Karunadu Studio

ಕರ್ನಾಟಕ

MLA K H P: ಡಿಸಿಸಿ ಬ್ಯಾಂಕ್ ಕೆಎಚ್‌ಪಿ ಬಣದ ವಶ ಸಂತಸ ವ್ಯಕ್ತಪಡಿಸಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ – Kannada News | MLA K.H. Puttaswamy Gowda expressed happiness over the capture of DCC Bank by the KHP faction.


ಗೌರಿಬಿದನೂರು : ಡಿಸಿಸಿ ಬ್ಯಾಂಕ್ ಮಹಿಳೆಯರ ಮತ್ತು ರೈತರ ಹಾಗೂ ದುರ್ಬಲರ ಅರ್ಥಿಕ ಅಭಿವೃದ್ದಿಗೆ ಸಹಕಾರಿ ಅಗಿದೆ.ಇಂತಹ ಮಹತ್ವದ ಬ್ಯಾಂಕ್ ನಮ್ಮ ಬಣದ ವಶವಾಗಿರುವುದು ಸಂತಸದ ವಿಷಯವಾಗಿದೆ ಶಾಸಕ ಕೆ,ಎಚ್,ಪುಟ್ಟಸ್ವಾಮಿಗೌಡ ತಿಳಿಸಿದರು.

ನಗರದಲ್ಲಿ ಡಿಸಿಸಿ ಬ್ಯಾಂಕ್‌ಗೆ ನೂತನ ನಿರ್ದೇಶಕ ಕೆ.ಎನ್.ವೆಂಕಟರಾಮಿರೆಡ್ಡಿ ಪದಗ್ರಹಣ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಡಿಸಿಸಿ ಬ್ಯಾಂಕ್ ದಶಕಗಳಿಂದ ಬೇರೆಯವರ ವಶದಲ್ಲಿದ್ದು ಇದೀಗ ಕೆಎಚ್‌ಪಿ ಬಣದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಬೆಂಬಲಿ ಗರ ಪಾಲಾಗಿದೆ. ಇದು ಸಂತಸದ ವಿಷಯವಾಗಿದೆ. ರೈತರಿಗೆ ಮಹಿಳೆಯರಿಗೆ  ಸಹಕಾರ ಸಂಘಗಳಿಗೆ ಸಾಲದ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ನಾವು ಸಂಭ್ರಮಿಸಬೇಕಾಗಿದೆ, ಯಾವುದೇ ಅಕ್ರಮ ಗಳಿಗೆ ಅಸ್ಪದ ನೀಡದೆ ಪಾರದರ್ಶಕ ಅಡಳಿತ ನೀಡಬೇಕಿದೆ.ಹೀಗಾದಾಗ ಮಾತ್ರವೇ ನಮ್ಮ ಬಣಕ್ಕೆ ಕೀರ್ತಿ ತಂದಂತೆ ಅಗುತ್ತದೆ ಎಂದು ಕಿವಿ ಮಾತು ಹೇಳಿದರು.

ಇದನ್ನೂ ಓದಿ: Chikkaballapur News: ವಿಚಕ್ಷಣ ಜಾಗೃತ ದಳ ಸಿಬ್ಬಂದಿ ನೇಮಕಾತಿ ಸುತ್ತೋಲೆ ವಾಪಸ್ಸು ಪಡೆಯಲಿ : ಅತಿಥಿ ಉಪನ್ಯಾಸಕ ಸಂಘ ಆಗ್ರಹ

ಎನ್.ಸಿ ನಾಗಯ್ಯರೆಡ್ಡಿ ಅವರನ್ನು ಸ್ಮರಿಸಿದ ಶಾಸಕ;
ದಶಕಗಳ ಹಿಂದೆಯೇ ಈ ಭಾಗದ ರೈತರು ಮತ್ತು ಮಹಿಳೆಯರ ಸಂಕಷ್ಟಗಳನ್ನು ಅರಿತಿದ್ದ ಎನ್‌ಸಿ ನಾಗಯ್ಯರೆಡ್ಡಿ ಯವರ ದೂರದೃಷ್ಥಿ ಮೆಚ್ಚಲೇಬೇಕು ಅವರ ಈ ದೂರದೃಷಿ ಫಲವಾಗಿ ಬ್ಯಾಂಕ್ ನಿರ್ಮಾಣವಾಗಿದೆ ಇದನ್ನು ನಾವು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕಿದೆ,ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರ ಮೇಲಿದೆ ಯಾವುದೇ ಕಳಂಕಗಳಿಗೆ ಅವಕಾಶ ಮಾಡದೆ ಹಿರಿಯ ಅಶಯದಂತೆ ಬ್ಯಾಂಕ್‌ನ್ನು ಮುನ್ನಡೆಸಬೇಕಿದೆ ಅವರ ಕನಸು ನಾವು ನನಸು ಮಾಡಬೇಕು ಎಂದು ಸ್ಮರಿಸಿದರು.

ಸಹಕಾರ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಂ,ಡಿ.ನರಸಿAಹಮೂರ್ತಿ ಮಾತನಾಡಿ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಈ ಬಾಗದ ಶಾಸಕ ಪುಟ್ಟಸ್ವಾಮಿಗೌಡ ಜನಪ್ರೀಯ ಕೆಲಸಗಳನ್ನು ಮಾಡುತ್ತಾ ಇದ್ದಾರೆ,ಈ ಭಾಗದಲ್ಲಿ ಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿ ರಹಿತ ಸಾಲ ನೀಡಿ ಮಹಿಳೆಯರ ಅರ್ಥಿಕ ಅಭಿವೃದ್ದಿಗೆ ಸಹಕಾರ ಅಗಿದೆ,ಇದೀಗ ನೂತನ ನಿರ್ದೇಶಕ ವೆಂಕಟರಾಮಿರೆಡ್ಡಿ ಅವರ ಇನ್ನಷ್ಟು ಸೇವೆ ಮಾಡಬೇಕಿದೆ ಎಂದರು.

ಕೆಎಚ್‌ಪಿ ಬಣದ ಮುಖಂಡರಾದ ಅರ್ ಅಶೋಕ್‌ಕುಮಾರ್ ಮಾತನಾಡಿ ಶಾಸಕ ಪುಟ್ಟಸ್ವಾಮಿ ಗೌಡರು ಅಪರ ಕಾಳಜೀ ಇವರು ವ್ಯಕ್ತಿಯಾಗಿದ್ದಾರೆ ನಮ್ಮ ತಾಲ್ಲೂಕು ರಾಜ್ಯದಲ್ಲಿ ಅಭಿವೃದ್ದಿ ಹೊಂದಿದ ತಾಲ್ಲೂಕುನ್ನಾಗಿ ಮಾಡಲು ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಗರದ ಪಿಎಲ್‌ಡಿ ಬ್ಯಾಂಕ್ ವಿಎಸ್‌ಎನ್ ಸಹಕಾರಿ ಬ್ಯಾಂಕ್ ಇದೀಗ ಡಿಸಿಸಿ ಬ್ಯಾಂಕ್ ಇವರ ವಶವಾಗಿರುವುದು ನಿಜಕ್ಕೂ ಸಂತಸ ವಿಷಯವಾಗಿದೆ ಈ ಕೈ ಬಲ ಪಡಿಸುವ ಕಾರ್ಯ ನಾವು ಮಾಡಬೇಕಿದೆ ಎಂದರು.

ನೂತನ ನಿರ್ದೇಶಕ ವೆಂಕಟರಾಮಿರೆಡ್ಡಿ ಮಾತನಾಡಿ ಈ ಭಾಗದ ಶಾಸಕರು ಮುಖಂಡರ ಸಹಕಾರ ದಿಂದ ನಾನು ಇಂದು ನಿರ್ದೇಶಕನಾಗಿದ್ದನೇ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ,ಬಿ,ಅರ್,ಅಂಬೇಡ್ಕರ್ ಅವರ ಭಾವಚಿತ್ರ ಮಾಲಾರ್ಪಣೆ ಮಾಡಿ ಕಾಲ್ನಡಿಗೆಯಲ್ಲಿ ಅಪಾರ ಕಾರ್ಯಕರ್ತರೊಂದಿಗೆ ಬ್ಯಾಂಕಿನತ್ತ ಸಾಗಿ ಬಂದರು.

ಕಾರ್ಯಕ್ರಮದಲ್ಲಿ ನಗರ ಸಭೆ ಅಧ್ಯಕ್ಷ ಲಕ್ಷೀನಾರಾಯಣ್ ಉಪಾಧ್ಯಕ್ಷ ಪರೀದ್,ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿಜಯರಾಘವ,ಜೆ,ಕಾಂತರಾಜ್ ಮಾಜಿ ತಾ,ಪಂ ಅಧ್ಯಕ್ಷ ಮಲ್ಲಸಂದ್ರ ಗಂಗಾಧರ್ ಲಕ್ಷ್ಮಣ ರಾವ್, ಚಿಕ್ಕಣ್ಣ, ಅಲ್ಪಸಂಖ್ಯೆತ ಸಮುದಾಯದ ಮುಖಂಡರಾದ ಖಲಂದರ್, ಮೈಲಾರಪ್ಪ, ನಗರಸಭೆ ಸದಸ್ಯ ಡಿಜೆ ಚಂದ್ರಮೋಹನ್ ಸುಬ್ಬರಾಜ್, ನಿವೃತ್ತ ಶಿಕ್ಷಕ ಲಿಂಗಪ್ಪ ಯುವ ಮುಖಂಡ ರಾದ ನಾಗರ್ಜುನ, ಕೆಎಚ್‌ಪಿ ಬಣದ ಮುಖ್ಯಕಾರ್ಯನಿರ್ವಹಕ ಶ್ರೀನಿವಾಸ್‌ಗೌಡ, ದಲಿತ ಮುಖಂಡರಾದ ಕೆ,ನಂಜುಂಡಪ್ಪ ಮುನಿಯಪ್ಪ, ಮೌಲಜಾನ್ ಮುಂತಾದವರು ಹಾಜರಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »