Karunadu Studio

ಕರ್ನಾಟಕ

Viral News: ಅರಶಿನ ಶಾಸ್ತ್ರ ನಡೆದು ಬರೋಬ್ಬರಿ 5 ವರ್ಷಗಳ ಬಳಿಕ ಮದುವೆಯಾದ ಈ ರಾಜಕುಮಾರಿ; ಕಾರಣವೇನು ಗೊತ್ತಾ? – Kannada News | The princess of Denmark who got married 5 years after the haldi; do you know the reason?


ಅಥೆನ್ಸ್‌: ಗ್ರೀಸ್ ಮತ್ತು ಡೆನ್ಮಾರ್ಕ್‌ನ ರಾಜಕುಮಾರಿ ಥಿಯೋಡೋರಾ, ರಾಜ ಕಾನ್‌ಸ್ಟಂಟೈನ್ II ​​ಮತ್ತು ರಾಣಿ ಆನ್-ಮೇರಿಯ ಪುತ್ರಿ. ಈಕೆ ಸೆಪ್ಟೆಂಬರ್ 2024ರಲ್ಲಿ ಅಮೇರಿಕನ್ ವಕೀಲ ಮ್ಯಾಥ್ಯೂ ಕುಮಾರ್ ಜೊತೆ ಮದುವೆಯಾಗಿದ್ದಾಳೆ.ಇದರಲ್ಲೇನು ವಿಶೇಷ ಅಂದುಕೊಳ್ಳುತ್ತಿದ್ದೀರಾ…? ಹೌದು ಈ ಜೋಡಿಯ ಮದುವೆ ಕತೆ ತುಂಬಾ ಕುತೂಹಲಕಾರಿಯಾಗಿದೆ. ಸಾಮಾನ್ಯವಾಗಿ ವಧು-ವರರ ಅರಶಿನ ಶಾಸ್ತ್ರವನ್ನು ಮದುವೆಯ ಹಿಂದಿನ ದಿನ ಮಾಡುತ್ತಾರೆ. ಆದರೆ ಈ ಜೋಡಿ ಅರಶಿನ ಸಮಾರಂಭ ನಡೆದ ಐದು ವರ್ಷಗಳ ನಂತರ ಮದುವೆಯಾಗಿದ್ದಾರೆ! ಅರೇ….ಇದೇನು ನಿಜನಾ…? ಎಂದು ಆಶ್ಚರ್ಯಪಡುತ್ತಿದ್ದೀರಾ….? ಹೌದು ಇದಕ್ಕೆ ಕಾರಣ ಸಹ ಇದೆ.ಕೋವಿಡ್‌ 19 ಹಾಗೂ ರಾಜಕುಮಾರಿಯ ತಂದೆಯ ನಿಧನದ ಕಾರಣದಿಂದ ಈಕೆಯ ಅರಸಿನ ಶಾಸ್ತ್ರ ನಡೆದ ಐದು ವರ್ಷಗಳ ನಂತರ ಮದುವೆಯಾಗಿದ್ದಾರೆ.ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral News) ಆಗಿದೆ.

