Karunadu Studio

ಕರ್ನಾಟಕ

Viral News: ಆತ ನನ್ನನ್ನೇ ನೋಡುತ್ತಾ ಹಸ್ತಮೈಥುನ ಮಾಡಿಕೊಂಡ; ಸೋಶಿಯಲ್‌ ಮೀಡಿಯಾನಲ್ಲಿ ಯುವಕನ ಕರಾಳತೆ ಬಿಚ್ಚಿಟ್ಟ ಮಹಿಳೆ – Kannada News | “I Feel Violated, Scared”: Woman Seeks Reddit’s Help After Catching Neighbour Masturbating On Terrace


ನವದೆಹಲಿ: ತನ್ನ ನೆರೆಯವನು (Neighbour) ತನ್ನತ್ತ ದಿಟ್ಟಿಸುತ್ತಾ ಹಸ್ತಮೈಥುನ (Masturbating) ಮಾಡಿಕೊಂಡ ಎಂದು ಆರೋಪಿಸಿ, ಯುವತಿಯೊಬ್ಬಳು ರೆಡ್ಡಿಟ್‌ನಲ್ಲಿ ತನ್ನ ಆತಂಕಕಾರಿ ಅನುಭವವನ್ನು ಹಂಚಿಕೊಂಡಿದ್ದಾಳೆ. ಮೇ 30, 2025ರಂದು ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಮಹಿಳೆಯ ಹೇಳಿಕೆ ಇದೀಗ ವೈರಲ್‌ (Viral News) ಆಗಿದೆ.

ಯುವತಿಯ ಪ್ರಕಾರ, ಆಕೆ ತನ್ನ ಮನೆಯ ಟೆರೇಸ್‌ಗೆ ಹೋಗಿದ್ದಾಗ, ಪಕ್ಕದ ಕಟ್ಟಡದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಆಕೆಯತ್ತ ದಿಟ್ಟಿಸುತ್ತಿದ್ದ. “ಮೊದಲಿಗೆ ಇದು ಆಕಸ್ಮಿಕ ಎಂದು ಭಾವಿಸಿದೆ. ಆದರೆ, ಅವನು ಕಣ್ಣು ಮಿಟುಕಿಸದೇ ನೋಡುತ್ತಿದ್ದು, ಅಸಹನೀಯವಾಯಿತು,” ಎಂದು ಆಕೆ ಬರೆದಿದ್ದಾಳೆ. ಆಕೆ ಸ್ಥಳ ಬದಲಾಯಿಸಿದರೂ, ಆ ವ್ಯಕ್ತಿ ಮೊಣಕಾಲೂರಿ, ಆಕೆಯತ್ತ ದಿಟ್ಟಿಸುತ್ತಲೇ ಅಸಭ್ಯ ಕೃತ್ಯದಲ್ಲಿ ತೊಡಗಿದ. ಆಘಾತಗೊಂಡ ಯುವತಿ, ಸಾಕ್ಷ್ಯಕ್ಕಾಗಿ ಆತನ ಕೆಲವು ಚಿತ್ರಗಳನ್ನು ತೆಗೆದಿದ್ದಾಳೆ. “ನಾನು ಸಂಪೂರ್ಣವಾಗಿ ಮುಚ್ಚಿದ ಬಟ್ಟೆಯಲ್ಲಿದ್ದೆ, ಯಾವುದೇ ಆಕರ್ಷಕ ರೀತಿಯಲ್ಲಿರಲಿಲ್ಲ. ಕೇವಲ ನನ್ನ ಟೆರೇಸ್‌ನಲ್ಲಿ ನನ್ನ ಪಾಡಿಗೆ ನಾನಿದ್ದೆ” ಎಂದು ಆಕೆ ತಿಳಿಸಿದ್ದಾಳೆ.

ಈ ಘಟನೆಯಿಂದ ಆಕೆಗೆ ಅಸಹ್ಯ ಭಾವನೆ ಮತ್ತು ಭಯವಾಗಿದೆ. “ನನ್ನ ಕುಟುಂಬಕ್ಕೆ ತಿಳಿಸಲು ಹೆದರುತ್ತಿದ್ದೇನೆ. ಅವರು ನನ್ನ ತಪ್ಪಿಲ್ಲದಿದ್ದರೂ, ರಕ್ಷಣೆಯ ದೃಷ್ಟಿಯಿಂದ ಟೆರೇಸ್‌ಗೆ ಒಂಟಿಯಾಗಿ ಹೋಗದಂತೆ ಅಥವಾ ನನ್ನ ಸ್ವಾತಂತ್ರ್ಯವನ್ನು ನಿರ್ಬಂಧಿಸಬಹುದು” ಎಂದು ಆಕೆ ಬರೆದಿದ್ದಾಳೆ. “ಆ ವ್ಯಕ್ತಿಗೆ ನಾನು ಎಲ್ಲಿ ವಾಸಿಸುತ್ತೇನೆ ಎಂಬುದು ಗೊತ್ತು. ಪೊಲೀಸರಿಗೆ ತಿಳಿಸಲು ಇಷ್ಟವಿಲ್ಲ, ಏಕೆಂದರೆ ಕುಟುಂಬಕ್ಕೆ ತಿಳಿಯಬಾರದು. ಆದರೆ, ಇದನ್ನು ಕಡೆಗಣಿಸಲೂ ಆಗದು” ಎಂದು ಆಕೆ ಆತಂಕ ವ್ಯಕ್ತಪಡಿಸಿದ್ದಾಳೆ.

“ಸುರಕ್ಷಿತ, ಗೌಪ್ಯ ಮತ್ತು ಪರಿಣಾಮಕಾರಿಯಾದ ಕ್ರಮ ಯಾವುದು?” ಎಂದು ರೆಡ್ಡಿಟ್ ಸಮುದಾಯಕ್ಕೆ ಕೇಳಿರುವ ಆಕೆ, “ಯಾರಾದರೂ ಇಂತಹ ಘಟನೆ ಎದುರಿಸಿದ್ದೀರಾ? ಯಾವುದೇ ಸಲಹೆ ಸಹಾಯಕವಾಗಲಿದೆ” ಎಂದಿದ್ದಾಳೆ. ಪೋಸ್ಟ್ ವೈರಲ್ ಆಗಿದ್ದು, ಅನೇಕ ಬಳಕೆದಾರರು ಆಕೆಯ ಭಾವನೆಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಏರ್‌ಪೋರ್ಟ್‌ನಲ್ಲೇ ನೀರಿಲ್ಲ… ನೀರಿಲ್ಲ- ಪಾಕ್‌ ನಟಿಯ ವಿಡಿಯೊ ಫುಲ್‌ ವೈರಲ್‌!

“ನೀವು ಸ್ನೇಹಿತರೊಂದಿಗೆ ಅಥವಾ ಒಂಟಿಯಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿ. ಗೌಪ್ಯ ದೂರು ಸಲ್ಲಿಸಿ, ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ. ಮೌನವಾಗಿರಬೇಡಿ, ಆತ ಇದನ್ನು ಮತ್ತೆ ಮಾಡಬಹುದು” ಎಂದು ಒಬ್ಬ ಬಳಕೆದಾರ ಸಲಹೆ ನೀಡಿದ್ದಾರೆ. “ಇದು ಭಯಾನಕ ಮತ್ತು ತಪ್ಪು. ಸುರಕ್ಷಿತವಾಗಿರಿ, ಸಹಾಯ ಕೇಳಲು ಹಿಂಜರಿಯಬೇಡಿ” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಕೃತ್ಯವನ್ನು ಕಡೆಗಣಿಸಬೇಡಿ, ಆತ ಇನ್ನೊಬ್ಬರಿಗೂ ಅಪಾಯ ಉಂಟುಮಾಡಬಹುದು” ಎಂದು ಒಬ್ಬ ಬಳಕೆದಾರ ಒತ್ತಾಯಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »