಾಹಕ ರಕ್ಷಣಾ ಪ್ರಾಧಿಕಾರ ಹಿಂಜರಿಯುವುದಿಲ್ಲ. ಪ್ರತಿ ಸಂಸ್ತೆಗಳೂ ಮಾರ್ಗಸೂಚಿ ಪಾಲಿಸಬೇಕು ಎಂದು ಇ ಕಾಮರ್ಸ್‌ ಪ್ರಮುಖರಿಗೆ ನಿರ್ದೇಶನ ನೀಡಿದರು.

ಇ ಕಾಮರ್ಸ್‌ ವೇದಿಕೆಗಳಲ್ಲಿ ಡಾರ್ಕ್ ಪ್ಯಾಟರ್ನ್‌ಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ನಿಯಮಿತ ಆಂತರಿಕ ಲೆಕ್ಕಪರಿಶೋಧನೆ ನಡೆಸಲೇಬೇಕು. ಕಂಪನಿಗಳು CCPA ಮಧ್ಯಪ್ರವೇಶಿಸುವವರೆಗೆ ಕಾಯಬಾರದು. ನೋಟಿಸ್‌ ನೀಡಿ ವಂಚನೆ ಮಾದರಿಗಳನ್ನು ತೆಗೆದುಹಾಕಬೇಕು ಎಂದು ಸೂಚನೆ ನೀಡಿದರು.

ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿಧಿ ಖರೆ ಮಾತನಾಡಿ, ಇ ಕಾಮರ್ಸ್‌ ವೇದಿಕೆಗಳಲ್ಲಿ ಡಾರ್ಕ್‌ ಪ್ಯಾಟ್ರನ್‌ಗಳು ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿವೆ. ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತವೆ. ಇದು ಗ್ರಾಹಕರ ನಂಬಿಕೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹಾಗಾಗಿ ಗ್ರಾಹಕರ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ಡಿಜಿಟಲ್ ವಹಿವಾಟು ಪಾರದರ್ಶಕತೆಗೆ ಕ್ರಮ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಜಂಟಿ ಕಾರ್ಯದರ್ಶಿ ಅನುಪಮ್ ಮಿಶ್ರಾ ಮಾತನಾಡಿ, ಡಾರ್ಕ್ ಪ್ಯಾಟರ್ನ್ಸ್ ಮೋಸಗೊಳಿಸುವ ವಿನ್ಯಾಸವಾಗಿದ್ದು, ಇದನ್ನು ಎದುರಿಸಲು ಮೀಸಲಾದ ಮಾರ್ಗಸೂಚಿ ಹೊರಡಿಸಿದ ಮೊದಲ ದೇಶ ಭಾರತವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | ISRO Recruitment 2025: ಇಸ್ರೋದಲ್ಲಿದೆ 320 ಹುದ್ದೆ; ಇಂದೇ ಅಪ್ಲೈ ಮಾಡಿ

ಪ್ರಮುಖ ಇ-ಕಾಮರ್ಸ್ ಕಂಪನಿಗಳಾದ 1mg.com, AIRBNB, Amazon, Apple, Zepto, Booking.com, Ola Electric, Tata Digital, Adidas India, Samsung, Ikigai Law, Indigo Airlines, Ixigo, MakeMyTrip, Mastercard, Meta, Netmeds, Namma Yatri, PharmEasy, Reliance Retail, Rapido, Shiprocket, Snapdeal, Swiggy, Thomas Cook, Uber, Whatsapp, Yatra, Zomato & Blinkit, Flipkart, Google, Justdial, ONDC, ಮತ್ತು Paytm ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅಲ್ಲದೆ, ಪ್ರಮುಖ ಕೈಗಾರಿಕಾ ಸಂಘಗಳಾದ CAIT, CCI, FICCI, NASSCOM, PHDCCI, ಮತ್ತು ಚಿಲ್ಲರೆ ವ್ಯಾಪಾರಿಗಳ ಸಂಘವು ಸ್ವಯಂಸೇವಾ ಗ್ರಾಹಕ ಸಂಸ್ಥೆಗಳು ಮತ್ತು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »