Karunadu Studio

ಕರ್ನಾಟಕ

Chikkaballapur News: ಗಮನ ಸೆಳೆದ ಕಾವ್ಯಶ್ರೀ ನಾಗರಾಜ ತಂಡದ ಭರತನಾಟ್ಯ ಹಾಗೂ ಕಥಕ ನೃತ್ಯ ಪ್ರದರ್ಶನ – Kannada News | Bharatanatyam and Kathak dance performances by Kavyashree Nagaraj troupe attract attention


ಚಿಕ್ಕಬಳ್ಳಾಪುರ : ನಂದಿ ಬೆಟ್ಟದ ಮೇಲಿನ ಶ್ರೀ ಭೋಗನಂದೀಶ್ವರ ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ಸುಪುತ್ರಿ ಕಾವ್ಯಾನಾಗರಾಜ್ ಮತ್ತು ತಂಡದಿಂದ ಮೂಡಿ ಬಂದ ಭರತನಾಟ್ಯ ಮತ್ತು ಕಥಕ್ ನೃತ್ಯ ಪ್ರದರ್ಶನ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

ಇತ್ತೀಚೆಗೆ ನಗರದಲ್ಲಿ ನಡೆದ ನೂತನ ಕನ್ನಡ ಭವನದ ಉದ್ಘಾಟನೆ ಮತ್ತು ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕಾವ್ಯಶ್ರೀ ನಾಗರಾಜ್ ಮತ್ತವರ ತಂಡ ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.ಕಾವ್ಯಶ್ರೀ ಅವರು ಅಂತರಾಷ್ಟಿçÃಯ ನೃತ್ಯ ಕಲಾವಿದೆಯಾಗಿದ್ದು ಕಾವ್ಯಶ್ರೀ ಆರ್ಟ್ ಫೌಂಡೇಷನ್ ಕಟ್ಟಿಕೊಂಡು ದೇಶವಿದೇಶಗಳಲ್ಲಿ ಸಾಕಷ್ಟು ಕಾರ್ಯಕ್ರಮ ಕೊಟ್ಟಿರುವ ಕೀರ್ತಿಗೆ ಪಾತ್ರವಾಗಿದ್ದಾರೆ.

ಇದನ್ನೂ ಓದಿ: Chikkaballapur News: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯ

ನಂದಿಬೆಟ್ಟದ ಶ್ರೀ ಯೋಗನಂದೀಶ್ವರ ಸ್ವಾಮಿ ದೇವಾಲಯದ ಅರ್ಚಕರಾದ ಟಿ.ಎನ್.ನಾಗರಾಜ ರವರ ಸುಪುತ್ರಿಯಾದ ಶ್ರೀಮತಿ ಕಾವ್ಯಶ್ರೀನಾಗರಾಜ ಹಾಗೂ ಅವರ ನೃತ್ಯ ತಂಡದಿಂದ ” “ಭರತ ನಾಟ್ಯ”ಹಾಗೂ ಕಥಕ ನೃತ್ಯವನ್ನು ಏರ್ಪಡಿಸಿದ್ದು ಈ ಮನಮೋಹಕ  ನೃತ್ಯಗಳು ಅಲ್ಲಿ ನೆರದಿದ್ದ ಕಲಾಭಿಮಾನಿಗಳ ಮನಸೊರೆಗೊಂಡಿದ್ದು ಚಪ್ಪಾಳೆ ಯೊಂದಿಗೆ ಮೆಚ್ಚುಗೆಗೆ ಪಾತ್ರವಾಯಿತು. ಕಾವ್ಯಶ್ರೀನಾಗರಾಜರವರ ಶಿಶ್ಯೆಯರಾದ ಅಭಿಷ್ಠಾ, ಸಿಂಚನ, ಪ್ರಿಷ್ರಾ, ವಾಗ್ಮಿ, ಲಿಖಿತ,  ವೇದಿಕಾ,  ಗ್ರೀಷ್ಮಾ, ಅನನ್ಯ, ವೈಷ್ಣವಿ  ಹಾಗೂ ಪ್ರೇರಣ ರವರು ಕಾವ್ಯಶ್ರೀನಾಗರಾಜರವರ ಜೊತೆಗೂಡಿ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಪಿ.ಎನ್.ರವೀಂದ್ರರವರು ಕಾವ್ಯಶ್ರೀ ನಾಗರಾಜರವರನ್ನು ಹಾಗೂ ತಂಡದ ಎಲ್ಲಾ ನೃತ್ಯಕಲಾವಿದರನ್ನು ಶಾಲು ಹೊದಿಸಿ ಸನ್ಮಾನಿಸಿ ದರು.

ಈ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ|| ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್ ಡಿ.ಎಚ್., ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಯರಾಮ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಕೋಡಿರಂಗಪ್ಪ , ಡಿ.ವೈ.ಎಸ್.ಪಿ. ಶಿವಕುಮಾರ್, ಸಮ್ಮೇಳನಾಧ್ಯಕ್ಷ ಗೋಪಾಲ ಗೌಡ ಕಲ್ವಮಂಜಲಿ,ಸುವರ್ಣ ಟಿ.ವಿ.ಚಾನಲ್ ಜಿಲ್ಲಾ ವರದಿಗಾರರಾದ ರವಿಕುಮಾರ್, ಪತ್ರಕರ್ತ ಟಿ.ಎಸ್. ನಾಗೇಂದ್ರಬಾಬುÄ , ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವ ಎನ್.ಲೋಕ ನಾಥ ಇತ್ಯಾದಿ ಪ್ರಮುಖರು ಉಪಸ್ಥಿತರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »