Karunadu Studio

ಕರ್ನಾಟಕ

MI IPL Playoffs record: ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್/ನಾಕೌಟ್‌ ಸಾಧನೆ – Kannada News | MI IPL Playoffs record: Mumbai Indians win/loss record; Stats, most runs, wickets


ಅಹಮದಾಬಾದ್‌: ಗುಜರಾತ್‌ ತಂಡವನ್ನು ಎಲಿಮಿನೇಟರ್‌ ಪಂದ್ಯದಲ್ಲಿ ಮಣಿಸಿ ದ್ವಿತೀಯ ಕ್ವಾಲಿಫೈಯರ್‌ ಪ್ರವೇಶಿಸಿರುವ ಮುಂಬೈ ಇಂಡಿಯನ್ಸ್‌ ತಂಡ(Mumbai Indians) ಭಾನುವಾರ ಅಹಮದಾಬಾದ್‌ನಲ್ಲಿ ನಡೆಯುವ ಕ್ವಾಲಿಫೈಯರ್‌-2 ಪಂದ್ಯದಲ್ಲಿ ಕ್ವಾಲಿಫೈಯರ್‌-1ರಲ್ಲಿ ಸೋತ ಪಂಜಾಬ್‌ ಕಿಂಗ್ಸ್‌(mi vs pbks qualifier 2) ವಿರುದ್ಧ ಸೆಣಸಾಡಲಿದೆ. ಅದರಲ್ಲಿ ಗೆದ್ದ ತಂಡ ಜೂ.3ರಂದು ಅಹಮದಾಬಾದ್‌ನಲ್ಲಿ ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಆಡಲಿದೆ. ಐಪಿಎಲ್‌ನ ಇದುವರೆಗಿನ ಪ್ಲೇ ಆಫ್‌/ ನಾಕೌಟ್‌ ಪಂದ್ಯಗಳಲ್ಲಿ ಮುಂಬೈ ತಂಡದ(MI IPL Playoffs record) ದಾಖಲೆ ಹೇಗಿದೆ ಎಂಬ ವರದಿ ಇಲ್ಲಿದೆ.

6 ಬಾರಿ ಫೈನಲ್‌ ಪ್ರವೇಶ

ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್‌ ತಂಡ ಕಳೆದ 17 ಆವೃತ್ತಿಯ ಐಪಿಎಲ್‌ ಇತಿಹಾಸದಲ್ಲಿ ಒಟ್ಟು 6 ಬಾರಿ ಫೈನಲ್‌ ಪ್ರವೇಶಿಸಿದೆ. ಈ ಪೈಕಿ ಗರಿಷ್ಠ 5 ಬಾರಿ ಚಾಂಪಿಯನ್‌ ಆಗಿದೆ. ಕೇವಲ ಒಂದು ಬಾರಿ ಮಾತ್ರ ಸೋಲು ಕಂಡಿದೆ. 5 ಟ್ರೋಫಿ ಕೂಡ ರೋಹಿತ್‌ ಶರ್ಮ ನಾಯಕತ್ವದಲ್ಲಿ ಒಲಿದಿತ್ತು. ಇದೀಗ 6ನೇ ಪ್ರಶಸ್ತಿ ಗೆಲ್ಲಲು ಇನ್ನೆರಡು ಮೆಟ್ಟಿಲು ಹತ್ತಬೇಕಿದೆ. ಈ ಬಾರಿ ಹಾರ್ದಿಕ್‌ ಪಾಂಡ್ಯ ತಂಡದ ನಾಯಕನಾಗಿದ್ದಾರೆ.

ಮುಂಬೈ ಇಂಡಿಯನ್ಸ್‌ ಪ್ಲೇ ಆಫ್/ನಾಕೌಟ್‌ ಸಾಧನೆ

2010 – ಫೈನಲ್ (ಚೆನ್ನೈ ವಿರುದ್ಧ 22 ರನ್‌ಗಳಿಂದ ಸೋಲು)

2011 – ಎಲಿಮಿನೇಟರ್ (ಆರ್‌ಸಿಬಿ ವಿರುದ್ಧ 43 ರನ್‌ಗಳಿಂದ ಸೋಲು)

2012 – ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 38 ರನ್‌ಗಳಿಂದ ಸೋಲು)

2013 – ಫೈನಲ್ಸ್ (ಚೆನ್ನೈ ವಿರುದ್ಧ 23 ರನ್‌ಗಳಿಂದ ಜಯ)

2014 – ಕ್ವಾಲಿಫೈಯರ್ 2 (ಚೆನ್ನೈ ವಿರುದ್ಧ 7 ವಿಕೆಟ್‌ಗಳಿಂದ ಸೋಲು)

2015 – ಫೈನಲ್ಸ್ (ಚೆನ್ನೈ ವಿರುದ್ಧ 41 ರನ್‌ಗಳಿಂದ ಜಯ)

2017 – ಫೈನಲ್ಸ್ (ರೈಸಿಂಗ್ ಪುಣೆ ವಿರುದ್ಧ 1 ರನ್‌ನಿಂದ ಜಯ)

2019 – ಫೈನಲ್ (ಚೆನ್ನೈ ವಿರುದ್ಧ 1 ರನ್‌ನಿಂದ ಜಯ)

2020 – ಫೈನಲ್ (ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್‌ ಜಯ)

2023 – ಎಲಿಮಿನೇಟರ್ (ಗುಜರಾತ್ ವಿರುದ್ಧ 62 ರನ್‌ ಸೋಲು)

2025- ಎಲಿಮಿನೇಟರ್ (ಗುಜರಾತ್ ವಿರುದ್ಧ 20 ರನ್‌ ಗೆಲುವು)

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »