Karunadu Studio

ಕರ್ನಾಟಕ

HPCL Recruitment 2025: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ – Kannada News | HPCL Recruitment 2025: Apply Online for 411 posts


ಬೆಂಗಳೂರು: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ (Hindustan Petroleum Corporation Limited)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (Job Guide). ಜೂನಿಯರ್‌ ಎಕ್ಸಿಕ್ಯುಟಿವ್‌, ಎಂಜಿನಿಯರ್‌ ಸೇರಿ ಒಟ್ಟು 411 ಹುದ್ದೆಗಳಿವೆ (HPCL Recruitment 2025). ಉದ್ಯೋಗದ ಸ್ಥಳ: ಭಾರತದಾದ್ಯಂತ. ಪದವಿ, ಎಂಬಿಎ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ದ್ವಿತೀಯ ಪಿಯು ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಜೂ. 30 ಮತ್ತು ಜು. 15.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯುಟಿವ್‌ ಅಸಿಸ್ಟಂಟ್‌ – 10

ಜೂನಿಯರ್ ಎಕ್ಸಿಕ್ಯುಟಿವ್‌-ಸಿವಿಲ್ – 50

ಜೂನಿಯರ್ ಎಕ್ಸಿಕ್ಯುಟಿವ್‌-ಮೆಕ್ಯಾನಿಕಲ್ – 15

ಜೂನಿಯರ್ ಎಕ್ಸಿಕ್ಯುಟಿವ್‌-ಕ್ವಾಲಿಟಿ ಕಂಟ್ರೋಲ್‌ – 19

ಮೆಕ್ಯಾನಿಕಲ್ ಎಂಜಿನಿಯರ್ – 98

ಎಲೆಕ್ಟ್ರಿಕಲ್ ಎಂಜಿನಿಯರ್ – 35

ಸಿವಿಲ್ ಎಂಜಿನಿಯರ್ – 16

ಕೆಮಿಕಲ್‌ ಎಂಜಿನಿಯರ್ – 26

ಚಾರ್ಟರ್ಡ್ ಅಕೌಂಟೆಂಟ್ – 24

ಎಚ್‌ಆರ್‌ ಅಧಿಕಾರಿ- 6

ಅಧಿಕಾರಿ-ಇಂಡಸ್ಟ್ರಿಯಲ್ ಎಂಜಿನಿಯರಿಂಗ್ – 1

ಅಸಿಸ್ಟಂಟ್‌ ಆಫೀಸರ್‌/ಆಫೀಸರ್‌ – 2

ಕಾನೂನು ಅಧಿಕಾರಿ – 3

ಸೇಫ್ಟಿ ಆಫೀಸರ್‌ – 5

ಸೀನಿಯರ್‌ ಆಫೀಸರ್‌-ನಗರ ಅನಿಲ ವಿತರಣೆ – 10

ಸೀನಿಯರ್‌ ಆಫೀಸರ್‌-ಸೇಲ್ಸ್‌ – 25

ಸೀನಿಯರ್‌ ಆಫೀಸರ್‌/ಅಸಿಸ್ಟಂಟ್‌ ಮ್ಯಾನೇಜರ್‌ – 6

ಚೀಫ್‌ ಮ್ಯಾನೇಜರ್‌/ಡೆಪ್ಯುಟಿ ಜನರಲ್‌ ಮ್ಯಾನೇಜರ್‌ – 2

ಮ್ಯಾನೇಜರ್‌-ಟೆಕ್ನಿಕಲ್‌ – 3

ಮ್ಯಾನೇಜರ್‌-ಸೇಲ್ಸ್‌ – 1

ಡೆಪ್ಯುಟಿ ಜನರಲ್‌ ಮ್ಯಾನೇಜರ್‌ – 1

ಡೆಪ್ಯುಟಿ ಜನರಲ್‌ ಮ್ಯಾನೇಜರ್‌ – ಟೆಕ್ನಿಕಲ್‌ ಸರ್ವಿಸ್‌ – 1

ಡೆಪ್ಯುಟಿ ಜನರಲ್‌ ಮ್ಯಾನೇಜರ್‌-ಪಾಲಿಮರ್ ಎಕ್ಸ್‌ಪರ್ಟ್‌ ಹೆಡ್‌ – 1

ಡೆಪ್ಯುಟಿ ಜನರಲ್‌ ಮ್ಯಾನೇಜರ್‌-ಬ್ಯುಸಿನೆಸ್‌ ಡೆವಲಪ್‌ಮೆಂಟ್‌ ಹೆಡ್‌ – 1

ಐಎಸ್‌ ಆಫೀಸರ್‌ – 10

ಐಎಸ್‌ ಭದ್ರತಾ ಅಧಿಕಾರಿ – 1

ಡೆಪ್ಯುಟಿ ಜನರಲ್ ಮ್ಯಾನೇಜರ್ – 1

ಡೆಪ್ಯುಟಿ ಜನರಲ್ ಮ್ಯಾನೇಜರ್ – ಬಯೋ ಪ್ರೊಸೆಸ್ – 1

ಚೀಫ್‌ ಮ್ಯಾನೇಜರ್‌/ ಡೆಪ್ಯುಟಿ ಜನರಲ್ ಮ್ಯಾನೇಜರ್ – ಸೌರಶಕ್ತಿ – 1

ಚೀಫ್‌ ಮ್ಯಾನೇಜರ್‌/ ಡೆಪ್ಯುಟಿ ಜನರಲ್ ಮ್ಯಾನೇಜರ್ – ವೆಂಡರ್‌ ಡೆವಲಪ್‌ಮೆಂಟ್‌ – 1

ಸೀನಿಯರ್‌ ಆಫೀಸರ್‌/ಅಸಿಸ್ಟಂಟ್‌ ಮ್ಯಾನೇಜರ್‌ – 33 ಹುದ್ದೆಗಳಿವೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಡಿಪ್ಲೊಮಾ, ಬಿ.ಎಸ್‌ಸಿ, ಪದವಿ, ಬಿ.ಇ ಅಥವಾ ಬಿ.ಟೆಕ್‌, ಸಿಎ, ಎಂಬಿಎ, ಸ್ನಾತಕೋತ್ತರ ಪದವಿ, ದ್ವಿತೀಯ ಪಿಯುಸಿ, ಪಿಚ್‌.ಡಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 25 ವರ್ಷದಿಂದ 51 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

ಈ ಸುದ್ದಿಯನ್ನೂ ಓದಿ: ISRO Recruitment 2025: ಇಸ್ರೋದಲ್ಲಿದೆ 320 ಹುದ್ದೆ; ಇಂದೇ ಅಪ್ಲೈ ಮಾಡಿ

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಅರ್ಜಿ ಶುಲ್ಕವಾಗಿ ಸಾಮಾನ್ಯ/ಒಬಿಸಿಎನ್‌ಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು 1,180 ರೂ. ಆನ್‌ಲೈನ್‌ ಮೂಲಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌, ಗ್ರೂಪ್‌ ಟಾಸ್ಕ್‌ ಮತ್ತು ವೈಯಕ್ತಿಕ ಸಂದರ್ಶನದ ಮೂಲ ಅಭ್ಯರ್ತಿಗಳ ಆಯ್ಕೆ ನಡೆಯಲಿದೆ.

ಡೆವಲಪ್‌ಮೆಂಟ್‌ ಆಫೀಸರ್‌ ಹುದ್ದೆಯ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಜೂನಿಯರ್‌ ಎಕ್ಸಿಕ್ಯುಟಿವ್‌ ಹುದ್ದೆಯ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    (
    https://jobs.hpcl.co.in/Recruit_New/recruitlogin.jsp)
  • ಹೆಸರು ನೋಂದಾಯಿಸಿ
  • ಹೊಸ ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ಕಂಡುಬರುವ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ ವಿಳಾಸ: https://hindustanpetroleum.com/ಕ್ಕೆ ಭೇಟಿ ನೀಡಿ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »