Karunadu Studio

ಕರ್ನಾಟಕ

Karnataka Rain: ಭಾರೀ ಮಳೆ, ಗುಡ್ಡ ಕುಸಿದು ಇಬ್ಬರು ಸಾವು, ಮನೆಯಡಿ ಸಿಲುಕಿಕೊಂಡ ತಾಯಿ- ಮಕ್ಕಳು – Kannada News | Karnataka Rain news heavy rain in dakshina kannada two death three get caught under house


ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ (Karnataka rain news) ದಕ್ಷಿಣ ಕನ್ನಡದ (Dakshina Kannada) ಹಲವು ಕಡೆ ಅನಾಹುತಗಳು ಸಂಭವಿಸಿವೆ. ಕೆಲವೆಡೆ ಗುಡ್ಡ ಕುಸಿತ (Landslide) ಉಂಟಾಗಿದೆ. ಈಗಾಗಲೇ ಮಳೆ ಅನಾಹುತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳ್ಳಾಲದ ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಗುಡ್ಡ ಕುಸಿದು ಮಣ್ಣು ಮನೆಗಳ ಮೇಲೆ ಬಿದ್ದಿದೆ. ಮನೆಗಳ ಅಡಿಯಲ್ಲಿ ಒಂದೇ ಕುಟುಂಬದ ಐವರು ಸಿಲುಕಿಕೊಂಡಿದ್ದು, ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಕುಸಿದ ಮನೆಯಡಿ ತಾಯಿ ಹಾಗೂ ಇಬ್ಬರು ಮಕ್ಕಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆದಿದೆ.

ಭಾರೀ ಮಳೆಗೆ ಗುಡ್ಡ ಕುಸಿದಿದ್ದು, ಕುಸಿದ ಗುಡ್ಡದಡಿ ನೆಲಕಚ್ಚಿದ ಮನೆಯಡಿ ಸಿಲುಕಿದ ಒಂದೇ ಕುಟುಂಬದ ಐವರ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾಂತಪ್ಪ ಪೂಜಾರಿ ಎಂಬವರ ಮನೆ ಮೇಲೆ ಗುಡ್ಡ ಕುಸಿದಿದ್ದು, ಕಾಂತಪ್ಪ ಪೂಜಾರಿ ಪತ್ನಿ ಪ್ರೇಮ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಒಳಗೆ ಮಲಗಿದ್ದ ತಾಯಿ ಮಗುವಿನ ಮೇಲೆ ಮನೆಯ ಮೇಲ್ಚಾವಣಿ ಬಿದ್ದಿದೆ. ಗೋಡೆಯ ಅರ್ಧಭಾಗ ಇಬ್ಬರ ದೇಹದ ಮೇಲೆ ಬಿದ್ದಿದ್ದು, ರಕ್ಷಣಾ ತಂಡ ಇಬ್ಬರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದೆ. ಅಶ್ವಿನಿ ಎಂಬ ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗು ಆರುಷ್​ ಮನೆಯ ಮೇಲ್ಚಾವಣಿ ಅಡಿ ಸಿಲುಕಿದ್ದಾರೆ. ಮಗುವಿನ ಕೈ ಹಾಗೂ ಮುಖ ಹೊರಗೆ ಕಾಣ್ತಿದ್ದು, ತಾಯಿ ಮಗುವನ್ನು ರಕ್ಷಣಾ ತಂಡ ಸಂಪರ್ಕಿಸಿದೆ. ಒಳಗಡೆ ಸಿಲುಕಿ ನರಳುತ್ತಿರುವ ತಾಯಿ, ಮಗುವಿಗೆ ಆಕ್ಸಿಜನ್ ಪೂರೈಕೆ ಮಾಡಲಾಗ್ತಿದೆ.

ಕಾಂಪೌಂಡ್ ಕುಸಿದು ಬಾಲಕಿ ಸಾವು

ದೇರಳಕಟ್ಟೆ ಸಮೀಪದ ಮೊಂಟೆಪದವು ಕೋಡಿ ಎಂಬಲ್ಲಿ ಗುಡ್ಡ ಕುಸಿದು, ಕಾಂಪೌಂಡ್ ಗೋಡೆಯೊಂದು ಮನೆ ಮೇಲೆ ಬಿದ್ದ ಪರಿಣಾಮ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾನಕರೆ ನಿವಾಸಿ ನೌಶಾದ್ ಎಂಬುವರ ಪುತ್ರಿ ನಹೀಮಾ (10) ಮೃತ ಬಾಲಕಿಯಾಗಿದ್ದಾರೆ. ಉಳ್ಳಾಲ ತಾಲೂಕಿನ ಎರಡು ಕಡೆ ಭಾರೀ ಮಳೆಗೆ ಎರಡು ಕಡೆ ಮನೆಗಳ ಮೇಲೆ ಗುಡ್ಡ ಕುಸಿದಿದೆ.

ಭಾರೀ ಮಳೆಯಿಂದ ಉಳ್ಳಾಲ, ಕಲ್ಲಾಪು, ಬಗಂಬಿಲ, ಪಿಲಾ‌ರ್, ಅಂಬಿಕಾರಸ್ತೆ, ಕೋಟೆಕಾರು, ತಲಪಾಡಿ, ಪಾವೂರು, ಹರೇಕಳ, ಉಳಿಯ ಪ್ರದೇಶಗಳು ಜಲಾವೃತಗೊಂಡಿದೆ.

ಇದನ್ನೂ ಓದಿ: Karnataka Rain: ದಕ್ಷಿಣ ಕನ್ನಡದಲ್ಲಿ ಮಳೆ ಅನಾಹುತ, ಗುಡ್ಡ ಕುಸಿತ, ಬಾಲಕಿ ಸಾವು, ಶಾಲೆಗಳಿಗೆ ರಜೆ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »