Karunadu Studio

ಕರ್ನಾಟಕ

MI vs PBKS Qualifier 2: ಎಬಿಡಿ ದಾಖಲೆ ಮುರಿಯುವ ಸನಿಹದಲ್ಲಿ ಸೂರ್ಯಕುಮಾರ್‌ – Kannada News | Suryakumar Yadav inches closer to breaking a record held by Ab de Villiers since 2016 in IPL


ಅಹಮದಾಬಾದ್‌: ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ -2(MI vs PBKS Qualifier 2) ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮೊದಲ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಪಂಜಾಬ್ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಹಾರ್ಡ್‌ ಹಿಟ್ಟರ್‌ ಸೂರ್ಯಕುಮಾರ್‌ ಯಾದವ್‌(Suryakumar Yadav) ಅವರಿಗೆ ಆರ್‌ಸಿಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್‌(Ab de Villiers) ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ.

ಪ್ರಚಂಡ ಬ್ಯಾಟಿಂಗ್‌ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್‌ ಯಾದವ್‌ ಇಂದಿನ ಪಂದ್ಯದಲ್ಲಿ 15 ರನ್‌ ಬಾರಿಸಿದರೆ, ಆರಂಭಿಕನಲ್ಲದೆ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ದಾಖಲೆ ನಿರ್ಮಿಸಲಿದ್ದಾರೆ. ವಿಲಿಯರ್ಸ್‌ ಅವರು 2016ರ ಆವೃತ್ತಿಯಲ್ಲಿ ಆಡಿದ 16 ಇನಿಂಗ್ಸ್‌ಗಳಲ್ಲಿ 1 ಶತಕ ಹಾಗೂ 6 ಅರ್ಧಶತಕ ಸಹಿತ 687 ಗಳಿಸಿದ್ದರು. ಹಾಲಿ ಆವೃತ್ತಿಯಲ್ಲಿ ಸೂರ್ಯಕುಮಾರ್‌ 15 ಪಂದ್ಯಗಳಲ್ಲಿ 673 ರನ್ ಗಳಿಸಿದ್ದಾರೆ.

ಇದು ಮಾತ್ರವಲ್ಲದೆ ಸೂರ್ಯಕುಮಾರ್‌ 87 ರನ್‌ ಗಳಿಸಿದರೆ ಗುಜರಾತ್‌ ಟೈಟನ್ಸ್‌ ತಂಡದ ಸಾಯಿ ಸುದರ್ಶನ್‌(759) ಹಿಂದಿಕ್ಕಿ ಆರೆಂಜ್ ಕ್ಯಾಪ್‌ ತಮ್ಮದಾಗಿಸಿಕೊಳ್ಳಲಿದ್ದಾರೆ.

ಮುಂಬೈ ತಂಡ 11ನೇ ಬಾರಿ ಪ್ಲೇ-ಆಫ್ ಆಡುತ್ತಿದ್ದು, 7ನೇ ಬಾರಿ ಫೈನಲ್‌ಗೇರುವ ತವಕದಲ್ಲಿದೆ. ಪಂಜಾಬ್ 2ನೇ ಬಾರಿ ಫೈನಲ್ ಗೇರುವ ಗುರಿ ಇಟ್ಟುಕೊಂಡಿದೆ. 2014ರಲ್ಲಿ ಫೈನಲ್‌ಗೇರಿದ್ದ ತಂಡ ಸೋಲನುಭವಿಸಿತ್ತು.

ಪಂದ್ಯಕ್ಕೆ ಮಳೆ ಭೀತಿ

ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿದೆ. ಶನಿವಾರವೇ ಅಹಮದಾಬಾದ್‌ನಲ್ಲಿ ಮಳೆಯಾಗಿದ್ದು ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಪಡಿಸಿತ್ತು. ಹೀಗಾಗಿ ಭಾನುವಾರ ಕೂಡ ಮಳೆ ಖಚಿತ ಎನ್ನುವಂತಿದೆ. ಕನಿಷ್ಠ 5 ಓವರ್‌ಗಳ ಪಂದ್ಯ ಅಥವಾ ಸೂಪರ್‌ ಓವರ್‌ ಕೂಡ ನಡೆಯದಿದ್ದರೆ, ಆಗ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದ ತಂಡ ಮುನ್ನಡೆಯಲಿದೆ. ಈ ಲಾಭ ಪಂಜಾಬ್‌ ತಂಡಕ್ಕೆ ಸಿಗಲಿದೆ. ಮುಂಬೈ ಇಂಡಿಯನ್ಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಹೊರಬೀಳಲಿದೆ.

ಇದನ್ನೂ ಓದಿ IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!

ಸಂಭಾವ್ಯ ತಂಡಗಳು

ಪಂಜಾಬ್‌ ಕಿಂಗ್ಸ್‌: ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಜ್ಮತುಲ್ಲಾ ಒಮರ್ಜಾಯ್, ಹರ್ಪ್ರೀತ್ ಬ್ರಾರ್, ಕೈಲ್ ಜೇಮಿಸನ್, ಅರ್ಶ್‌ದೀಪ್‌ ಸಿಂಗ್.

ಇಂಪ್ಯಾಕ್ಟ್‌ ಆಟಗಾರ: ವಿಜಯಕುಮಾರ್ ವೈಶಾಕ್

ಮುಂಬೈ ಇಂಡಿಯನ್ಸ್‌: ಜಾನಿ ಬೈರ್‌ಸ್ಟೋವ್ (ವಿ.ಕೀ.), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್‌ ಬುಮ್ರಾ, ರಿಚರ್ಡ್ ಗ್ಲೀಸನ್.

ಇಂಪ್ಯಾಕ್ಟ್‌ ಆಟಗಾರ: ಅಶ್ವನಿ ಕುಮಾರ್



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »