Karunadu Studio

ಕರ್ನಾಟಕ

PKL Season 12 Auction: ಇಂದು, ನಾಳೆ ಪ್ರೊ ಕಬಡ್ಡಿ ಆಟಗಾರರ ಹರಾಜು – Kannada News | PKL Season 12 Auction: Everything you need to know about Pro Kabaddi League Season 12 Player Auction rules


ಮುಂಬಯಿ: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ (Pro Kabaddi League) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ(PKL Season 12 Auction) ಇಂದು(ಶನಿವಾರ) ಮತ್ತು ನಾಳೆ(ಜೂನ್ 1) ಮುಂಬೈನಲ್ಲಿ ನಡೆಯಲಿದೆ. 500 ಕ್ಕೂ ಅಧಿಕ ಆಟಗಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಲೀಗ್‌ನಲ್ಲಿರುವ 12 ಫ್ರಾಂಚೈಸಿಗಳು ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ತನ್ನತ್ತ ಸೆಳೆಯಲು ಪೈಪೋಟಿ ನಡೆಸಲಿವೆ. ಈ ಬಾರಿ ಹರಾಜಿನಲ್ಲಿ ಅನುಭವಿ ಆಟಗಾರರ ದೊಡ್ಡ ಪಟ್ಟಿ ಕಾಣಿಸಿಕೊಂಡಿದೆ. ಪ್ರದೀಪ್‌ ನರ್ವಾಲ್‌, ಪವನ್‌ ಸೆಹ್ರಾವತ್‌, ಮಣಿಂದರ್‌ ಸಿಂಗ್‌, ನವೀನ್‌ ಕುಮಾರ್‌, ಅರ್ಜುನ್‌ ದೇಸ್ವಾಲ್‌ ಸೇರಿ ಹಲವರಿದ್ದಾರೆ.

12 ತಂಡಗಳು ಈಗಾಗಲೇ ಮೂರು ವಿಭಾಗಗಳಲ್ಲಿ ಒಟ್ಟು 83 ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್ ರಿಟೈನ್ಡ್ ಪ್ಲೇಯರ್ಸ್ (ERP) ವಿಭಾಗದಲ್ಲಿ 25, ರಿಟೈನ್ಡ್ ಯಂಗ್ ಪ್ಲೇಯರ್ಸ್ (RYP) ವಿಭಾಗದಲ್ಲಿ 23 ಮತ್ತು ನ್ಯೂ ಯಂಗ್ ಪ್ಲೇಯರ್ಸ್ (NYP) ವಿಭಾಗದಲ್ಲಿ 35 ಆಟಗಾರರಿದ್ದಾರೆ. ಹರಾಜಿನಲ್ಲಿ ಗರಿಷ್ಠ 217 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. 5 ಕೋಟಿ ರೂ. ಬಜೆಟ್‌ ಮಿತಿ ಹೊಂದಿದೆ. ಹರಾಜು ಪ್ರಕ್ರಿಯೆ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ನೇರಪ್ರಸಾರ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಇರಲಿದೆ.

ಸುನಿಲ್ ಕುಮಾರ್ ಮತ್ತು ಅಮೀರ್ ಮೊಹಮ್ಮದ್ ಜಫರ್ದಾನೇಶ್ (ಯು ಮುಂಬಾ), ಜೈದೀಪ್ ದಹಿಯಾ (ಹರಿಯಾಣ ಸ್ಟೀಲರ್ಸ್), ಸುರೇಂದರ್ ಗಿಲ್ (ಯುಪಿ ಯೋಧಾಸ್), ಮತ್ತು ಪುಣೇರಿ ಪಲ್ಟನ್ ಜೋಡಿಯಾದ ಅಸ್ಲಾಮ್ ಇನಾಮದಾರ್ ಮತ್ತು ಮೋಹಿತ್ ಗೋಯತ್ ತಮ್ಮ ತಂಡಗಳಿಂದ ಉಳಿಸಿಕೊಂಡಿರುವ ಅಗ್ರ ಆಟಗಾರರು.

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌

ಪ್ರತಿ ವರ್ಗಕ್ಕೂ ಮೂಲ ಬೆಲೆ

ವರ್ಗ ಎ: 30 ಲಕ್ಷ

ವರ್ಗ ಬಿ: 20 ಲಕ್ಷ

ವರ್ಗ ಸಿ: 13 ಲಕ್ಷ

ವರ್ಗ ಡಿ: 9 ಲಕ್ಷ



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »