Karunadu Studio

ಕರ್ನಾಟಕ

ಹರಾಜಿನಲ್ಲಿ ಮಾರಾಟವಾಗದ ಬೇಸರದಲ್ಲಿ ಕಬಡ್ಡಿಗೆ ನಿವೃತ್ತಿ ಘೋಷಿಸಿದ ಪರ್ದೀಪ್ ನರ್ವಾಲ್ – Kannada News | Pardeep Narwal retires after going unsold in Pro Kabaddi League auction


ನವದೆಹಲಿ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್(PKL 2025) ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದ, ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಅಂಕ ಕಲೆಹಾಕಿರುವ ರೈಡರ್ ಪ್ರದೀಪ್ ನರ್ವಾಲ್(Pardeep Narwal) ಅವರು ನಿವೃತ್ತಿ ಘೋಷಿಸಿದ್ದಾರೆ. ಮಂಗಳವಾರ ತಮ್ಮ ನಿವೃತ್ತಿ ಪ್ರಕಟಿಸಿದ್ದು, ಕೋಚಿಂಗ್‌ ತರಬೇತಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಮೂರು ಬಾರಿ ಪಿಕೆಎಲ್ ಚಾಂಪಿಯನ್ ಆಗಿರುವ ಮತ್ತು ಲೀಗ್ ಇತಿಹಾಸದಲ್ಲಿ ಶ್ರೇಷ್ಠ ರೈಡರ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದ 28 ವರ್ಷದ ಪ್ರದೀಪ್ ನರ್ವಾಲ್ ಅವರನ್ನು ಎರಡು ದಿನಗಳ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ಕಡೆಗಣಿಸಿದ್ದವು. ಯುಪಿ ಯೋಧಾಸ್, ಪಾಟ್ನಾ ಪೈರೇಟ್ಸ್ ಅಥವಾ ಬೆಂಗಳೂರು ಬುಲ್ಸ್‌ನಂತಹ ಮಾಜಿ ತಂಡಗಳು 2 ನೇ ದಿನದಂದು ಅವರನ್ನು ಆಯ್ಕೆ ಮಾಡುತ್ತವೆ ಎಂಬ ನಿರೀಕ್ಷೆಯಿದ್ದರೂ. ಆದರೆ ಯಾವ ತಂಡವೂ ಅವರನ್ನು ಬಿಡ್‌ಗಳನ್ನು ಮಾಡಲಾಗಿಲ್ಲ. ಈ ಹಿಂದೆ ಅವರ ಖರೀದಿಗೆ ತಂಡಗಳು ಭಾರೀ ಪೈಪೋಟಿ ನಡೆಸಿತ್ತು. ಕಳೆದ ಬಾರಿ ಬುಲ್ಸ್‌ ತಂಡದ ನಾಯಕನಾಗಿದ್ದ ಅವರು ಸಂಪೂರ್ಣ ವೈಫಲ್ಯ ಕಂಡಿದ್ದರು.

ಇದನ್ನೂ ಓದಿ IPL 2025 Final: ತಾಳ್ಮೆಯ ಫಲ ಸಿಹಿಯಾಗಿರುತ್ತೆ; ಆರ್‌ಸಿಬಿಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ

ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಮಾತನಾಡಿದ್ದ ನರ್ವಾಲ್, ಆರಂಭದಲ್ಲಿ ಅಸಮಾಧಾನಗೊಳ್ಳಲಿಲ್ಲ ಆದರೆ ಕನಿಷ್ಠ ಒಂದು ತಂಡವಾದರೂ ಆಸಕ್ತಿ ತೋರಿಸುತ್ತದೆ ಎಂದು ನಿರೀಕ್ಷಿಸಿದ್ದೆ. ನಾನು ಮೊದಲು ಪಾಟ್ನಾ ಪರ ಆಡಿದಾಗ, 200–300 ಅಂಕಗಳನ್ನು ಗಳಿಸುತ್ತಿದ್ದೆ. ಈಗ 111 ಅಥವಾ 122 ಕೂಡ ಸಾಕಾಗುವುದಿಲ್ಲ ಎಂದು ಅನಿಸುತ್ತದೆ. ಕಳೆದ ವರ್ಷ ನನ್ನಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ ಎನ್ನುವುದು ನಿಜ ಎಂದು ಹೇಳಿದ್ದರು.

190 ಪಂದ್ಯಗಳಲ್ಲಿ 1,801 ರೈಡ್ ಪಾಯಿಂಟ್‌ಗಳೊಂದಿಗೆ, ಪರ್ದೀಪ್ ನರ್ವಾಲ್ ಕೆಲವೇ ಕೆಲವು ಆಟಗಾರರಿಗೆ ಹೊಂದಿಕೆಯಾಗಬಹುದಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಮುಂದಿನ ಆವೃತ್ತಿಯಲ್ಲಿ ಅವರು ಯಾವುದಾದರು ತಂಡಕ್ಕೆ ಕೋಚ್‌ ಆಗಿ ಕಾಣಿಸಿಕೊಳ್ಳಬಹುದು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »