Karunadu Studio

ಕರ್ನಾಟಕ

IPL 2025: ಐಪಿಎಲ್​ ಟ್ರೋಫಿ ಮೇಲಿರುವ ಸಂಸ್ಕೃತ ಶ್ಲೋಕದ ಅರ್ಥವೇನು? – Kannada News | IPL 2025: Do you know the meaning of Indian Premier League’s motto inscribed in Sanskrit on the trophy?


ಅಹಮದಾಬಾದ್‌: ಆರ್‌ಸಿಬಿ ಮತ್ತು ಪಂಜಾಜ್‌ ಕಿಂಗ್ಸ್‌(RCB vs PBKS Final) ತಂಡಗಳು ಚೊಚ್ಚಲ ಐಪಿಎಲ್‌(IPL 2025) ಟ್ರೋಫಿಯನ್ನು ಗೆಲ್ಲುವ ಇರಾದೆಯೊಂದಿಗೆ ಫೈನಲ್‌ ಪಂದ್ಯವನ್ನಾಡಲು ಸಜ್ಜಾಗಿದೆ. ಯಾರೇ ಗೆದ್ದರೂ ಚೊಚ್ಚಲ ಟ್ರೋಫಿ ಗೆದ್ದ ಸಾಧನೆ ಮಾಡಲಿದ್ದಾರೆ. ಇದರ ನಡುವೆ ಟ್ರೋಫಿಯಲ್ಲಿ (IPL Trophy) ಬರೆದಿರುವ ಸಂಸ್ಕೃತ ಶ್ಲೋಕ(ipl trophy in Sanskrit) ಮತ್ತು ಅದರ ಅರ್ಥವೇನು? ಎಂಬ ಕುತೂಹಲ ಮೂಡಿದೆ.

ಹೌದು, ಐಪಿಎಲ್​ ಟ್ರೋಫಿ ಮೇಲಿರುವ ಸಂಸ್ಕೃತ ಶ್ಲೋಕಕ್ಕೂ ಭಾರತ ತಂಡ 1983ರಲ್ಲಿ ಗೆದ್ದ ಮೊದಲ ಏಕದಿನ ವಿಶ್ವಕಪ್‌ಗೂ ನಂಟಿದೆ. 2008ರ ಮೊದಲ ಸೀಸನ್​ನಲ್ಲಿ ಐಪಿಎಲ್‌ ಟ್ರೋಫಿಯ ಆಕಾರವು ಭಾರತದ ನಕ್ಷೆಯ ರೂಪದಲ್ಲಿತ್ತು. ಆದರೆ 2009ರ ಬಳಿಕ ಟ್ರೋಫಿಯ ವಿನ್ಯಾಸ ಬದಲಾಯಿಸಲಾಯಿತು. ‘ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ’ (Yatra Pratibha Avsara Prapnotihi) ಎಂಬ ಸಂಸ್ಕೃತ ಶ್ಲೋಕವನ್ನು ಟ್ರೋಫಿಯ ಮೇಲೆ ಬರೆಯಲಾಗಿಯಿತು.

‘ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ’ ಎಂದರೆ ಎಲ್ಲಿ ಪ್ರತಿಭೆ ಇರುತ್ತದೋ, ಅಲ್ಲಿ ಅವಕಾಶ ಕೂಡ ಇರುತ್ತದೆ ಎಂದು. ಕ್ರಿಕೆಟ್​ ಪ್ರತಿಭೆಗಳು ತಾರೆಯರಾಗಿ ಬೆಳೆಯುವ ಜತೆಗೆ ಶ್ರೀಮಂತರೂ ಆಗುವ ವೇದಿಕೆ ಐಪಿಎಲ್​. ಈಗಾಗಲೇ ಈ ಟೂರ್ನಿಯಲ್ಲಿ ಆಡಿ ವಿಶ್ವಮಟ್ಟದಲ್ಲಿ ಮಿಂಚಿದ ಹಲವು ಆಟಗಾರರಿದ್ದಾರೆ. ಭಾರತ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್​​​ ಟ್ರೋಫಿಯಲ್ಲೂ ‘ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ’ ಎಂದು ಸಂಸ್ಕೃತ ಶ್ಲೋಕವನ್ನು ಬರೆಯಲಾಗಿತ್ತು.

ಕಪಿಲ್‌ ದೇವ್‌ ಸಾರಥ್ಯದ ಭಾರತ ತಂಡ 1983ರ ವಿಶ್ವಕಪ್‌ ಆಡಲು ಇಂಗ್ಲೆಂಡ್‌ಗೆ ತೆರಳಿದಾಗ ತಂಡವನ್ನು ಮತ್ತು ಆಟಗಾರರನ್ನು ಅತ್ಯಂತ ಕೀಳು ಮಟ್ಟದಲ್ಲಿ ನೋಡಲಾಗಿತ್ತು. ಅಪಮಾನ ಕೂಡ ಮಾಡಲಾಗಿತ್ತು. ಆದರೆ ಕಪಿಲ್‌ ಪಡೆ ಬಲಾಡ್ಯ ತಂಡಗಳನ್ನು ಮಣಿಸಿ ವಿಶ್ವಕಪ್‌ ಗೆದ್ದು ವಅಪಮಾನ ಮಾಡಿದರಿಂದಲೇ ಸನ್ಮಾನ ಮಾಡಿಸಿಕೊಂಡು ತವರಿಗೆ ಮರಳಿದ್ದರು. ಈ ವೇಳೆ ವಿಶ್ವಕಪ್ ಟ್ರೋಫಿಯಲ್ಲಿ ‘ಯತ್ರ ಪ್ರತಿಭಾ ಅವ್‌ಸರ ಪ್ರಪ್ನೋತಿಹಿ’ ಎಂದು ಬರೆಯಲಾಗಿತ್ತು. ಇದೇ ಸ್ಫೂರ್ತಿಯಿಂದ ಐಪಿಎಲ್‌ ಟ್ರೋಫಿಯಲ್ಲೂ ಈ ಸಾಲುಗಳನ್ನು ಕೆತ್ತಲಾಗಿದೆ.

ಇದನ್ನೂ ಓದಿ IPL 2025 Final: ತಾಳ್ಮೆಯ ಫಲ ಸಿಹಿಯಾಗಿರುತ್ತೆ; ಆರ್‌ಸಿಬಿಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »