Karunadu Studio

ಕರ್ನಾಟಕ

Gauthami Jadav: ಗೌತಮಿ ಜಾಧವ್ ಬಿಗ್ ಬಾಸ್​​ನಲ್ಲಿ ಸಿಕ್ಕ ಹಣವನ್ನು ಏನು ಮಾಡಿದ್ದಾರೆ ಗೊತ್ತೇ? – Kannada News | What Gautami Jadhav did with the money she won on Bigg Boss Kannada 11


ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಮುಗಿದ ಬಳಿಕ ಬಹುತೇಕ ಹೆಚ್ಚಿನ ಸ್ಪರ್ಧಿಗಳು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವರು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಆದರೆ, ಗೌತಮಿ ಜಾಧವ್ ಅವರು ಮಾತ್ರ ತನ್ನ ಪತಿ ಅಭಿಷೇಕ್ ಜೊತೆ ಸುತ್ತಾಡುತ್ತ ಸಮಯ ಕಳೆಯುತ್ತಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಹೆಚ್ಚಿನ ಯಾವುದೇ ಕಾರ್ಯಕ್ರಮದಲ್ಲಿ ಕೂಡ ಇವರು ಕಾಣಿಸಿಕೊಂಡಿಲ್ಲ. ಯಾವುದೇ ಸೀರಿಯಲ್ ಅಥವಾ ಸಿನಿಮಾ ಆಫರ್ ಬಗ್ಗೆಯೂ ಸುಳಿವು ನೀಡಿಲ್ಲ. ಇತ್ತೀಚೆಗಷ್ಟೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿಯಲ್ಲಿ ಗೌತಮಿ ಗೆಸ್ಟ್ ಪಾತ್ರದಲ್ಲಿ ಬಂದು ದರ್ಶನ ನೀಡಿದ್ದರಷ್ಟೆ.

ಆದರೀಗ ಸಂದರ್ಶನವೊಂದರಲ್ಲಿ ಗೌತಮಿ ಪ್ರತ್ಯಕ್ಷವಾಗಿದ್ದು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಬಿಗ್‌ ಬಾಸ್​ನಿಂದ ಬಂದ ಹಣವನ್ನ ಏನು ಮಾಡಿದೆ ಎಂಬ ಸೀಕ್ರೆಟ್ ರಿವೀಲ್‌ ಮಾಡಿದ್ದಾರೆ. ‘ಬಿಗ್‌ ಬಾಸ್‌ ಅಮೌಂಟ್‌ ಎಲ್ಲರಿಗೂ ಕ್ಲಿಯರ್‌ ಆಗಿದೆ. ತುಂಬಾ ನೀಟಾಗಿ ಎಲ್ಲರಿಗೂ ಅಮೌಂಟ್‌ ಕ್ಲಿಯರ್‌ ಮಾಡಿದ್ದರು. ಅಲ್ಲಿ ಬಂದ ಹಣವನ್ನು ತುಂಬಾ ಒಳ್ಳೆಯ ಕೆಲಸಕ್ಕೆ ನಾನು ಉಪಯೋಗಿಸಿದ್ದೇನೆ. ಪರ್ಸ್‌ನಲ್‌ ಯೂಸ್‌ ಆಗಿರುವುದರಿಂದ ಅದನ್ನು ಹೇಳುವುದಕ್ಕೆ ಆಗಲ್ಲ. ಆದರೆ ತುಂಬಾ ಒಳ್ಳೆಯ ಕೆಲಸಕ್ಕೆ ಉಪಯೋಗಿಸಿದ್ದೇನೆ ಎಂಬ ಖುಷಿಯಿದೆ’ ಎಂದು ಹೇಳಿದ್ದಾರೆ.

Sarigamapa: ‘ಸರಿಗಮಪ’ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜು: ಈ ಬಾರಿ ಒಟಿಟಿಯಲ್ಲಿ ನೇರಪ್ರಸಾರ

ಇನ್ನು ತಾನು ಚಿತ್ರರಂಗದಲ್ಲಿ ಯಾವ ರೀತಿಯ ಪಾತ್ರ ಮಾಡಲು ಇಷ್ಟಪಡುತ್ತೇನೆ ಎಂಬ ಕುರಿತು ಮಾತನಾಡಿದ ಗೌತಮಿ, ನಾನು ಈ ಹಿಂದೆ ಮಾಡಿರದ ಪಾತ್ರ ಮಾಡದು ಇಷ್ಟೊಡುತ್ತೇನೆ. ಆಗ ನನ್ನ ನೋಡೋ ಜನರಿಗೂ ಬೋರ್ ಆಗಲ್ಲ. ಮುಂದೆ ನಾನು ಮಾಡುವ ಪಾತ್ರ ಹಿಂದೆಂದೂ ಮಾಡಿರದ ರೀತಿಯಲ್ಲಿ ಇರುತ್ತದೆ. ಒಂದು ವಿಭಿನ್ನವಾದ ಪಾತ್ರದಲ್ಲಿ, ತುಂಬಾ ಚಾಲೆಂಜಿಂಗ್ ಆಗಿರುವ ಪಾತ್ರದಲ್ಲಿ ಆದಷ್ಟು ಬೇಗ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಗೌತಮಿ ಜಾಧವ್ ಅವರದ್ದು ಚಿಕ್ಕ ಬ್ಯುಸಿನೆಸ್‌ ಇದೆ. ಅವರು ಹೇರ್‌ ಆಯಿಲ್ ಬ್ಯುಸಿನೆಸ್‌ ನಡೆಸುತ್ತಿದ್ದಾರಂತೆ. ಅದರ ಬಗ್ಗೆ ರಿಸರ್ಚ್‌ ಮಾಡಿ, ಆಯಿಲ್‌ ಅನ್ನು ದೇವಸ್ಥಾನದಲ್ಲಿಯೇ ತಯಾರು ಮಾಡಿ ಮನೆಗೆ ಬಂದು ಪ್ಯಾಕಿಂಗ್‌ ಮಾಡಿ ಇನ್​ಸ್ಟಾಗ್ರಾಮ್ ಮೂಲಕ ಸೇಲ್‌ ಮಾಡುತ್ತಿದ್ದಾರಂತೆ. ಈ ಬ್ಯುಸಿನೆಸ್ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »