Karunadu Studio

ಕರ್ನಾಟಕ

Vishwavani Editorial: ಕೆಟ್ಟ ಮೇಲೆ ಬುದ್ಧಿ ಬಂತು! – Kannada News | Wisdom came from evil!


“ಪಾಕಿಸ್ತಾನವು ಭಿಕ್ಷಾಪಾತ್ರೆ ಹಿಡಿದುಕೊಂಡು ಮಿತ್ರದೇಶಗಳ ಬಳಿಗೆ ಹೋಗುವ ಬದಲಿಗೆ, ವ್ಯಾಪಾರ ಮತ್ತು ಹೂಡಿಕೆಯಲ್ಲಿ ಸಮಾನ ಪಾಲುದಾರನಾಗಿ ಜಗತ್ತಿನ ಬಳಿ ಹೋಗಲು ಬಯಸುತ್ತದೆ”- ಇದು ಕ್ವೆಟ್ಟಾದಲ್ಲಿನ ಸಭೆಯಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಉದುರಿಸಿರುವ ಆಣಿಮುತ್ತು!

‌‘ಕೆಟ್ಟ ಮೇಲೆ ಬುದ್ಧಿ ಬಂತು, ಅಟ್ಟ ಮೇಲೆ ಒಲೆ ಉರೀತು’ ಎಂಬ ಜಾಣನುಡಿಯನ್ನು ನಮ್ಮ ಹಿರೀಕರು ಕಟ್ಟಿಕೊಟ್ಟಿರುವುದು ಇಂಥವರನ್ನು ಮತ್ತು ಇಂಥ ದೇಶಗಳನ್ನು ನೋಡಿಯೇ ಇರಬೇಕು. ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿಕೊಂಡು, ದೇಶ ವಿಭಜನೆಯ ಫಲವಾಗಿ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವವನ್ನು ಕಂಡುಕೊಂಡಾಗಿನಿಂದಲೂ ಭಾರತದ ವಿರುದ್ಧವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಕತ್ತಿ ಮಸೆದುಕೊಂಡೇ ಬಂದಿರುವಂಥದ್ದು ಪಾಕಿಸ್ತಾನ ಎಂಬ ಮಗ್ಗುಲುಮುಳ್ಳು ದೇಶ.

ಇದನ್ನೂ ಓದಿ: Vishwavani Editorial: ಇದು ಭರವಸೆಯ ಆಶಾಕಿರಣ

‘ಇದು ತರವಲ್ಲದ ಹೆಜ್ಜೆ’ ಎಂದು ಭಾರತ ಹತ್ತು ಹಲವು ಬಾರಿ ಸೂಚ್ಯವಾಗಿ ಹೇಳಿದರೂ, ಅದನ್ನು ಕಿವಿಗೆ ಹಾಕಿಕೊಳ್ಳದೆ ಧಾರ್ಷ್ಟ್ಯವನ್ನು ಪ್ರದರ್ಶಿಸಿಕೊಂಡೇ ಬಂದ ಪಾಕಿಸ್ತಾನವು ಕಳೆದ ಕೆಲ ವರ್ಷ ಗಳಿಂದ ಹಲವು ಆಯಾಮಗಳಲ್ಲಿ ಕುಸಿದು ಕೂತಿದೆ. ಅಂದರೆ, ಆಹಾರ ಪದಾರ್ಥಗಳ ಬೆಲೆಯೇರಿಕೆ, ತಾರಕಕ್ಕೆ ಏರಿರುವ ಹಣದುಬ್ಬರ, ಧರಾಶಾಯಿಯಾದ ಆರ್ಥಿಕತೆ, ಶೂಲದಂತೆ ಇರಿಯುತ್ತಿರುವ ಸಾಲ ಹೀಗೆ ಸಮಸ್ಯೆಗಳ ಕುಣಿಕೆ ಹಗ್ಗವೇ ಪಾಕಿಸ್ತಾನವನ್ನು ಸುತ್ತಿಕೊಂಡಿದೆ.

ಇಷ್ಟಾಗಿಯೂ ಭಾರತದ ಮೇಲೆ ಉಗ್ರರನ್ನು ಛೂಬಿಡುವ, ವಿಧ್ವಂಸಕ ಕೃತ್ಯಗಳಿಗೆ ಚಿತಾವಣೆ ನೀಡುವ ಕುಬುದ್ಧಿಯನ್ನು ಅದು ಬಿಟ್ಟಿರಲಿಲ್ಲ. ಇತ್ತೀಚಿನ ಪಹಲ್ಗಾಮ್ ಮಾರಣಹೋಮ ಇದಕ್ಕೆ ಜ್ವಲಂತ ಸಾಕ್ಷಿ. ಮೇಲೆ ಉಲ್ಲೇಖಿಸಿರುವ ಸರಣಿ ಸಮಸ್ಯೆಗಳ ಕಾರಣದಿಂದಾಗಿಯೇ ಅದು ಮಿತ್ರ ರಾಷ್ಟ್ರಗಳ ಸಮ್ಮುಖದಲ್ಲಿ ಭಿಕ್ಷಾಪಾತ್ರೆಯನ್ನು ಹಿಡಿಯುವಂತಾಗಿದ್ದು. ಆದರೆ ಆ ರಾಷ್ಟ್ರಗಳು ಕೂಡ ಪಾಕಿಸ್ತಾನವನ್ನು ನಂಬುವ ಸ್ಥಿತಿಯಲ್ಲೀಗ ಇಲ್ಲದ ಕಾರಣ, ‘ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪಾಲುದಾರನಾಗುವ’ ಆಶಯ ಪಾಕಿಸ್ತಾನದ ಪರಮೋಚ್ಚ ನಾಯಕರಿಂದ ಹೊಮ್ಮಿದೆ!

ಪಾಕಿಸ್ತಾನಕ್ಕೆ, ಅದರ ನಾಯಕರಿಗೆ ಮತ್ತು ಸೇನಾಽಕಾರಿಗಳಿಗೆ ಇನ್ನಾದರೂ ಬುದ್ಧಿ ಬರಲಿ ಎಂದಷ್ಟೇ ನಾವು ಆಶಿಸಬಹುದು…



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »