Karunadu Studio

ಕರ್ನಾಟಕ

Chikkaballapur News: ಸಮುದಾಯಗಳ ಮಧ್ಯೆ ಬೆಂಕಿ ಇಡುವ ಕೆಲಸ ಬೇಡ: ವಿಜಯ ನರಸಿಂಹ – Kannada News | No need to start a fire between communities: Vijaya Narasimha


ಚಿಂತಾಮಣಿ: ಒಕ್ಕಲಿಗ ಹಾಗೂ ದಲಿತ ಬಾಂಧವರು ಸೇರಿದಂತೆ ಎಲ್ಲಾ ಸಮುದಾಯದವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವಹಾರ್ದತೆಯಿಂದ ಒಂದಾಗಿ ಬಾಳುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ಸಮುದಾಯಗಳ ಮಧ್ಯೆ ಬೆಂಕಿ ಇಡುವ ಕೆಲಸ ಯಾರೂ ಸಹ ಮಾಡಬಾರದು ಎಂದು ದಲಿತ ಮುಖಂಡರಾದ ವಿಜಯ ನರಸಿಂಹರವರು ಹೇಳಿದರು. ಇತ್ತೀಚೆಗೆ ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಸ್ ಮಿಲ್ ಆವರಣದಲ್ಲಿ ಒಕ್ಕಲಿಗರ ಸಮುದಾಯದ ಮುಖಂಡರು ಒಟ್ಟುಗೂಡಿ ಕೋಡಿಗಲ್ ರಮೇಶ್ ರವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಭೆ ನಡೆಸಿದರು.

ಇದರ ವಿರುದ್ಧವಾಗಿ ಇಂದು ದಲಿತ ಮುಖಂಡರು ಕಟಮಾಚನಹಳ್ಳಿ ಬಳಿ ಸಭೆ ಸೇರಿ ಮಾತನಾಡಿದ ಅವರು ದಲಿತ ವರ್ಗ ಶತಶತಮಾನಗಳಿಂದ ನೊಂದು ಬೆಂದ ಒಂದು ಜನಾಂಗ ಅವರ ರಕ್ಷಣೆಗಾಗಿ ಸರ್ಕಾರಗಳು ಮಾಡಿರುವ ಅಟ್ರಾಸಿಟಿ ಹಾಗೂ ಭೂಮಿ ರಕ್ಷಣೆಗೆ ಪಿಟಿಸಿಎಲ್ ಅಕ್ಟ್ ಇವುಗಳೆಲ್ಲವೂ ದಲಿತ ಸಮುದಾಯವನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಬೆಳೆಸಿ ಸಮಾಜದ ಮುಖ್ಯ ವಾಹನಿಗೆ ತರಬೇಕೆಂದು ಮಾಡಿರುವ ಕಾನೂನುಗಳು ನಾವುಗಳು ಇಂದು ಬಳಸಿಕೊಳ್ಳುತ್ತಿದ್ದೇವೆ.

ಇದನ್ನೂ ಓದಿ: IPL 2025: ʻದಿಗ್ವೇಶ್‌ ರಾಠಿಯನ್ನು ಬ್ಯಾನ್‌ ಮಾಡಬಾರದಿತ್ತುʼ-ಎಲ್‌ಎಸ್‌ಜಿ ಬೌಲರ್‌ಗೆ ಸೆಹ್ವಾಗ್‌ ಬೆಂಬಲ!

ಆದರೆ ಒಕ್ಕಲಿಗ ಸಮುದಾಯದ ಮುಖಂಡರು ಒಬ್ಬರು ದಲಿತರು ಇದನ್ನು ದುರುಪಯೋಗ ಮಾಡಿ ಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುತ್ತಿದ್ದಾರೆ ಎಂದು ಹೇಳಿರುವುದು ಬಹಳ ಬೇಸರದ ಸಂಗತಿ ಈ ರೀತಿಯ ಮಾತುಗಳು ಅವರಿಗೆ ಶೋಭೆ ತರುವುದು ಅಲ್ಲ ಎಂದು ಹೇಳಿದ ಅವರು ಸಾವಿರಾರು ಜನ ಒಕ್ಕಲಿಗರು ಸೇರಿ ಒಬ್ಬ ದಲಿತ ಮುಖಂಡನನ್ನ ಬಲಿಪಶು ಮಾಡಲು ಹೊರಟಿರು ವದು ಸರಿಯಲ್ಲ ಎಂದು ಹೇಳಿದರು.

ಕೋಡಿಗಲ್ ರಮೇಶ್ ರವರು ಮಾತನಾಡಿ ಒಕ್ಕಲಿಗ ಬಂದವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ನನ್ನ ಮೇಲೆ ಮಾಡಿರುವ ಆರೋಪ ಒಂದಾದರೂ ಸಾಬೀತ್ ಆದರೆ ನಾನು ಈ ಜಿಲ್ಲೆಯನ್ನೇ ಬಿಟ್ಟು ತೊಲಗುತ್ತೇನೆ. ಸುಮಾರು ವರ್ಷಗಳಿಂದ ನನಗೆ ಪ್ರಾಣ ಅಪಾಯವಿದೆ ಈ ಹಿಂದೆಯೂ ಸಹ ನನಗೆ ಸರ್ಕಾರ ರಕ್ಷಣೆಗಾಗಿ ಗನ್ ಮ್ಯಾನ್ ಸಹ ನೀಡಿತ್ತು ಆದರೆ ಇತ್ತೀಚೆನ ದಿನಗಳಲ್ಲಿ ನನ್ನ ಹೆಸರನ್ನು ಕೆಡಿಸಲು ಈ ಎಲ್ಲಾ ಹೊನ್ನಾರಗಳು ನಡೆಯುತ್ತಿವೆ.

ಕೆಲ ವ್ಯಕ್ತಿಗಳು ನನ್ನ ವಿರುದ್ಧ ಪಿತೂರಿ ನಡೆಸಿ ಕೆಲ ಸಮುದಾಯದವರನ್ನು ಎತ್ತಿ ಕಟ್ಟಿ ಗಲಾಟೆಗಳು ಮಾಡಿಸುತ್ತಿದ್ದಾರೆ.

ಒಕ್ಕಲಿಗರ ಅಂದರೆ ನಮಗೆ ಬಹಳ ಪ್ರೀತಿ,ಒಂದು ಸಣ್ಣ ಅಪಘಾತದ ಘಟನೆಗೆ ದೊಡ್ಡ ಘಟನೆ ಸೃಷ್ಟಿ ಮಾಡಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

 ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಆನಂದ್,ಜನಾ ನಾಗಪ್ಪ,ಎಂ ವಿ ರಾಮಪ್ಪ, ರಾಜೇಂದ್ರ ಬಾಬು, ಜನಾರ್ಧನ್, ಕವ್ವಾಲಿ ವೆಂಕಟರವಣಪ್ಪ,ಶ್ರೀನಿವಾಸ್, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to