Karunadu Studio

ಕರ್ನಾಟಕ

Ghost Short Film: ವಿಭಿನ್ನ ಕಥಾ ಹಂದರದ ‘ಘೋಸ್ಟ್’ ಕಿರು ಚಿತ್ರ; ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟ ನಟಿ ಸುಧಾರಾಣಿ – Kannada News | ‘Ghost’ short film of different narrative form


ಬೆಂಗಳೂರು: 1978 ರಲ್ಲಿ ಬಂದಂತಹ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ನಾಯಕತ್ವದ ಕಿಲಾಡಿ ಕಿಟ್ಟು ಮೂಲಕ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಪದಾರ್ಪಣೆ ಮಾಡಿದ್ದ ಸುಧಾರಾಣಿ, ನಂತರದ ದಿನಗಳಲ್ಲಿ 1986 ರಲ್ಲಿ ಶಿವರಾಜ್ ಕುಮಾರ್ ಜತೆಗೆ ನಾಯಕಿಯಾಗಿ ಆನಂದ್ ಚಿತ್ರದಲ್ಲಿ ನಟಿಸುವುದರ ಮೂಲಕ ನಾಯಕಿಯಾಗಿ ಪದಾರ್ಪಣೆ ಮಾಡಿ, ಇಲ್ಲಿಯ ತನಕ ಬಹಳಷ್ಟು ಚಿತ್ರಗಳಲ್ಲಿ ಕನ್ನಡದ ಎಲ್ಲಾ ಸೂಪರ್ ಸ್ಟಾರ್ಸ್‌ಗಳ ಜತೆಗೆ ನಾಯಕಿಯಾಗಿ ನಟಿಸಿ, ಸೈ ಎನಿಸಿ ಕೊಂಡಿದ್ದಲ್ಲದೆ, ಕಾಲ ಕ್ರಮೇಣ ಪೋಷಕ ಪಾತ್ರಗಳಲ್ಲಿಯೂ ಸಹ ನಟಿಸಿ ಬ್ಯುಸಿಯಾಗಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ ಸುಧಾರಾಣಿ ಇಲ್ಲಿಯೂ ಕೂಡ ಸಕ್ಸಸ್ ಕಂಡಿದ್ದು ವಿಶೇಷ. ಇದೀಗ ಕಿರು ಚಿತ್ರವೊಂದರ ಮೂಲಕ ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಸುಧಾರಾಣಿಯವರೇ ನಿರ್ಮಿಸಿ, ನಟಿಸಿದ ʼಘೋಸ್ಟ್ʼ ಕಿರು ಚಿತ್ರವು ಸಸ್ಪೆನ್ಸ್ ಥ್ರಿಲ್ಲರ್ ಅಂಶವನ್ನು ಹೊಂದಿದ್ದು, ಘೋಸ್ಟ್ʼ ಕಿರುಚಿತ್ರಕ್ಕೆ ʼದಿ ದೆವ್ವʼ ಎಂಬ ಅಡಿಬರಹವಿದೆ‌.

ಈ ಬಗ್ಗೆ ನಟಿ ಸುಧಾರಾಣಿ ಮಾತನಾಡಿ, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆ ಕೆಟ್ಟದ್ದು ಇದೆ. ದೇವರು ಇದ್ದಾನೆ. ದೆವ್ವವು ಇದೆ. ಇದೆಲ್ಲವೂ ನಮ್ಮ ನಮ್ಮ ಕಲ್ಪನೆಗೆ ಬಿಟ್ಟದ್ದು. ಈ ವಿಚಾರದ ಮೇಲೆ ಬಂದಂತಹ ಒಂದು ಎಳೆಯನ್ನಿಟ್ಟುಕೊಂಡು ಕಿರು ಚಿತ್ರ ಮಾಡಿದ್ದೇನೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಿರ್ದೇಶಕರು ಈ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ ಹಾಗೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Mukhyamantri Chandru: ಶಿವಣ್ಣ ರೀತಿ ಕಮಲ್‌ ಹಾಸನ್‌ ಪರ ಇರೋರೆಲ್ಲಾ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು ಕಿಡಿ

ಇನ್ನು ಚಿತ್ರದಲ್ಲಿ ಸುಧಾರಾಣಿಯವರ ಜತೆಗೆ ನಟಿಸುವುದರ ಜತೆಗೆ ,ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಸುದೇಶ್ ಕೆ.ರಾವ್. ಮಾತನಾಡಿ ತಾವು ಇಲ್ಲಿಯ ತನಕ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಬಗ್ಗೆ ಮತ್ತು ನಿರ್ದೇಶನ ಮಾಡಿರುವ ಕುರಿತು ಅನುಭವ ಹಂಚಿಕೊಂಡರು. ಘೋಸ್ಟ್ ಸ್ಪೆಷಲ್ ಕಥೆಯಾಗಿ ನಿಲ್ಲುತ್ತದೆ. ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ‌. ಅಂತಹ ಎಲ್ಲರಿಗೂ ಈ ಶಾರ್ಟ್ ಫಿಲ್ಮ್ ಪರಿಹಾರ ನೀಡಬಹುದು ಎಂದು ಹೇಳಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »