Karunadu Studio

ಕರ್ನಾಟಕ

Russia-Ukraine Conflict: ರಷ್ಯಾ-ಉಕ್ರೇನ್‌ ಮಧ್ಯೆ ಶಾಂತಿ ಮಾತುಕತೆ; ಸಮರ ಅಂತ್ಯಕ್ಕೆ ಕಾಲ ಸನ್ನಿಹಿತ? – Kannada News | Russia, Ukraine peace talks day after Kyiv’s massive drone attack


ಅಂಕಾರ: ಕಳೆದ 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧಕ್ಕೆ (Russia-Ukraine Conflict) ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ದಟ್ಟವಾಗಿದ್ದು, ಈ ಎರಡೂ ದೇಶಗಳು ಶಾಂತಿ ಮಾತುಕತೆಗೆ ಮುಂದಾಗಿವೆ. ಟರ್ಕಿಯ ಸಿರಗಾನ್‌ ಅರಮನೆಯಲ್ಲಿ ರಷ್ಯಾ ಮತ್ತು ಉಕ್ರೇನ್‌ನ ಉನ್ನತ ಮಟ್ಟದ ನಿಯೋಗಗಳು ಮಾತುಕತೆ ಆರಂಭಿಸಿವೆ. 2 ವಾರಗಳ ಅಂತರದಲ್ಲಿ ನಡೆಯುತ್ತಿರುವ 2ನೇ ಸುತ್ತಿನ ಮಾತುಕತೆ ಇದಾಗಿದೆ. ಉಕ್ರೇನ್‌ ರಷ್ಯಾ ವಾಯು ನೆಲೆಗಳ ಮೇಲೆ ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದ 1 ದಿನದ ನಂತರ ಈ ಮಾತುಕತೆ ನಡೆದಿದೆ. ಉಭಯ ದೇಶಗಳು ಕಾರ್ಯಾಚರಣೆಯ ವೇಳೆ ಮೃತಪಟ್ಟ 6,000 ಸೈನಿಕರ ದೇಹಗಳನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿವೆ ಎಂದು ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಸೋಮವಾರ (ಜೂ. 2)ದ ಶಾಂತಿ ಮಾತುಕತೆ 1 ಗಂಟೆಗೂ ಹೆಚ್ಚು ಕಾಲ ನಡೆಯಿತು. ಉಕ್ರೇನ್‌ನ ರಕ್ಷಣಾ ಸಚಿವ ರುಸ್ಟೆಮ್ ಉಮೆರೋವ್ ತಮ್ಮ ದೇಶದ ನಿಯೋಗದ ನೇತೃತ್ವ ವಹಿಸಿದ್ದರು.

ತೀವ್ರವಾಗಿ ಗಾಯಗೊಂಡ ಸೈನಿಕರು ವಿನಿಮಯಕ್ಕೂ ಮಾತುಕತೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದು ಎಂದು ಸಭೆಯ ನಂತರ ರುಸ್ಟೆಮ್ ಉಮೆರೋವ್ ತಿಳಿಸಿದ್ದಾಗಿ ವರದಿಯೊಂದು ಹೇಳಿದೆ. ಟರ್ಕಿಯ ವಿದೇಶಾಂಗ ಸಚಿವ ಹಕನ್ ಫಿಡಾನ್ ಮಾತುಕತೆಯ ಅಧ್ಯಕ್ಷತೆ ವಹಿಸಿದ್ದರು. ಟರ್ಕಿಯ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಸಹ ಸಭೆಯಲ್ಲಿ ಉಪಸ್ಥಿತರಿದ್ದರು.

ಲಿಥುವೇನಿಯಾದ ವಿಲ್ನಿಯಸ್‌ನಲ್ಲಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ʼʼಎರಡೂ ಕಡೆಯವರು ಟರ್ಕಿಯ ಮಧ್ಯಸ್ಥಿಕೆಯಲ್ಲಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ ಮತ್ತು ಬಿಡುಗಡೆ ಮಾಡಲಿರುವ ಯುದ್ಧ ಕೈದಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದೇವೆ” ಎಂದು ಹೇಳಿದರು.



ಈ ಸುದ್ದಿಯನ್ನೂ ಓದಿ: Russia-Ukraine War: ರಷ್ಯಾದ ವಾಯುನೆಲೆ ಮೇಲೆ ಉಕ್ರೇನ್‌ ದಾಳಿ; 40ಕ್ಕೂ ಹೆಚ್ಚು ಯುದ್ಧ ವಿಮಾನ ನಾಶ

ರಷ್ಯಾದ ಮೇಲೆ ಕ್ರೇನ್‌ ಡ್ರೋನ್‌ ದಾಳಿ

ಜೂ. 1ರಂದು ಉಕ್ರೇನ್‌ ಡ್ರೋನ್ ದಾಳಿ ನಡೆಸಿ ರಷ್ಯಾದ 40ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ನಾಶಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಉಕ್ರೇನ್‌ನಿಂದ 7,000 ಕಿಲೋ ಮೀಟರ್ ದೂರದಲ್ಲಿರುವ ಆರ್ಕ್ಟಿಕ್, ಸೈಬೀರಿಯನ್ ಮತ್ತು ಪೂರ್ವ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ 117 ಡ್ರೋನ್​ಗಳನ್ನು ಬಳಸಲಾಗಿತ್ತು. ಸುಮಾರು ಒಂದೂವರೆ ವರ್ಷಗಳ ವ್ಯಾಪಕ ಸಿದ್ಧತೆಯ ಬಳಿಕ ಈ ದಾಳಿ ಸಂಘಟಿಸಲಾಗಿತ್ತು. ಈ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ರಷ್ಯಾ ತಿಳಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು 2022ರ ಫೆಬ್ರವರಿಯಲ್ಲಿ ಪ್ರಾರಂಭವಾಯಿತು. ಎರಡೂ ದೇಶಗಳು ನಿರಂತರ ಶೆಲ್ ದಾಳಿ, ಡ್ರೋನ್ ದಾಳಿ ಮತ್ತು ರಹಸ್ಯ ದಾಳಿಗಳಲ್ಲಿ ತೊಡಗಿಸಿಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದು, ಯುದ್ಧವನ್ನು ಕೊನೆಗೊಳಿಸುವಂತೆ ಆಗ್ರಹಿಸುತ್ತಲೇ ಬಂದಿದ್ದಾರೆ. ಕೆಲವು ದಿನಗಳ ಹಿಂದೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಟರ್ಕಿಯಲ್ಲಿ ನೇರ ಮಾತುಕತೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಆದರೆ ಅದು ನೆರವೇರಲಿಲ್ಲ. ಬದಲಾಗಿ ಎರಡೂ ದೇಶಗಳು ನಿಯೋಗವನ್ನು ಕಳಿಹಿಸಿವೆ.





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »