Karunadu Studio

ಕರ್ನಾಟಕ

ರೈಲ್ವೇ ಟಿಕೆಟ್‌ ಕಾಯ್ದಿರಿಸುವವರಿಗೆ ಹೊಸದಾಗಿ “ಸೀಟ್ ಲಭ್ಯತೆ ಮುನ್ಸೂಚನೆ ಆಯ್ಕೆ ಪರಿಚಯಿಸಿದ ಮೇಕ್‌ಮೈ ಟ್ರಿಪ್ – Kannada News | MakeMyTrip introduces new “Seat Availability Prediction” option for railway ticket bookings


ಬೆಂಗಳೂರು: ರೈಲು ಪ್ರಯಾಣಿಕರು ಇನ್ನು ಮುಂದೆ ಸೀಟ್‌ ಲಭ್ಯತೆ ಬಗ್ಗೆ ಖಾತರಿ ಮಾಡಿಕೊಳ್ಳು ವುದು ಹೆಚ್ಚು ಸುಲಭ. ಮೇಕ್‌ ಮೈ ಟ್ರಿಪ್‌ ರೈಲು ಪ್ರಯಾಣಿಕರಿಗಾಗಿ “ಸೀಟು ಲಭ್ಯತೆ ಮುನ್ಸೂಚನೆ ಹಾಗೂ ಟಿಕೆಟ್‌ ಬಿಕರಿ ಆಗಿರುವ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಪಡೆಯುವ ಆಯ್ಕೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪರಿಚಯಿಸಿದೆ.

ರೈಲು ಟಿಕೆಟ್‌ ಕಾಯ್ದಿರಿಸಲು ೬೦ ದಿನಗಳ ಮುಂಚಿತವಾಗಿಯೇ ತೆರೆದಿರುತ್ತದೆ. ಆದರೆ, ಸಾಕಷ್ಟು ಜನರು ಕೊನೆಯ ಕ್ಷಣದಲ್ಲಿ ಟಿಕೆಟ್‌ ಕಾಯ್ದಿರಿಸಲು ಆತುರಪಡುತ್ತಾರೆ. ಇನ್ನೂ ಸಾಕಷ್ಟು ಜನರು, ಟಿಕೆಟ್‌ ಬುಕ್‌ ಮಾಡದೇ, ಕೇವಲ ಸೀಟ್‌ ಬ್ಲಾಕಿಂಗ್‌ ಮಾಡಿರುತ್ತಾರೆ. ಇದರಿಂದ ನಿಖರವಾಗಿ ಎಷ್ಟು ಸೀಟು ಲಭ್ಯವಿದೆ, ಎಷ್ಟು ಬಿಕರಿಯಾಗಿದೆ ಎಂಬುದು ತಿಳಿಯುವುದು ಕಷ್ಟ. ವರದಿಗಳ ಪ್ರಕಾರ, ಶೇ. 40 ರಷ್ಟು ಜನರು, ತೀರಾ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸುತ್ತಾರೆ.

ಇದನ್ನೂ ಓದಿ: IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

ಇನ್ನು ಶೇ. 70ರಷ್ಟು ಜನರು, ವೇಟಿಂಗ್‌ಲಿಸ್ಟ್‌ನಲ್ಲಿಯೇ ಈ ಸೀಟ್‌ಗಳನ್ನು ಬ್ಲಾಕ್‌ ಮಾಡುತ್ತಾರೆ, ಆದರೆ, ಟಿಕೆಟ್‌ ಬುಕ್‌ ಮಾಡುವುದಿಲ್ಲ. ಇದು ನಿಜವಾಗಿಯೂ ಟಿಕೆಟ್‌ ಬುಕ್‌ ಮಾಡುವವರಿಗೆ ಸೀಟು ಲಭ್ಯತೆ ಬಗ್ಗೆ ಮಾಹಿಯನ್ನೂ ನೀಡುವುದಿಲ್ಲ. ಸಾಕಷ್ಟು ಜನರಿಗೆ ಟಿಕೆಟ್‌ ಬುಕ್‌ ಮಾಡುವ ಸಂದರ್ಭ ಯಾವುದು, ಯಾವ ಋತುಮಾನದಲ್ಲಿ ಟಿಕೆಟ್‌ ಬಿಕರಿಯಾಗುತ್ತವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲದಂತಾಗಿದೆ.

ಹೀಗಾಗಿಯೇ, ಯಾವ ತಿಂಗಳಲ್ಲಿ ಹೆಚ್ಚು ಬೇಡಿಕೆ ಇರಲಿದೆ ಹಾಗೂ ಎಷ್ಟು ದಿನದ ಮುಂಚಿತವಾಗಿ ಟಿಕೆಟ್‌ ಬುಕ್‌ ಮಾಡಬಹುದು ಎಂಬಿತ್ಯಾದಿ ಮಾಹಿತಿಯನ್ನು ನೀಡುವ ಹೊಸ ಆಯ್ಕೆಯನ್ನು ಪರಿಚಯಿಸಿದ್ದು, ರೈಲು ಟಿಕೆಟ್‌ ಬುಕ್‌ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ,.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
Translate »