Karunadu Studio

ಕರ್ನಾಟಕ

Operation Sindoor: ಆಪರೇಷನ್ ಸಿಂದೂರ್ ವೇಳೆ ಯೋಧರಿಗೆ ಸಹಾಯ ಮಾಡಿದ್ನಂತೆ ಈ ಪುಟ್ಟ ಬಾಲಕ! – Kannada News | A boy who helped the soldiers during Operation Sindoor


ಚಂಡೀಗಢ: ದೇಶ ಸೇವೆ ಮಾಡಲು ಯಾವುದೇ ವಯಸ್ಸು ಬೇಕಾಗಿಲ್ಲ ಎಂಬುದನ್ನು 10 ವರ್ಷದ ಶ್ರವಣ್ ಸಿಂಗ್(Shravan Singh) ಎಂಬ ಬಾಲಕ ಆಪರೇಷನ್ ಸಿಂದೂರ್‌(Operation Sindoor) ಸಮಯದಲ್ಲಿ ತನ್ನ ಕಾರ್ಯಗಳಿಂದ ಸಾಬೀತುಪಡಿಸಿದ್ದಾನೆ. ಪಂಜಾಬ್‌ನ ಫಿರೋಜ್‌ಪುರದ ತಾರಾ ವಾಲಿ ಗ್ರಾಮದ ನಿವಾಸಿಯಾದ ಶ್ರವಣ್, ಗಡಿ ಜಿಲ್ಲೆಯಲ್ಲಿ ಆಪರೇಷನ್ ಸಿಂದೂರ್‌ನಲ್ಲಿ ಭಾಗಿಯಾಗಿದ್ದ ಸೈನಿಕರಿಗೆ ಉಪಹಾರವನ್ನು ನೀಡಿದ್ದಾನಂತೆ. 10 ವರ್ಷದ ಈ ಬಾಲಕನ ದೇಶಭಕ್ತಿಗಾಗಿ ಇತ್ತೀಚೆಗೆ ಆತನನ್ನು ಸನ್ಮಾನಿಸಲಾಯಿತು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿ ನೆಟ್ಟಿಗರು ಕೂಡ ಆತನ ಈ ಕಾರ್ಯದಿಂದ ಖುಷಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

ಬಾಲಕ ಶ್ರವಣ್ ಸಿಂಗ್ ‘ಸಿವಿಲ್ ವಾರಿಯರ್‌’ ಅನ್ನು ಗೌರವಿಸುವ ಸಮಾರಂಭದಲ್ಲಿ ಭಾಗವಹಿಸಿದ್ದು, ಅಲ್ಲಿ ಅವನಿಗೆ ಉಡುಗೊರೆಯಾಗಿ ಸ್ಮರಣಿಕೆಯನ್ನು ನೀಡಲಾಯಿತು. ಭಾರತೀಯ ಸೇನೆಯು ಅವನನ್ನು “ಯಂಗೆಸ್ಟ್ ಸಿವಿಲ್ ವಾರಿಯರ್‌” ಎಂದು ಸನ್ಮಾನಿಸಿದೆ.



ಶ್ರವಣ್ ಅವನ ತಂದೆ ಸೋನಾ ಸಿಂಗ್ ಈ ಬಗ್ಗೆ ಮಾತನಾಡಿ, “ಸೈನಿಕರು ನಮ್ಮ ಹೊಲದಲ್ಲಿ ಬೀಡುಬಿಟ್ಟಿದ್ದಾಗ ಮೊದಲ ದಿನದಿಂದಲೇ ನನ್ನ ಮಗ ಅವರಿಗೆ ಹಾಲು, ಲಸ್ಸಿ, ನೀರು ಮತ್ತು ಐಸ್ ತೆಗೆದುಕೊಂಡು ಹೋಗಿ ನೀಡಿದ್ದಾನೆ. ಸೈನ್ಯಕ್ಕೆ ಸಹಾಯ ಮಾಡುವುದರಲ್ಲಿ ಅವನು ಸಂತೋಷವನ್ನು ಕಂಡುಕೊಂಡಿದ್ದರಿಂದ ನಾವು ಕೂಡ ಅವನನ್ನುತಡೆಯಲಿಲ್ಲ.ಅವನಿಗೆ ಸೈನಿಕನಾಗುವ ಆಸೆ ಇದೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರೊಬ್ಬರು,”ಬಾಲ್ಯದಲ್ಲಿ, ನಮ್ಮ ಹೊಲಗಳಲ್ಲಿ ಸೇನಾ ಕಾರ್ಯಗಳು ನಡೆದಾಗ, ನಾವು ಸೈನಿಕರಿಗೆ ಲಸ್ಸಿ, ಮಖಾನ್, ಹಾಲು ಮತ್ತು ಮಾವಿನಹಣ್ಣನ್ನು ನೀಡುತ್ತಿದ್ದೆವು ಮತ್ತು ಅವರು ಪ್ರತಿಯಾಗಿ ನಮಗೆ ಪೂರಿಯನ್ನು ನೀಡುತ್ತಿದ್ದರು. ಈ ಬಾಂಧವ್ಯ ಇನ್ನೂ ಬಲವಾಗಿದೆ” ಎಂದು ನೆನಪಿಸಿಕೊಂಡರು. ಇನ್ನು ಕೆಲವರು ಶ್ರವಣ್ ಪೋಷಕರ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಮಗನನ್ನು ಚೆನ್ನಾಗಿ ಬೆಳೆಸಿದ್ದೀರಿ, ಸಹಾಯ ಮಾಡುವ ಗುಣವನ್ನು ಅವನಿಗೆ ಕಲಿಸಿದ್ದಕ್ಕಾಗಿ ಪೋಷಕರು ಮೆಚ್ಚುಗೆಗೆ ಅರ್ಹರು” ಎಂದು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಮೌರಾ ಹೊಕೇನ್‌ನನ್ನೇ ನೋಡಿದ ಪಾಕ್‌ ಪ್ರಧಾನಿ ಷರೀಫ್- ವಿಡಿಯೊ ಮತ್ತೆ ವೈರಲ್

ಕಳೆದ ತಿಂಗಳು ನಡೆದ ದುರಂತ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7 ರಂದು ಆಪರೇಷನ್ ಸಿಂದೂರ್ ಅನ್ನು ನಡೆಸಿದ್ದರು. ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ದಾಳಿ ನಡೆಸಿತು. ಇದರಲ್ಲಿ ಅನೇಕ ಉಗ್ರರನ್ನು ಸಂಹಾರಮಾಡಲಾಗಿತ್ತು.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »