ಶಿರಾ: ಶಿರಾ ನಗರದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಝರೀಫ ಬಾನು ಅವರು ತಮ್ಮ ಮಗನನ್ನು ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ದಾಖಲಿಸುವ ಮೂಲಕ ಮಾದರಿಯಾಗಿದ್ದಾರೆ. ನ್ಯಾಯಾಧೀಶರಾದ ಝರೀಫ ಬಾನು ಅವರು ತಮ್ಮ ಮಗನಾದ ಆಜಾದ್ ಆರ್ ಝೆಡ್ ಅವರನ್ನು ಐದನೇ ತರಗತಿಗೆ ದಾಖಲು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ಮುಖ್ಯ ಶಿಕ್ಷಕರಾದ ನರಸಿಂಹಯ್ಯ, ಶಿಕ್ಷಕರಾದ ಫೈಯಾಜ್, ವೀರಣ್ಣ ಸೇರಿದಂತೆ ಹಲವರು ಹಾಜರಿದ್ದರು.