ರಾಜಕುಮಾರಿ ಥಿಯೋಡೋರಾ ಬಗ್ಗೆ ಮಾಹಿತಿ

ಜೂನ್ 9, 1983 ರಂದು ಲಂಡನ್‌ನಲ್ಲಿ ಜನಿಸಿದ ರಾಜಕುಮಾರಿ ಥಿಯೋಡೋರಾ, ರಾಜ ಕಾನ್ಸ್ಟಂಟೈನ್ ಮತ್ತು ರಾಣಿ ಆನ್-ಮೇರಿ ಅವರ ಐದು ಮಕ್ಕಳಲ್ಲಿ ನಾಲ್ಕನೆಯವಳು. ಈಕೆ ಯುನೈಟೆಡ್ ಸ್ಟೇಟ್ಸ್‌ನ ಬ್ರೌನ್ ವಿಶ್ವವಿದ್ಯಾಲಯದಿಂದ ರಂಗಭೂಮಿ ಕಲೆಗಳಲ್ಲಿ ಪದವಿ ಕೂಡ ಪಡೆದಿದ್ದಾಳೆ.ತನ್ನ ಅಧ್ಯಯನದ ನಂತರ, ರಾಜಕುಮಾರಿ ನಟನಾ ವೃತ್ತಿಜೀವನವನ್ನು ಶುರುಮಾಡಿ ಹಲವಾರು ಪ್ರೊಡಕ್ಷನ್‍ಗಳಲ್ಲಿ ಕಾಣಿಸಿಕೊಂಡಿದ್ದಾಳೆ, ಅದರಲ್ಲೂ ಮುಖ್ಯವಾಗಿ ಅಮೇರಿಕನ್ ಸೋಪ್ ಒಪೆರಾ ದಿ ಬೋಲ್ಡ್ ಅಂಡ್ ದಿ ಬ್ಯೂಟಿಫುಲ್‌ನಲ್ಲಿ ಈಕೆ ಅದ್ಭುತವಾಗಿ ನಟಿಸಿದ್ದಳು.

ರಾಜಕುಮಾರಿ ಥಿಯೋಡೋರಾ ಹಾಗೂ ಮ್ಯಾಥ್ಯೂ ಕುಮಾರ್‌ ಭೇಟಿ

ಥಿಯೋಡೋರಾ 2016ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಮೆರಿಕನ್ ಮ್ಯಾಥ್ಯೂ ಕುಮಾರ್‌ನ ಭೇಟಿಯಾಗಿ, ಈ ಜೋಡಿ ನವೆಂಬರ್ 2018 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಾಜಕುಮಾರಿ 2019 ರಲ್ಲಿ, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಭಾರತೀಯ ಸಂಪ್ರದಾಯದಂತೆ ಅರಶಿನ ಶಾಸ್ತ್ರವನ್ನು ಆಚರಿಸಿಕೊಂಡಿದ್ದಳು. ಆದರೆ ಅರಶಿನ ಶಾಸ್ತ್ರದ ಬಳಿಕ ಇವರ ಮದುವೆಯನ್ನು ಎರಡು ಬಾರಿ ಮುಂದೂಡಲಾಗಿತ್ತು. ಮೊದಲು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಮತ್ತು ಮತ್ತೊಮ್ಮೆ 2023 ರಲ್ಲಿ ರಾಜಕುಮಾರಿ ಥಿಯೋಡೋರಾ ಅವರ ತಂದೆ ರಾಜ ಕಾನ್ಸ್ಟಂಟೈನ್ ಅವರ ಮರಣದ ನಂತರ. ಕೊನೆಗೆ 2024ರಲ್ಲಿ ಅಥೆನ್ಸ್ ಮೆಟ್ರೋಪಾಲಿಟನ್ ಕ್ಯಾಥೆಡ್ರಲ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಪ್ರೀತಿಸಿದವನಿಗಾಗಿ ರಾಜಮನೆತನವನ್ನು ತಿರಸ್ಕರಿಸಿದ ಅಕಿಶಿನೊ ರಾಜಕುಮಾರಿ ಮಾಕೊಗೆ ಈಗ ತಾಯ್ತನದ ಸಂಭ್ರಮ

ವರದಿ ಪ್ರಕಾರ, ಅವರ ಮದುವೆಗೂ ಮುನ್ನ, ದಂಪತಿ ಅಥೆನ್ಸ್‌ನಲ್ಲಿರುವ ಬೈಜಾಂಟೈನ್ ಮತ್ತು ಕ್ರಿಶ್ಚಿಯನ್ ಮ್ಯೂಸಿಯಂನಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಭೋಜನ ಕೂಟವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಯುರೋಪಿಯನ್ ರಾಜಮನೆತನದ ಸದಸ್ಯರು ಸೇರಿದಂತೆ ಹಲವಾರು ಗಣ್ಯ ಅತಿಥಿಗಳು ಭಾಗವಹಿಸಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »