Karunadu Studio

ಕರ್ನಾಟಕ

New Banknotes: ಬಾಂಗ್ಲಾದೇಶದ ಹೊಸ ನೋಟುಗಳಲ್ಲಿ ಹಿಂದೂ ದೇವಾಲಯಗಳ ಫೋಟೋ; ಹೇಗಿದೆ ಗೊತ್ತಾ? – Kannada News | Bangladesh’s New Banknotes Replace Sheikh Hasina’s Father With Temples, Mosques, Heritage Icons


ಢಾಕಾ: ಬಾಂಗ್ಲಾದೇಶ (Bangladesh) ಭಾನುವಾರ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. , ಈ ಹಿಂದೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ತಂದೆ ಮತ್ತು ರಾಷ್ಟ್ರದ ಸ್ಥಾಪಕ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ (New Banknotes) ಭಾವಚಿತ್ರವನ್ನು ಒಳಗೊಂಡ ವಿನ್ಯಾಸಗಳನ್ನು ತೆಗೆದು ಹಾಕಲಾಗಿದೆ. ಇಲ್ಲಿಯವರೆಗೂ ಶೇಖ್ ಮುಜಿಬುರ್ ರೆಹಮಾನ್‌ ಅವರ ಭಾವಚಿತ್ರ ಇತ್ತು. ಅವರು 1971 ರಲ್ಲಿ ಪಾಕಿಸ್ತಾನದಿಂದ ಸ್ವಾತಂತ್ರ್ಯ ಪಡೆದ ನಂತರ ಬಾಂಗ್ಲಾದೇಶವನ್ನು ಮುನ್ನಡೆಸಿದ್ದರು. ಇದೀಗ ಬಿಡುಗಡೆಗೊಂಡ ನೋಟುಗಳು ದೇಶದ ಸಾಂಪ್ರದಾಯಿಕ ಹೆಗ್ಗುರುತುಗಳನ್ನು ಒಳಗೊಂಡಿದೆ.

ಹೊಸ ನೋಟುಗಳ ವಿನ್ಯಾಸದಲ್ಲಿ ಯಾವದೇ ಮಾನವರ ಭಾವಚಿತ್ರವನ್ನು ಬಳಸಿಲ್ಲ. ಬದಲಾಗಿ ನೈಸರ್ಗಿಕ ಭೂದೃಶ್ಯಗಳು ಮತ್ತು ಸಾಂಪ್ರದಾಯಿಕ ಹೆಗ್ಗುರುತುಗಳನ್ನು ಪ್ರದರ್ಶಿಸುತ್ತವೆ. ಈ ಕುರಿತು ಮಾತನಾಡಿದ ಬಾಂಗ್ಲಾದೇಶ ಬ್ಯಾಂಕ್ ವಕ್ತಾರ ಆರಿಫ್ ಹೊಸೈನ್ ಖಾನ್ ಒಂಬತ್ತು ವಿಭಿನ್ನ ಮುಖಬೆಲೆಯ ನೋಟುಗಳಲ್ಲಿ ಮೂರು ನೋಟುಗಳನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. “ಹೊಸ ನೋಟುಗಳನ್ನು ಕೇಂದ್ರ ಬ್ಯಾಂಕಿನ ಪ್ರಧಾನ ಕಚೇರಿಯಿಂದ ಮತ್ತು ನಂತರ ದೇಶಾದ್ಯಂತದ ಅದರ ಇತರ ಕಚೇರಿಗಳಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಹೊಸ ನೋಟುಗಳಲ್ಲಿ ಏನೆಲ್ಲಾ ವೈಶಿಷ್ಟ್ಯಗಳಿವೆ?

ಬಾಂಗ್ಲಾದೇಶದ ಹೊಸ ನೋಟುಗಳಲ್ಲಿ ಕಾಣಿಸಿಕೊಳ್ಳಲಿರುವ ವಿನ್ಯಾಸಗಳಲ್ಲಿ ಹಿಂದೂ ಮತ್ತು ಬೌದ್ಧ ದೇವಾಲಯಗಳ ಚಿತ್ರಗಳು ಹಾಗೂ ಐತಿಹಾಸಿಕ ಅರಮನೆಗಳು ಸೇರಿವೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಬಂಗಾಳದ ಕ್ಷಾಮವನ್ನು ಚಿತ್ರಿಸುವ ವರ್ಣಚಿತ್ರಕಾರ ಜೈನುಲ್ ಅಬೇದಿನ್ ಅವರ ಕಲಾಕೃತಿಗಳು ಸಹ ಇವುಗಳಲ್ಲಿ ಸೇರಿವೆ. ಮತ್ತೊಂದರಲ್ಲಿ ಪಾಕಿಸ್ತಾನದ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಗೌರವಾರ್ಥ ರಾಷ್ಟ್ರೀಯ ಹುತಾತ್ಮರ ಸ್ಮಾರಕವನ್ನು ತೋರಿಸುತ್ತದೆ. ನೋಟುಗಳ ಇತರ ಮುಖಬೆಲೆಗಳನ್ನು ಹಂತಹಂತವಾಗಿ ಬಿಡುಗಡೆ ಮಾಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ:Sheikh Hasina: ಶೇಖ್‌ ಹಸೀನಾ ವಿರುದ್ಧ ಇಂಟರ್‌ಪೋಲ್‌ ಮೆಟ್ಟಿಲೇರಿದ ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ನೋಟುಗಳ ವಿನ್ಯಾಸ ಬದಲಾಗುತ್ತಿರುವುದು ಇದೇ ಮೊದಲಲ್ಲ. ಬಾಂಗ್ಲಾದೇಶ ತನ್ನ ಹೆಸರನ್ನು ಪೂರ್ವ ಪಾಕಿಸ್ತಾನದಿಂದ ಬದಲಾಯಿಸಿದ ನಂತರ 1972 ರಲ್ಲಿ ಬಿಡುಗಡೆಯಾದ ನೋಟುಗಳ ಮೇಲೆ ನಕ್ಷೆಗಳನ್ನು ಚಿತ್ರಿಸಲಾಗಿತ್ತು. ನಂತರ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರವಿತ್ತು, ಅವರು ಹಸೀನಾ ಅವರ 15 ವರ್ಷಗಳ ಅಧಿಕಾರದಲ್ಲಿದ್ದಾಗ ಅವಾಮಿ ಲೀಗ್ ಅನ್ನು ಮುನ್ನಡೆಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »