Karunadu Studio

ಕರ್ನಾಟಕ

Star Fashion: ಡಿಸೈನರ್ ಕಾರ್ಸೆಟ್ ರೆಡಿ ಸೀರೆ ಸ್ಟೈಲಿಂಗ್‌ನಲ್ಲಿ ನಟಿ ಕಾಜೋಲ್ ವೈಲ್ಡ್ ಲುಕ್ – Kannada News | Star Fashion Actress Kajol wild look in designer corset ready saree styling


-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಾರ್ಸೆಟ್ ಸೀರೆ ಬ್ಲೌಸ್ ಫ್ಯಾಷನ್‌ನಲ್ಲಿ ಬಾಲಿವುಡ್ ನಟಿ ಕಾಜೋಲ್ ವೈಲ್ಡ್ ಲುಕ್‌ನಲ್ಲಿ (Star Fashion) ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್ ಮಾನೋಕ್ರೋಮ್ ಕಲರ್‌ನ ಸೀರೆಗೆ ಬಾಡಿಕಾನ್ ಜ್ಯುವೆಲ್ಡ್ ಕಾರ್ಸೆಟ್ ಧರಿಸಿ, ಡಿಫರೆಂಟ್ ಸ್ಟೈಲಿಂಗ್‌ನಲ್ಲಿ ಪೋಸ್ ನೀಡಿದ್ದಾರೆ. ಹಿಂದಿ ಚಲನಚಿತ್ರ ಮಾ ಸಿನಿಮಾ ಪ್ರಮೋಷನ್‌ನಲ್ಲಿ ಈ ಲುಕ್‌ನಲ್ಲಿ ಕಾಣಿಸಿಕೊಂಡ ಕಾಜೋಲ್, ಫ್ಯಾಷನ್ ಪ್ರಿಯರ ಗಮನ ಸೆಳೆದರು. ಹಿಂದೆಂದಿಗಿಂತ ವಿಭಿನ್ನ ಇಮೇಜ್‌ನಲ್ಲಿ ಕಾಣಿಸಿಕೊಂಡರು. ನಟಿ ಕಾಜೋಲ್ ಈ ಬಾರಿ ಪ್ರಯೋಗಾತ್ಮಕ ಸೀರೆ ಫ್ಯಾಷನ್‌ಗೆ ಸೈ ಎಂದಿದ್ದರು. ಸಾಮಾನ್ಯವಾದ ಸೀದಾ ಸಾದಾ ಕಾರ್ಸೆಟ್ ಬ್ಲೌಸ್ ಧರಿಸುವ ಬದಲು, ಜ್ಯುವೆಲ್ಡ್ ವಿನ್ಯಾಸದ ಬಾಡಿಕಾನ್ ಡಿಸೈನ್‌ಗೆ ಮೊರೆ ಹೋಗಿದ್ದರು.

ಸ್ಟ್ರಾಪ್ ಇರುವಂತಹ ಈ ಕಾರ್ಸೆಟ್ ಬ್ಲೌಸನ್ನು ಸಾದಾ ಬ್ಲ್ಯಾಕ್ ಕಲರ್‌ನ ಸೀರೆಗೆ ಜತೆಯಾಗಿಸಿದ್ದರು. ಇದೊಂದು ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವಂತಹ ಪ್ರಯೋಗಾತ್ಮಕ ಸೀರೆ ಸ್ಟೈಲಿಂಗ್! ನನಗೆ ಇಷ್ಟವಾಗಿದೆ ಹಾಗೂ ಧರಿಸಿದಾಗ ಖುಷಿ ನೀಡಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುವಾಗ ತಮ್ಮ ಈ ಕಾರ್ಸೆಟ್ ಸೀರೆ ಸ್ಟೈಲಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ.

Star Fashion 1

ಸೆಲೆಬ್ರೆಟಿಗಳ ಪ್ರೀತಿ ಪಾತ್ರವಾಗಿರುವ ಕಾರ್ಸೆಟ್ ಬ್ಲೌಸ್

ಅಂದಹಾಗೆ, ನಟಿ ಕಾಜೋಲ್ ಮಾತ್ರವಲ್ಲ, ಸಾಕಷ್ಟು ಸೆಲೆಬ್ರೆಟಿಗಳು ಇತ್ತೀಚೆಗೆ ಗ್ಲಾಮರಸ್ ಲುಕ್ ನೀಡುವ ಹಾಗೂ ಫಿಟ್ ಬಾಡಿಯನ್ನು ಪ್ರದರ್ಶಿಸುವ ಕಾರ್ಸೆಟ್ ಬ್ಲೌಸ್‌ಗಳತ್ತ ಮುಖ ಮಾಡಿದ್ದಾರೆ. ಧರಿಸಿದಾಗ ಸೆಲೆಬ್ರೆಟಿ ಲುಕ್ ನೀಡುವ ಇವು ಫ್ಯಾಷನ್ ಲೋಕದಿಂದ ಸಿನಿಮಾ ಲೋಕಕ್ಕೆ ಇತ್ತೀಚೆಗೆ ಅಮದಾಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಣಾ. ಅವರ ಪ್ರಕಾರ, ನಟಿ ಕಾಜೋಲ್ ಈ ಕಾರ್ಸೆಟ್ ರೆಡಿ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವುದರೊಂದಿಗೆ ವೈಲ್ಡ್ ಲುಕ್‌ಗೆ ನಾಂದಿ ಹಾಡಿದ್ದಾರೆ.

Star Fashion 2

ಜ್ಯುವೆಲ್ಡ್ ಕಾರ್ಸೆಟ್ ಬ್ಲೌಸ್ ವಿಶೇಷತೆ

ಸಾಮಾನ್ಯವಾಗಿ ಕಾರ್ಸೆಟ್ ಬ್ಲೌಸ್‌ಗಳು ಬಾಡಿಗೆ ಅಂಟಿಕೊಂಡಂತಿರುತ್ತವೆ. ಕಾಜೋಲ್ ಧರಿಸಿರುವ ಈ ಬ್ಲೌಸ್ ಶೋಲ್ಡರ್‌ನಲ್ಲೂ ಜ್ಯುವೆಲ್ ವಿನ್ಯಾಸ ಹೊಂದಿದ್ದು, ಮಿನಿ ಆಭರಣಗಳು ಈ ಕಾರ್ಸೆಟನ್ನು ಸಿಂಗರಿಸಿವೆ. ಬ್ಲ್ಯಾಕ್ ಶೇಡ್ ಆದರೂ ಕೂಡ ಇವು ಅವರನ್ನು ಎದ್ದು ಕಾಣುವಂತೆ ಮಾಡಿವೆ. ಹಾಗಾಗಿ ಇಡೀ ಸೀರೆಯ ಸ್ಟೈಲಿಂಗ್‌ಗೆ ಇವು ಸಾಥ್ ನೀಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್‌ಗಳು.

Star Fashion 3

ಕಾಜೋಲ್ ಸ್ಟೈಲಿಂಗ್

ಕಾರ್ಸೆಟ್ ಬ್ಲೌಸ್ ಗ್ರ್ಯಾಂಡ್ ಆಗಿರುವುದರಿಂದ ಕಾಜೋಲ್ ಜ್ಯುವೆಲರಿ ಧರಿಸುವ ಅಗತ್ಯ ಬಿದ್ದಿಲ್ಲ! ಹಣೆಯ ಬಿಂದಿ ಫೆಮಿನೈನ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Season End Sale: ಸೀಸನ್‌ಗೂ ಮುನ್ನವೇ ಆರಂಭವಾಯ್ತು ಸಮ್ಮರ್‌ ಎಂಡ್‌ ಸೇಲ್‌



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »