Karunadu Studio

ಕರ್ನಾಟಕ

RCB vs PBKS Final: ಫೈನಲ್‌ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಆಘಾತ; ತವರಿಗೆ ಮರಳಿದ ಫಿಲ್‌ ಸಾಲ್ಟ್‌! – Kannada News | No Phil Salt In IPL 2025 Final? RCB Opener’s Availability Against Punjab Kings Under Question


ಅಹಮದಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಎತ್ತಿ ಹಿಡಿಯುವ ಪ್ರಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್(RCB vs PBKS Final) ತಂಡವನ್ನು ಎದುರಿಸುವ ಮುನ್ನವೇ ತಂಡಕ್ಕೆ ದೊಡ್ಡ ಆಘಾತವೊಂದು ಎದುರಾಗಿರುವುದಾಗಿ ತಿಳಿದುಬಂದಿದೆ. ವರದಿಯ ಪ್ರಕಾರ, ಆರ್‌ಸಿಬಿಯ ಅದ್ಭುತ ಆರಂಭಿಕ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್(Phil Salt) ತಮ್ಮ ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿ ದಿಢೀರ್‌ ಇಂಗ್ಲೆಂಡ್‌ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಫೈನಲ್‌ಗೂ ಮುನ್ನ ಸೋಮವಾರ ನಡೆದಿದ್ದ ತಂಡದ ಅಂತಿಮ ಹಂತದ ತರಬೇತಿ ಅವಧಿಯಲ್ಲಿ ಸಾಲ್ಟ್ ಕಾಣಿಸಿಕೊಂಡಿರಲಿಲ್ಲ. ಇದೀಗ ವರದಿಗಳ ಪ್ರಕಾರ ಅವರು ತವರಿಗೆ ಮರಳಿದ್ದಾರೆ. ಎನ್ನಲಾಗಿದೆ. ಆದರೆ ಈ ಬಗ್ಗೆ ಫ್ರಾಂಚೈಸಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನೊಂದೆಡೆ ತಂಡದ ಬಿಗ್‌ ಹಿಟ್ಟರ್‌ ಟಿಮ್‌ ಡೇವಿಡ್‌ ಗಾಯದಿಂದ ಚೇತರಿಸಿಕೊಂಡಿದ್ದರೂ ಅವರು ಆಡುವ ಖಚಿತತೆ ಇಲ್ಲ. ನಾಯಕ ಪಾಟೀದಾರ್‌ ಕೂಡ ಸೋಮವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ವೈದ್ಯರ ಅನುಮತಿ ಮೇರೆಗೆ ಡೇವಿಡ್‌ ಲಭ್ಯವಾಗಲಿದ್ದಾರೆ ಎಂದಿದ್ದರು. ಒಂದೊಮ್ಮೆ ಉಭಯ ಆಟಗಾರರು ಫೈನಲ್‌ ಪಂದ್ಯದಲ್ಲಿ ಆಡದಿದ್ದರೆ ಆರ್‌ಸಿಬಿಗೆ ಭಾರೀ ಹೊಡೆತ ಬೀಳಲಿದೆ.

ಫಿಲ್‌ ಸಾಲ್ಟ್‌ ಅಲಭ್ಯರಾದರೆ ಅವರ ಬದಲು ನ್ಯೂಜಿಲ್ಯಾಂಡ್‌ನ ಸ್ಫೋಟಕ ಬ್ಯಾಟರ್‌ ಟಿಮ್ ಸೀಫರ್ಟ್ ಅವರು ವಿರಾಟ್‌ ಜತೆ ಆರಂಭಿಕನಾಗಿ ಕಣಕ್ಕಿಳಿಯಬಹುದು. ಇಲ್ಲವಾದಲ್ಲಿ ಕನ್ನಡಿಗ ಮಯಾಂಕ್‌ ಅಗರ್ವಾಲ್‌ ಇನಿಂಗ್ಸ್‌ ಆರಂಭಿಸಬಹುದು. ಆಗ ಸೀಫರ್ಟ್ ಮಧ್ಯಮ ಕ್ರಮಾಂಕದಲ್ಲಿ ಆಡಬಹುದು. ಫಿಲ್‌ ಸಾಲ್ಟ್‌ ಹಾಲಿ ಆವೃತ್ತಿಯಲ್ಲಿ ಆರ್‌ಸಿಬಿ ಪರ 387 ರನ್‌ ಗಳಿಸಿದ್ದರು.

ಅಹಮದಾಬಾದ್‌ ಕ್ರೀಡಾಂಗಣ ಸಂಪೂರ್ಣ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಫೈನಲ್‌ ಪಂದ್ಯದಲ್ಲೂ ದೊಡ್ಡ ಮೊತ್ತ ನಿರೀಕ್ಷಿಸಬಹುದು. ಇಲ್ಲಿ ಈ ಬಾರಿ ನಡೆದ 8 ಪಂದ್ಯಗಳ 11 ಇನ್ನಿಂಗ್ಸ್‌ಗಳಲ್ಲಿ 200+ ರನ್‌ ದಾಖಲಾಗಿವೆ. ಅದರಲ್ಲೂ ಚೇಸಿಂಗ್‌ ನಡೆಸಿದ ತಂಡಗಳೇ ಹೆಚ್ಚು ಗೆದ್ದಿವೆ. ಕಳೆದ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಂಬೈ 200+ ಮೊತ್ತ ಪೇರಿಸಿದರೂ ಇದನ್ನು ಪಂಜಾಬ್‌ ಯಾವುದೇ ಒತ್ತಡವಿಲ್ಲದೆ ಒಂದು ಓವರ್‌ ಬಾಕಿ ಇರುವಂತೆಯೇ ಗುರಿ ತಲುಪಿ ಗೆದ್ದು ಬೀಗಿತ್ತು. ಹೀಗಾಗಿ ಪಂದ್ಯದಲ್ಲಿ ಟಾಸ್‌ ಪಾತ್ರ ಕೂಡ ನಿರ್ಣಾಯಕ. ಅದರಲ್ಲೂ ಮಳೆ ಅಡ್ಡಿಪಡಿಸಿದರೆ ಚೇಸಿಂಗ್‌ ತಂಡಕ್ಕೆ ಇನ್ನಷ್ಟು ಸಹಕಾರಿಯಾಗಲಿದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »