ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‌ನಲ್ಲಿ ಇತ್ತೀಚೆಗೆ 250 ಮಿಲಿಯನ್ (25 ಕೋಟಿ) ಜೇನುನೊಣಗಳನ್ನು ತುಂಬಿದ್ದ ಟ್ರಕ್‌ವೊಂದು ಪಲ್ಟಿಯಾಗಿದೆ. ಹೆಚ್ಚಿನ ಸಂಖ್ಯೆಯ ಜೇನುನೊಣಗಳು (Honeybee) ಟ್ರಕ್‌ನಿಂದ ತಪ್ಪಿಸಿಕೊಂಡ ಕಾರಣ, ಅಧಿಕಾರಿಗಳು ಸ್ಥಳೀಯ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಜೇನುನೊಣಗಳ ಹಿಂಡುಗಳಿಂದ ದೂರವಿರಲು ಅಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಲಾಗಿದ್ದು, ಇದು ಈಗ ವೈರಲ್ (Viral News) ಆಗಿದೆ.
ಅಪಘಾತಕ್ಕೀಡಾದ ಟ್ರಕ್ ಸುಮಾರು 70,000 ಪೌಂಡ್ (31,750 ಕಿಲೋಗ್ರಾಂ) ಜೇನುಗೂಡುಗಳನ್ನು ಹೊತ್ತೊಯ್ಯುತ್ತಿತ್ತು. ಎಲ್ಲ ಜೇನುಗೂಡುಗಳಲ್ಲಿ ಜೇನುನೊಣಗಳು ಇದ್ದವು ಎನ್ನಲಾಗಿದೆ. ಕೆನಡಾದ ಗಡಿಯ ಬಳಿ ಈ ಅಪಘಾತ ಸಂಭವಿಸಿದ್ದು, ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಟ್ಕಾಮ್ ಕೌಂಟಿ ಶೆರಿಫ್ ಕಚೇರಿ ಈ ಘಟನೆಗೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದು ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.
🚨🚦🐝 The strangest traffic jam: A quarter of a billion bees escape to freedom after a truck overturns in #Washington!pic.twitter.com/6VWQ5sK1Qw #USA
🔊 Whatcom County Police in Washington state announced that a truck transporting approximately 250 million bees overturned,…— ⚡️🌎 World News 🌐⚡️ (@ferozwala) May 31, 2025
ಜೇನುನೊಣಗಳು ತಪ್ಪಿಸಿಕೊಂಡು ಗುಂಪು ಗುಂಪಾಗಿ ಸೇರುವ ಸಾಧ್ಯತೆ ಇರುವುದರಿಂದ ಜನರು ಅಪಘಾತ ಸ್ಥಳದ ಸಮೀಪವಿರುವ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸುವಂತೆ ವಾಟ್ಕಾಮ್ ಕೌಂಟಿ ಶೆರಿಫ್ ಕಚೇರಿ ಒತ್ತಾಯಿಸಿದೆ. ಅಧಿಕಾರಿಗಳಿಗೆ ಜೇನುನೊಣಗಳನ್ನು ನಿಯಂತ್ರಿಸುವ ವಿಧಾನ ತಿಳಿಯದೆ ಇದ್ದ ಕಾರಣ ಅನೇಕ ನುರಿತ ಜೇನುಸಾಕಣೆದಾರರು ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಸೋಶಿಯಲ್ ಮಿಡಿಯಾ ಪೋಸ್ಟ್ ಮೂಲಕ ಧನ್ಯವಾದ ಅರ್ಪಿಸಲಾಗಿದೆ. ಮುಂದಿನ 24-48 ಗಂಟೆಗಳಲ್ಲಿ ಜೇನುನೊಣಗಳು ತಮ್ಮ ಜೇನುಗೂಡುಗಳಿಗೆ ಮರಳುತ್ತವೆ ಎಂದು ವಾಟ್ಕಾಮ್ ಕೌಂಟಿ ಶೆರಿಫ್ ಕಚೇರಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಮದುವೆ ಮನೆಯಲ್ಲಿ ಕೂಲರ್ ವಿಚಾರಕ್ಕೆ ನಡೆಯಿತು ಮಾರಮಾರಿ
ಅಮೆರಿಕದಲ್ಲಿ ಜೇನುನೊಣ ಸಾಗಣೆಯು ಆಧುನಿಕ ಕೃಷಿಯ ಪ್ರಮುಖ ಭಾಗ ಎನಿಸಿಕೊಂಡಿದೆ. ವಾಣಿಜ್ಯ ಜೇನುಸಾಕಣೆದಾರರು ಸಾಮಾನ್ಯವಾಗಿ ರಾಜ್ಯಗಳಾದ್ಯಂತ ಜೇನುಗೂಡುಗಳನ್ನು ಸಾಗಿಸುತ್ತಾರೆ. ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿಯಲ್ಲಿರುವ ಬಾದಾಮಿ ತೋಟಗಳಿಗೆ ಪ್ರತಿ ವರ್ಷ ಅವುಗಳು ಹೂಬಿಡುವ ಸಮಯದಲ್ಲಿ ಸಾಕಷ್ಟು ಜೇನುನೊಣಗಳು ಬೇಕಾಗುತ್ತವೆ. ಆ ಋತುವು ಮುಗಿದ ನಂತರ, ಜೇನುಗೂಡುಗಳನ್ನು ಹೆಚ್ಚಾಗಿ ಸೇಬು, ಬೆರಿಹಣ್ಣುಗಳು ಅಥವಾ ಕುಂಬಳಕಾಯಿಗಳಂತಹ ಬೆಳೆಗಳಿಗಾಗಿ ಇತರ ರಾಜ್ಯಗಳಿಗೆ ಸ್ಥಳಾಂತರಿಸಲಾಗುತ್ತದೆ.