Karunadu Studio

ಕರ್ನಾಟಕ

MB Patil: ಬೆಂಗಳೂರಿನಲ್ಲಿ 1,100 ಕೋಟಿ ವೆಚ್ಚದಲ್ಲಿ ಇಂಡಿಗೋ ಎಂಆರ್‌ಒ ಕೇಂದ್ರ: ಎಂ.ಬಿ. ಪಾಟೀಲ್ – Kannada News | MB Patil MB Patil latest statement in bengaluru


ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಿ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ- ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಸಂಪೂರ್ಣ ನವೀಕರಣದ (ಎಂಆರ್‌ಒ) ಸೌಲಭ್ಯ ಆರಂಭಿಸಲು ₹1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ. ಇಂಡಿಗೊ-ದ ಈ ಮಹತ್ವದ ನಿರ್ಧಾರವನ್ನು ಸ್ವಾಗತಿಸಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil) ಅವರು, ʼಅತ್ಯಾಧುನಿಕ ʼಎಂಆರ್‌ಒʼ ಸೌಲಭ್ಯಕ್ಕೆ ಇಂಡಿಗೋ ಮಾಡಲಿರುವ ಬಂಡವಾಳ ಹೂಡಿಕೆಯು, ಕರ್ನಾಟಕವನ್ನು ಏಷ್ಯಾದ ʼಎಂಆರ್‌ಒʼ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸುವ ನಮ್ಮ ಮುನ್ನೋಟವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.

ಈ ಉಪಕ್ರಮವು ರಾಜ್ಯದಲ್ಲಿ ಉನ್ನತ ಗುಣಮಟ್ಟದ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿರುವ ಜತೆಗೆ ಬೆಂಗಳೂರಿನಲ್ಲಿ ಜಾಗತಿಕ ಸ್ಪರ್ಧಾತ್ಮಕ ವಿಮಾನಯಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ ಎಂದು ಹೇಳಿದ್ದಾರೆ.

ʼಈ ʼಎಂಆರ್‌ಒʼ ಘಟಕ ನಿರ್ಮಾಣದಿಂದ ಬೆಂಗಳೂರು ಈಗ ʼಏಷ್ಯಾದ ಎಂಆರ್‌ಒ ಕೇಂದ್ರʼವಾಗಿ ಬೆಳೆಯಲಿದೆ. ಕರ್ನಾಟಕವು ಈಗ ವಿಮಾನಯಾನ ಮೂಲಸೌಲಭ್ಯ ಕ್ಷೇತ್ರದಲ್ಲಿ ಪ್ರಾದೇಶಿಕ ನಾಯಕತ್ವಕ್ಕೆ ಭಾಜನವಾಗಲಿದೆ. ಕೈಗಾರಿಕಾ ಬೆಳವಣಿಗೆ ಮತ್ತು ಗರಿಷ್ಠ ಪರಿಣತಿಯ ಉದ್ಯೋಗ ಸೃಷ್ಟಿಗೆ ರಾಜ್ಯದ ಬದ್ಧತೆಯನ್ನು ಪುನರುಚ್ಚರಿಸಲಿದೆ. ವೈಮಾಂತರಿಕ್ಷ ವಲಯದ ಅಭಿವೃದ್ಧಿ ಮತ್ತು ವಿಮಾನಯಾನ ಕ್ಷೇತ್ರದ ತಯಾರಿಕೆಗೆ ಉತ್ತೇಜನ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಬದ್ಧವಾಗಿದೆʼ ಎಂದು ಹೇಳಿದ್ದಾರೆ.

31 ಎಕರೆ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬರಲಿರುವ ಇಂಡಿಗೊದ ʼಎಂಆರ್‌ಒʼ ಸೌಲಭ್ಯವು ಮೂಲಸೌಲಭ್ಯ, ಯಂತ್ರೋಪಕರಣ, ಘಟಕ ನಿರ್ಮಾಣ ಮತ್ತಿತರ ಉದ್ದೇಶಗಳಿಗೆ ₹ 1,100 ಕೋಟಿಗೂ ಹೆಚ್ಚಿನ ಮೊತ್ತದ ಬಂಡವಾಳ ಹೂಡಿಕೆ ಮಾಡಲಿದೆ.

ಎಂಆರ್‌ಒ ಸೌಲಭ್ಯದಲ್ಲಿ ಲಭ್ಯ ಇರಲಿರುವ ಅನುಕೂಲತೆಗಳು

  • 4 ದೊಡ್ಡ ಮತ್ತು 8 ಚಿಕ್ಕ ವಿಮಾನಗಳ ಸರ್ವೀಸ್‌ಗೆ ನೆರವಾಗಲಿರುವ 4 ಹ್ಯಾಂಗರ್‌ಗಳು
  • 1 ದೊಡ್ಡ ಮತ್ತು 2 ಚಿಕ್ಕ ವಿಮಾನಗಳಿಗೆ ಅವಕಾಶ ಕಲ್ಪಿಸಲಿರುವ ಒಂದು ಪೇಂಟ್‌ ಹ್ಯಾಂಗರ್‌
  • ಇಂಡಿಗೊ ಹೊಸದಾಗಿ ಸೇರ್ಪಡೆ ಮಾಡಲಿರುವ ದೊಡ್ಡ ಗಾತ್ರದ ಎ350 ವಿಮಾನಗಳು ಮತ್ತು ಎ320/ಎ321ಎಕ್ಸ್‌ಎಲ್‌ಆರ್‌ ವಿಮಾನಗಳಿಗೆ ನೆರವು
  • ಇಂಡಿಗೊದ ಪಾಲುದಾರ ವಿಮಾನಯಾನ ಸಂಸ್ಥೆಗಳ ವಿಮಾನಗಳ ಸರ್ವೀಸ್‌ಗೂ ಅವಕಾಶ
  • ಈ ʼಎಂಆರ್‌ಒʼ ಸೌಲಭ್ಯವು ಜಾಗತಿಕ ವಿಮಾನಯಾನ ಕೇಂದ್ರವಾಗಿ ಬೆಂಗಳೂರಿನ ಸ್ಥಾನಮಾನ ಹೆಚ್ಚಿಸಲಿದ್ದು, ದೇಶದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಬಲಪಡಿಸಲಿದೆ.
  • ಈ ಯೋಜನೆಯು ಎಂಜಿನಿಯರಿಂಗ್‌, ಸರಕು ಸಾಗಣೆ, ಉಗ್ರಾಣ ಮತ್ತು ಪೂರಕ ಸೇವಾಕ್ಷೇತ್ರಗಳಲ್ಲಿ 750 ನೇರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. 2031ರ ವೇಳೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು 1,300 ಕ್ಕೆ ಹೆಚ್ಚಿಸಲಿದೆ.
  • ಎಲ್ಲಕ್ಕಿಂತ ಮುಖ್ಯವಾಗಿ, ಈ ಸೌಲಭ್ಯವು ಜಾಗತಿಕ ಪ್ರಮುಖ ಮೂಲ ಸಲಕರಣೆ ತಯಾರಿಕಾ (ಒಇಎಂ) ಕಂಪನಿಗಳು, ಪೂರೈಕೆದಾರರನ್ನು ಆಕರ್ಷಿಸಲಿದ್ದು, ಪೂರಕ ಕೈಗಾರಿಕೆಗಳಿಗೆ ಉತ್ತೇಜನ ನೀಡಲಿದೆ.

ಈ ಸುದ್ದಿಯನ್ನೂ ಓದಿ |Karnataka Rains: ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರಕ್ಕೆ ಒಂದೇ ದಿನ ಐವರ ಬಲಿ; ತಲಾ 6 ಲಕ್ಷ ಪರಿಹಾರ ಘೋಷಣೆ

ಏರ್‌ ಇಂಡಿಯಾ, ಟಿಎಎಸ್‌ಎಲ್‌, ಎಚ್‌ಎಎಲ್‌ – ಎಂಆರ್‌ಒ ಸೌಲಭ್ಯಗಳ ಸಾಲಿಗೆ ಈಗ ಇಂಡಿಗೊ ಸೇರ್ಪಡೆಯು ವಿಮಾನಯಾನ ಕ್ಷೇತ್ರದಲ್ಲಿನ ನಾವೀನ್ಯತೆ, ತಯಾರಿಕೆ ಮತ್ತು ನಿರ್ವಹಣೆ ವಲಯಗಳಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಆದ್ಯತಾ ತಾಣವನ್ನಾಗಿ ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »