Karunadu Studio

ಕರ್ನಾಟಕ

ಬೆಂಗಳೂರಿನಲ್ಲಿ ಮಹಿಳೆಯ ಮೇಲೆ ಬಸ್ ಹತ್ತಿಸಲು ಯತ್ನಿಸಿದ ಬಿಎಂಟಿಸಿ ಚಾಲಕ; ವಿಡಿಯೋ ವೈರಲ್ – Kannada News | BMTC Bus Driver Tries To Run Over Woman In Bengaluru, Video Goes Viral


ಬೆಂಗಳೂರು: ಮೇ 23ರಂದು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಸಿಗ್ನಲ್‌ನಲ್ಲಿ ಬಿಎಂಟಿಸಿ ಬಸ್ ಚಾಲಕನೊಬ್ಬ (BMTC Bus Driver) ಮಾತಿನ ಚಕಮಕಿಯ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ಬಸ್‌ ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ. ಇನ್ನೊಂದು ಘಟನೆಯಲ್ಲಿ ಆಟೋ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಮ್ಯೂಸಿಯಂ ರಸ್ತೆಯಿಂದ ಎಂಜಿ ರಸ್ತೆಗೆ ತೆರಳುತ್ತಿದ್ದ ಬಿಎಂಟಿಸಿ ಬಸ್‌ನ ಚಾಲಕನೊಂದಿಗೆ ಮಹಿಳೆಯೊಬ್ಬರು ವಾದಕ್ಕಿಳಿದಿದ್ದಾರೆ. ಈ ವೇಳೆ ಚಾಲಕ ಬಸ್‌ನ ಮುಂದೆ ನಿಂತಿದ್ದ ಮಹಿಳೆಯ ಮೇಲೆ ವಾಹನವನ್ನು ಚಲಾಯಿಸಿದ್ದಾನೆ. ಈ ಘಟನೆಯ ಡ್ಯಾಶ್‌ಕ್ಯಾಮ್ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಆಟೋ ಚಾಲಕನೊಬ್ಬ ತನ್ನ ಕಾಲಿನ ಮೇಲೆ ಆಟೋ ಓಡಿಸಿದನೆಂದು ಆರೋಪಿಸಿ, ಚಿತ್ರೀಕರಣ ಮಾಡಿದ್ದಕ್ಕಾಗಿ ಮಹಿಳೆಯೊಬ್ಬಳು ಚಾಲಕನಿಗೆ ಚಪ್ಪಲಿಯಿಂದ ಹಲವಾರು ಬಾರಿ ಹೊಡೆದಿದ್ದಾಳೆ. ವೈರಲ್ ವಿಡಿಯೊದಲ್ಲಿ “ರೆಕಾರ್ಡ್ ಮಾಡಲು ಯಾರಿಂದ ಅನುಮತಿ ಪಡೆದೆ?” ಎಂದು ಮಹಿಳೆ ಪ್ರಶ್ನಿಸಿದರೆ, “ಯಾರಿಂದ ಅನುಮತಿ ಪಡೆಯಬೇಕು?” ಎಂದು ಚಾಲಕ ತಿರುಗೇಟು ನೀಡಿದ್ದಾನೆ. ಈ ವಾಗ್ವಾದ ತೀವ್ರಗೊಂಡು, ಮಹಿಳೆ ಚಪ್ಪಲಿಯಿಂದ ಚಾಲಕನಿಗೆ ಹೊಡೆಯುತ್ತಾಳೆ.

ವೈರಲ್‌ ವಿಡಿಯೊ ಇಲ್ಲಿದೆ:



ವಿಡಿಯೊದಲ್ಲಿ ಮಹಿಳೆ ಫೋನ್‌ನಲ್ಲಿ ಮಾತನಾಡುತ್ತ, “ಚಾಲಕ ನನ್ನ ಕಾಲಿನ ಮೇಲೆ ಆಟೋ ಓಡಿಸಿದ, ಅವಾಚ್ಯವಾಗಿ ನಡೆದುಕೊಂಡ, ಈಗ ರೆಕಾರ್ಡ್‌ ಮಾಡುತ್ತಿದ್ದಾನೆ” ಎಂದು ಆರೋಪಿಸಿದ್ದಾಳೆ. ಚಾಲಕ ಕನ್ನಡದಲ್ಲಿ ಒಬ್ಬ ವ್ಯಕ್ತಿಗೆ ತನ್ನ ಕಡೆಯ ಸ್ಟೋರಿಯನ್ನು ವಿವರಿಸುವ ದೃಶ್ಯವೂ ಕಂಡುಬಂದಿದೆ. ಈ ಘಟನೆಯ ಬಳಿಕ ಆಟೋ ಚಾಲಕ ದೂರು ದಾಖಲಿಸಿದ್ದು, ಬೆಳ್ಳಂದೂರು ಪೊಲೀಸರು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಆಕೆ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದಾಳೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »