Karunadu Studio

ಕರ್ನಾಟಕ

RCB Final: ಈ ಭವಿಷ್ಯದಂತೆ ಆರ್‌ಸಿಬಿ ಕಪ್‌ ಗೆಲ್ಲುವುದು ಖಚಿತ – Kannada News | Why RCB Have the Best Chance To Win IPL 2025 After Qualifier 1 Win Over PBKS


ಬೆಂಗಳೂರು: ಅಭಿಮಾನಿಗಳ ಬಹು ವರ್ಷಗಳ ಕನಸಾದ ಐಪಿಎಲ್‌ ಟ್ರೋಫಿಯನ್ನು ಈ ಬಾರಿ ಆರ್‌ಸಿಬಿ ತಂಡ ನನಸು ಮಾಡುವ ಸಾಧ್ಯತೆಯೊಂದು ಕಂಡು ಬಂದಿದೆ. ಗುರುವಾರ ನಡೆದಿದ್ದ ಪಂಜಾಬ್‌ ಕಿಂಗ್ಸ್‌(RCB vs PBKS) ವಿರುದ್ಧದ ಮೊದಲ ಕ್ವಾಲಿಫೈಯರ್‌(IPL Qualifier 1) ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(RCB) ತಂಡ 8 ವಿಕೆಟ್‌ ಭರ್ಜರಿಯಾಗಿ ಗೆಲುವು ಸಾಧಿಸಿ 9 ವರ್ಷಗಳ ಬಳಿಕ ಫೈನಲ್‌(RCB Final) ಪ್ರವೇಶಿಸಿತ್ತು. ಹಿಂದಿನ ಐಪಿಎಲ್‌ ಅಂಕಿ ಅಂಶದ ಭವಿಷ್ಯ ನೋಡುವಾಗ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವುದು ಖಚಿತ.

ಹೌದು, ಪ್ಲೇ ಆಫ್‌ ನಿಯಮ ಚಾಲ್ತಿಗೆ ಬಂದ ಬಳಿಕ ಒಟ್ಟು 14 ಆವೃತ್ತಿಗಳ ಪೈಕಿ 11ರಲ್ಲಿ ಕ್ವಾಲಿಫೈಯರ್‌ -1ರಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ಲಭಿಸಿದೆ. ಅದರಲ್ಲೂ 2018 ರಿಂದ 24 ರವರೆಗೆ ಕ್ವಾಲಿಫೈಯರ್‌-1 ರಲ್ಲಿ ಗೆದ್ದ ತಂಡವೇ ಚಾಂಪಿಯನ್‌ ಆಗಿದೆ. ಹೀಗಾಗಿ ಈ ಲೆಕ್ಕಾಚಾರದಂತೆ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವುದು ಖಚಿತ ಎನ್ನಲಡ್ಡಿಯಿಲ್ಲ.



ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಪಂಜಾಬ್‌ ಕಿಂಗ್ಸ್‌ ಶೋಚನೀಯ ಬ್ಯಾಟಿಂಗ್‌ ಪ್ರದರ್ಶನದ ಮೂಲಕ 14.1 ಓವರ್‌ನಲ್ಲಿ 101 ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 106 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.



ಆರ್‌ಸಿಬಿ ಪರ ಉತ್ತಮ ಬೌಲಿಂಗ್‌ ದಾಳಿ ಸಂಘಟಿಸಿದ ಸುಯಶ್‌ ಶರ್ಮಾ 3 ಓವರ್‌ನಲ್ಲಿ 17 ರನ್‌ಗೆ 3 ವಿಕೆಟ್‌ ಕಿತ್ತರೆ, ಹೇಜಲ್‌ವುಡ್‌ 3.1 ಓವರ್‌ಗಳಲ್ಲಿ 21ಕ್ಕೆ 3 ವಿಕೆಟ್‌ ಪಡೆದರು. ಯಶ್‌ ದಯಾಳ್‌ 2, ಭುವನೇಶ್ವರ್‌ ಹಾಗೂ ಶೆಫರ್ಡ್‌ ತಲಾ 1 ವಿಕೆಟ್‌ ಕಿತ್ತರು. ಬ್ಯಾಟಿಂಗ್‌ನಲ್ಲಿ ಆರಂಭಕಾರ ಫಿಲ್‌ ಸಾಲ್ಟ್‌ ಅಜೇಯ 56 ರನ್‌ ಬಾರಿಸಿದರು. ಅಗರ್ವಾಲ್‌ 19, ವಿರಾಟ್‌ 12 ಮತ್ತು ನಾಯಕ ರಜತ್‌ ಪಾಟೀದಾರ್‌ ಅಜೇಯ 15 ರನ್‌ ಗಳಿಸಿದರು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »