Karunadu Studio

ಕರ್ನಾಟಕ

Viral Video: ನಡುರಸ್ತೆಯಲ್ಲಿ ಆನೆಯ ಮೇಲೆ ದಾಳಿ ಮಾಡಿದ ಕುದುರೆ; ಶಾಕಿಂಗ್‌ ವಿಡಿಯೊ ವೈರಲ್ – Kannada News | Horse attacks elephant on the road; shocking video goes viral!


ಭೋಪಾಲ್: ಮಧ್ಯಪ್ರದೇಶದ ರತ್ಲಂ ನಗರದಲ್ಲಿ ಬಿಳಿ ಕುದುರೆಯೊಂದು ದೊಡ್ಡ ಆನೆಯ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದ್ದು, ಇದನ್ನು ಕಂಡು ಜನರು ಶಾಕ್‌ ಆಗಿದ್ದಾರೆ. ಈ ಘಟನೆ ಪಲ್ಸೋಡಾ ಫಾಟಾ ಬಳಿ ನಡೆದಿದ್ದು, ಇಡೀ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಇದನ್ನು ಕಂಡು ನೆಟ್ಟಿಗರು ಸಹ ಬೆಚ್ಚಿ ಬಿದ್ದಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಕೋಪಗೊಂಡ ಬಿಳಿ ಕುದುರೆಯೊಂದು ದೊಡ್ಡ ಆನೆಯ ಮೇಲೆ ದಾಳಿ ಮಾಡುವುದನ್ನು ಸೆರೆಹಿಡಿಯಲಾಗಿದೆ.

ಕುದುರೆಯು ಆನೆಯನ್ನು ಬೆನ್ನಟ್ಟುವುದು, ಅದರ ಮೇಲೆ ಜಿಗಿಯುವುದು ಸೆರೆಯಾಗಿದೆ. ಆನೆಯ ಮಾವುತನು ಕೋಲನ್ನು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದರೂ ಕುದುರೆ ಹಿಂದೆ ಸರಿಯಲಿಲ್ಲ. ಆನೆ ಕೊನೆಗೆ ಕುದುರೆಯಿಂದ ತಪ್ಪಿಸಿಕೊಂಡು ಓಡಿಹೋಗಿದೆ.

ವಿಡಿಯೊ ಇಲ್ಲಿದೆ ನೋಡಿ…

ಈ ಆಕ್ರಮಣದ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಘಟನೆಯಲ್ಲಿ ಎರಡೂ ಪ್ರಾಣಿಗಳಿಗೆ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೊಗಳು ಕಾಣಿಸಿಕೊಳ್ಳುತ್ತಿರುತ್ತದೆ. ಆಫ್ರಿಕಾದ ಸಫಾರಿ ಗುಂಪಿನಿಂದ ಪೋಸ್ಟ್ ಮಾಡಲಾದ ಇದೇ ರೀತಿಯ ವಿಡಿಯೊವೊಂದು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿಕ್ಕದಾದ ಆನೆಯೊಂದು ಕುದುರೆಯ ಮೇಲೆ ದಾಳಿ ಮಾಡಿತ್ತು. ಈ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.

ಈ ಸುದ್ದಿಯನ್ನೂ ಓದಿ:Viral Video: ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ದಂಪತಿಯ ಹನಿಮೂನ್‌ ವಿಡಿಯೊ

ಹಾಗೇ ಈ ಹಿಂದೆ ಮೇಕೆ ಹಾಗೂ ನಾಯಿಯ ಹೋರಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಎರಡು ಆಡುಗಳು ಮನೆಯ ಹೊರಗಿನ ವರಾಂಡಾದಲ್ಲಿ ನಿಂತಿರುವಾಗ ಮೇಜಿನ ಕೆಳಗೆ ನಾಯಿ ಅವಿತುಕೊಂಡಿತ್ತು. ನಾಯಿ ಮೇಕೆಯ ಕಣ್ಣಿಗೆ ಬಿದ್ದಿದ್ದು, ತಕ್ಷಣ ಮೇಕೆ ಓಡಿಬಂದು ನಾಯಿಗೆ ಗುದ್ದಿದೆ. ಇದರಿಂದ ಹೆದರಿದ ನಾಯಿ ಅಲ್ಲಿಂದ ಓಡಿ ಹೋಗಿದೆ. ಅದೃಷ್ಟವಶಾತ್, ನಾಯಿ ಮೇಕೆಯಿಂದ ತಪ್ಪಿಸಿಕೊಂಡು ತನ್ನ ಜೀವವನ್ನು ಉಳಿಸಿಕೊಂಡಿದೆ. ಈ ವಿಡಿಯೊ ನೋಡಿ ನೆಟ್ಟಿಗರು ನಗೆಯ ಕಡಲಿನಲ್ಲಿ ತೇಲಾಡಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »