Karunadu Studio

ಕರ್ನಾಟಕ

Lawrence Bishnoi: ಎನ್‌ಕೌಂಟರ್‌ನಲ್ಲಿ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ನವೀನ್‌ ಕುಮಾರ್‌ನ ಹತ್ಯೆ – Kannada News | Lawrence Bishnoi gang sharpshooter killed in Hapur


ಲಖನೌ: ಲಾರೆನ್ಸ್‌ ಬಿಷ್ಣೋಯ್‌ (Lawrence Bishnoi) ಗ್ಯಾಂಗ್‌ನ ಶಾರ್ಪ್‌ ಶೂಟರ್‌, ಸುಮಾರು 20ರಷ್ಟು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ನವೀನ್‌ ಕುಮಾರ್‌ (Naveen Kumar) ಬುಧವಾರ (ಮೇ 29) ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ಉತ್ತರ ಪ್ರದೇಶದ ಹಾಪುರದ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಈತನ ವಿರುದ್ಧ ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ ಮುಂತಾದ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಮಾತನಾಡಿ, ʼʼಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆʼʼ ಎಂದು ಹೇಳಿದ್ದಾರೆ.

ʼʼವಿಶೇಷ ಕಾರ್ಯಪಡೆಯ ನೋಯ್ಡಾ ಘಟಕ ಮತ್ತು ದಿಲ್ಲಿ ಪೊಲೀಸ್‌ ಸ್ಪೆಷಲ್‌ ಘಟಕದ ಜಂಟಿ ತಂಡವು ಕಾರ್ಯಾಚರಣೆ ನಡೆಸಿದ ವೇಳೆ ಸಶಸ್ತ್ರ ಹೊಂದಿದ್ದ ನವೀನ್ ಕುಮಾರ್ ಮತ್ತು ತಂಡ ದಾಳಿ ನಡೆಸಿತು. ಇದರಿಂದ ಸಂಘರ್ಷ ಆರಂಭವಾಯಿತು. ಬಳಿಕ ಗಂಭೀರ ಗಾಯಗೊಂಡಿದ್ದ ನವೀನ್‌ ಹತನಾಗಿದ್ದಾನೆʼʼ ಎಂದು ಅವರು ತಿಳಿಸಿದ್ದಾರೆ.



ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಮತ್ತೊಬ್ಬ ಉನ್ನತ ಲೆಫ್ಟಿನೆಂಟ್ ಹಾಶಿಮ್ ಬಾಬಾನ ಅತ್ಯಂತ ವಿಶ್ವಾಸಾರ್ಹ ಸಹಾಯಕರಲ್ಲಿ ನವೀನ್ ಒಬ್ಬ ಎನಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಈತನ ವಿರುದ್ಧ 2008ರಲ್ಲಿ ಮೊದಲ ಬಾರಿಗೆ ದಿಲ್ಲಿಯ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. 2009ರಲ್ಲಿ ಸಾಹಿಬಾಬಾದ್‌ನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಆತನ ಕೈವಾಡ ಇರುವ ಬಗ್ಗೆ ಶಂಕೆ ಮೂಡಿತ್ತು. ವರ್ಷದ ನಂತರ ಉತ್ತರ ಪ್ರದೇಶದಲ್ಲಿ ದರೋಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ದಿಲ್ಲಿಯಲ್ಲಿನ 2 ಪ್ರಕರಣಗಳಲ್ಲಿ ಆತನನ್ನು ದೋಷಿ ಎಂದು ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Mystery: ಸಿನಿಮಾವನ್ನೇ ಮೀರಿಸೋ ಮರ್ಡರ್‌ ಮಿಸ್ಟ್ರಿ ಇದು! ಈ ಹಂತಕಿ ಆಡಿದ ಸಾವಿನ ನಾಟಕ ಬಯಲಾಗಿದ್ದು ಹೇಗೆ ಗೊತ್ತಾ?

ಸಂಘಟಿತ ಅಪರಾಧಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ನವೀನ್‌ ಕುಮಾರ್ ಹತ್ಯೆಯನ್ನು ಪ್ರಮುಖ ಯಶಸ್ಸು ಎಂದು ಪೊಲೀಸರು ಬಣ್ಣಿಸಿದ್ದಾರೆ. “ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಿಮಿನಲ್ ಜಾಲಗಳಿಗೆ ಈ ಕಾರ್ಯಾಚರಣೆ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ. ರೌಡಿ ಗ್ಯಾಂಗ್‌ಗಳನ್ನು ಕಿತ್ತೊಗೆಯಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆʼʼ ಎಂದು ಹೇಳಿದ್ದಾರೆ. ನವೀನ್‌ ಕುಮಾರ್ ಹತ್ಯೆಯು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಕಾರ್ಯಾಚರಣೆಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಕೆನಡಾ ಮತ್ತು ಅಮೆರಿಕದಿಂದ ಈ ಗ್ಯಾಂಗ್ ನಿರ್ವಹಿಸುತ್ತಿದ್ದಾನೆೆ. ಈ ಗ್ಯಾಂಗ್ ನಟ ಸಲ್ಮಾನ್ ಖಾನ್ ಮನೆ ಮೇಲಿನ ದಾಳಿಯ ಜಬಾಬ್ದಾರಿ ಹೊತ್ತುಕೊಂಡಿದೆ. ಕಳೆದ ವರ್ಷ ಮುಂಬೈಯಲ್ಲಿ ನಡೆದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ಹಿಂದೆಯೂ ಈ ಗ್ಯಾಂಗ್‌ನ ಕೈವಾಡವಿದೆ.

ಈ ಗ್ಯಾಂಗ್ ಗಾಯಕರು, ಉದ್ಯಮಿಗಳು, ರಾಜಕೀಯ ನಾಯಕರು ಮತ್ತು ಕ್ರೀಡಾಪಟುಗಳಿಂದ ಹಣ ಸುಲಿಗೆ ಮಾಡುವುದಾಗಿ ಬೆದರಿಕೆ ಹಾಕುತ್ತಲೇ ಇದೆ. ಈ ಗ್ಯಾಂಗ್‌ನ ಪಂಜಾಬ್, ಹರಿಯಾಣ, ಚಂಡೀಗಢ, ರಾಜಸ್ಥಾನ, ದಿಲ್ಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್‌ಗಳಲ್ಲಿ ಹರಡಿದೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »