ಮುಲ್ಲಾನ್‌ಪುರ್ (ಚಂಡೀಗಢ): ಇಂದು(ಮೇ 29) ನಡೆಯುವ ಐಪಿಎಲ್(IPL 2025)ನ ಮೊದಲ ಕ್ವಾಲಿಫೈಯರ್‌ನಲ್ಲಿ(RCB vs PBKS Qualifier 1) ಪಂಜಾಬ್ ಕಿಂಗ್ಸ್ ಎದುರು ಆರ್‌ಸಿಬಿ ಕಾದಾಡಲಿದೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರಿಗೆ ಡೇವಿಡ್ ವಾರ್ನರ್(David Warner) ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ವಿರಾಟ್ ಕೊಹ್ಲಿಗೆ ಕೇವಲ 31 ರನ್‌ಗಳ ಅವಶ್ಯಕತೆಯಿದೆ.
ಪ್ರಸ್ತುತ ದಾಖಲೆ ಡೇವಿಡ್ ವಾರ್ನರ್ ಹೆಸರಲ್ಲಿದೆ. ಅವರು 26 ಪಂದ್ಯಗಳಲ್ಲಿ 49.30 ರ ಸರಾಸರಿಯಲ್ಲಿ 1134 ರನ್ ಗಳಿಸಿದ್ದಾರೆ. ಇದರಲ್ಲಿ 13 ಅರ್ಧಶತಕಗಳು ಸೇರಿವೆ. ಕೊಹ್ಲಿ 34 ಪಂದ್ಯಗಳಿಂದ 36.80 ಸರಾಸರಿಯಲ್ಲಿ 1104 ರನ್ ಗಳಿಸಿದ್ದಾರೆ. ವಿಶೇಷವೆಂದರೆ, ಕೊಹ್ಲಿ ಮತ್ತು ವಾರ್ನರ್ ಮಾತ್ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್‌ಗಳ ಗಡಿ ದಾಟಿದ ಆಟಗಾರರು.
ಐಪಿಎಲ್‌ನಲ್ಲಿ ಪಂಜಾಬ್ ವಿರುದ್ಧ ಅತಿ ಹೆಚ್ಚು ರನ್
ಡೇವಿಡ್ ವಾರ್ನರ್- 26 ಪಂದ್ಯಗಳಿಂದ 11345 ರನ್
ವಿರಾಟ್ ಕೊಹ್ಲಿ – 34 ಪಂದ್ಯಗಳಿಂದ 1104* ರನ್
ಶಿಖರ್ ಧವನ್- 26 ಪಂದ್ಯಗಳಿಂದ 894 ರನ್
ರೋಹಿತ್ ಶರ್ಮಾ – 32 ಪಂದ್ಯಗಳಿಂದ 872* ರನ್
ಫಾಫ್ ಡು ಪ್ಲೆಸಿಸ್ – 20 ಪಂದ್ಯಗಳಿಂದ 831* ರನ್
VIRAT KOHLI – Only batter to score 600+ runs in 5 seasons of the IPL. 🤯
3rd consecutive 600+ run season and we’ve still got a couple’ games left. King for every reason! 👑 pic.twitter.com/mUbY3lfdmp
— Royal Challengers Bengaluru (@RCBTweets) May 28, 2025
ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 13 ಇನಿಂಗ್ಸ್‌ಗಳಿಂದ 602* ರನ್ ಬಾರಿಸಿ ಅತ್ಯಧಿಕ ರನ್ ಗಳಿಸಿದ ಪಟ್ಟಿಯಲ್ಲಿ 5ನೇ ಸ್ಥಾನಿಯಾಗಿದ್ದಾರೆ. 679 ರನ್ ಬಾರಿಸಿರುವ ಗುಜರಾತ್ ತಂಡದ ಸಾಯಿ ಸುದರ್ಶನ್ ಅಗ್ರಸ್ಥಾನದಲ್ಲಿದ್ದಾರೆ. ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ ಕೊಹ್ಲಿಗೆ ಅಗ್ರ ಸ್ಥಾನಕ್ಕೇರುವ ಅವಕಾಶ ಲಭಿಸಲಿದೆ.