Karunadu Studio

ಕರ್ನಾಟಕ

ENG vs WI: ಐಪಿಎಲ್‌ ವೇಳೆ ವಿರಾಟ್ ಕೊಹ್ಲಿ ನೀಡಿದ್ದ ನೆರವನ್ನು ನೆನೆದ ಜಾಕೋಬ್ ಬೆಥಲ್! – Kannada News | ENG vs WI: Jacob Bethell reveals Virat Kohli’s impact after match-winning 82 in 1st ODI against west Indies


ಎಜ್‌ಬಾಸ್ಟನ್‌: ಇಂಡಿಯನ್ ಪ್ರೀಮಿಯರ್ ಲೀಗ್‌ (IPL 2025) ಟೂರ್ನಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅವರೊಂದಿಗೆ ನಡೆಸಿದ ಸಂಭಾಷಣೆಯಿಂದ ನನ್ನ ಬ್ಯಾಟಿಂಗ್‌ಗೆ ನೆರವಾಗಿದೆ ಇಂಗ್ಲೆಂಡ್‌ ಯುವ ಆಲ್‌ರೌಂಡರ್ ಜಾಕೋಬ್‌ ಬೆಥೆಲ್‌ (Jacob Bethell) ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಮೇ 30 (ಶುಕ್ರವಾರ) ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 53 ಎಸೆತಗಳಲ್ಲೇ 82 ರನ್ ಸಿಡಿಸಿ ಪಂದ್ಯದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಜಾಕೋಬ್‌ ಬೆಥೆಲ್‌, ಪಡೆದ ನಂತರ ಬೇಥಲ್ ಕೊಹ್ಲಿ ಜೊತೆ ಹಂಚಿಕೊಂಡ ಅನುಭವವನ್ನು ಬಹಿರಂಗಪಡಿಸಿದ್ದಾರೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಇಂಗ್ಲೆಂಡ್ ತಂಡ, ಜಾಕೋಬ್‌ ಬೆಥೆಲ್‌ ಅವರ ಅರ್ಧಶತಕದ ನೆರವಿನಿಂದ 400 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತ್ತು. ಈ ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ 162 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಬೌಲಿಂಗ್‌ನಲ್ಲೂ ಗಮನ ಸೆಳೆದಿದ್ದ ಜಾಕೋಬ್‌ ಬೆಥೆಲ್‌ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.

IPL 2025: ʻಈ ಒಂದು ಕಾರಣದಿಂದಲೇ ವಿರಾಟ್‌ ಕೊಹ್ಲಿಯ ಮೇಲೆ ನನಗೆ ಗೌರವ ಜಾಸ್ತಿʼ: ಎಬಿಡಿ!

ಪಂದ್ಯ ಮುಗಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾಕೋಬ್‌ ಬೆಥೆಲ್‌, ಐಪಿಎಲ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಜೊತೆ ಕಳೆದ ಸಮಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿಗೆ ಸೇರ್ಪಡೆಯಾದ ನಂತರ ನಾನು ಟೂರ್ನಿಯಲ್ಲಿ ಆಡಲು ತುಂಬಾ ಉತ್ಸುಕತೆಯಿಂದ ಕಾಯುತ್ತಿದೆ. ಐಪಿಎಲ್ ಟೂರ್ನಿಯಲ್ಲಿ ಯುವ ಆಟಗಾರರು ಉತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದನ್ನು ನೋಡಲು ತುಂಬಾ ಖುಷಿಯಾಗುತ್ತಿತ್ತು,” ಎಂದು ಜಾಕೋಬ್‌ ಹೇಳಿದ್ದಾರೆ.

ವಿರಾಟ್ ದಿಗ್ಗಜ ಆಟಗಾರ

“ವಿರಾಟ್ ಕೊಹ್ಲಿ ನಿಜಕ್ಕೂ ದಿಗ್ಗಜ ಆಟಗಾರ. ಅವರು ಕ್ರಿಕೆಟ್ ಗೆ ಸಂಬಂಧಿಸಿದಂತೆ ಅನೇಕ ಸಂಗತಿಗಳನ್ನು ಹಂಚಿಕೊಳ್ಳಲು ಸಂತಸಪಡುತ್ತಿದ್ದರು. ಅಲ್ಲದೆ ಆಂಡಿ ಫ್ಲವರ್ ಕೂಡ ಉತ್ತಮ ತರಬೇತುದಾರರು. ವಿರಾಟ್ ಕೊಹ್ಲಿ ಜೊತೆಗೆ ಇನಿಂಗ್ಸ್ ಆರಂಭಿಸಲು ಮೈದಾನಕ್ಕೆ ಇಳಿಯುತ್ತಿದ್ದಾಗ ನನ್ನ ಶಕ್ತಿ ಹೆಚ್ಚಾಗುತ್ತಿತ್ತು. ಅದನ್ನು ಪಂದ್ಯದಲ್ಲೂ ತೋರಿಸುತ್ತಿದ್ದೆ” ಎಂದು ಜೇಕಬ್ ಬೇಥಲ್ ಹೇಳಿದ್ದಾರೆ.

IPL 2025: ʻದಿಗ್ವೇಶ್‌ ರಾಠಿಯನ್ನು ಬ್ಯಾನ್‌ ಮಾಡಬಾರದಿತ್ತುʼ-ಎಲ್‌ಎಸ್‌ಜಿ ಬೌಲರ್‌ಗೆ ಸೆಹ್ವಾಗ್‌ ಬೆಂಬಲ!

ಜಾಕೋಬ್‌ ಬೆಥೆಲ್‌ ಐಪಿಎಲ್ ಪಯಣ

ದುಬೈನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ 2.8 ಕೋಟಿ ರೂ.ಗಳನ್ನು ನೀಡಿ ಜಾಕೋಬ್‌ ಬೆಥೆಲ್‌ ಅವರನ್ನು ಖರೀದಿಸಿತ್ತು. ಆರಂಭಿಕ ಪಂದ್ಯಗಳಲ್ಲಿ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆಯದ ಇಂಗ್ಲೆಂಡ್‌ ಆಟಗಾರ, ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿ 12 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಆದರೆ, ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ 55 (33 ಎಸೆತ) ರನ್‌ ಗಳಿಸಿ ಅರ್ಧಶತಕವನ್ನು ಸಿಡಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಆದರೆ ವೆಸ್ಟ್‌ ಇಂಡೀಸ್‌ ವಿರುದ್ದದ ಏಕದಿನ ಸರಣಿಯ ಕಾರಣ ಅವರು ಐಪಿಎಲ್‌ ಟೂರ್ನಿಯ ಪ್ಲೇಆಫ್ಸ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರ ಸ್ಥಾನಕ್ಕೆ ನ್ಯೂಜಿಲೆಂಡ್‌ ತಂಡದ ವಿಕೆಟ್‌ ಕೀಪರ್‌ ಟಿಮ್‌ ಸೈಫರ್ಟ್‌ ಬಂದಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »