Karunadu Studio

ಕರ್ನಾಟಕ

Kanimozhi Karunanidhi: ಭಾರತದ ರಾಷ್ಟ್ರೀಯ ಭಾಷೆ ಯಾವುದು? ಈ ಪ್ರಶ್ನೆಗೆ ಸ್ಪೇನ್‌ನಲ್ಲಿರುವ ಕನಿಮೋಳಿ ಕೊಟ್ಟ ಉತ್ತರವೇನು ಗೊತ್ತೇ? – Kannada News | Kanimozhi Karunanidhi: What is the national language of India? Do you know what Kanimozhi, who is in Spain, answered this question?


ಸ್ಪೇನ್‌: ಆಪರೇಷನ್ ಸಿಂದೂರ್ (Operation Sindoor) ಅನಂತರ ಭಾರತ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಸ್ಪೇನ್ ಗೆ (Spain) ತೆರಳಿರುವ ದ್ರಾವಿಡ ಮುನ್ನೇತ್ರ ಕಳಗಂ (Dravida Munnetra Kazhagam) ಪಕ್ಷದ ಸಂಸದೆ (DMK MP) ಕನಿಮೋಳಿ ಕರುಣಾನಿಧಿ ( Kanimozhi Karunanidhi ) ಅವರಲ್ಲಿ ಭಾರತದ ರಾಷ್ಟ್ರೀಯ ಭಾಷೆ ಯಾವುದು ಎಂದು ಪ್ರಶ್ನಿಸಿರುವ ಘಟನೆ ನಡೆದಿದೆ. ಇದಕ್ಕೆ ಪ್ರತಿಯಾಗಿ ಸಂಸದೆ ನೀಡಿರುವ ಉತ್ತರವು ಜಗತ್ತಿಗೆ ಒಂದು ಮಹತ್ವದ ಸಂದೇಶವಾಗಿದೆ ಮಾತ್ರವಲ್ಲ ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ಕನಿಮೋಳಿ ನೇತೃತ್ವದ ನಿಯೋಗವು ಐದು ರಾಷ್ಟ್ರಗಳ ಭೇಟಿಯ ಕೊನೆಯ ಭಾಗವಾಗಿ ಈಗ ಸ್ಪೇನ್ ನಲ್ಲಿದ್ದು ಶೀಘ್ರದಲ್ಲೇ ಭಾರತ ಮರಳಿ ಬರಲಿದೆ.

ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 27 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಭಾರತೀಯ ವಾಯುಸೇನೆಯು ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸಿತ್ತು. ಇದಾದ ಬಳಿಕ ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಮೇ 10ರಂದು ಕದನ ವಿರಾಮ ಘೋಷಣೆ ಮಾಡಲಾಯಿತು. ಆ ಬಳಿಕ ಭಯೋತ್ಪಾದನೆಯ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ ಎನ್ನುವ ಸಂದೇಶ ಹೊತ್ತು ಭಾರತದ ಸರ್ವಪಕ್ಷಗಳ ಏಳು ನಿಯೋಗಗಳು ವಿಶ್ವದ ವಿವಿಧ ದೇಶಗಳಿಗೆ ತೆರಳಿವೆ.

ಪ್ರಸ್ತುತ ಸ್ಪೇನ್‌ನಲ್ಲಿರುವ ಡಿಎಂಕೆ ಸಂಸದೆ ಕನಿಮೋಳಿ ಅವರನ್ನು ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಪ್ರಶ್ನಿಸಲಾಗಿದೆ. ಆದರೆ ಅವರು ನೀಡಿರುವ ಪ್ರತಿಕ್ರಿಯೆಯು ಜಗತ್ತಿಗೆ ಒಂದು ಸಂದೇಶವಾಗಿದೆ. ಆಪರೇಷನ್ ಸಿಂದೂರ್ ಅನಂತರ ಭಾರತದ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಸ್ಪೇನ್‌ಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಡಿಎಂಕೆ ಸಂಸದೆ ಕನಿಮೋಳಿ ಕರುಣಾನಿಧಿ ಅವರಲ್ಲಿ ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಪ್ರಶ್ನಿಸಲಾಗಿದೆ. ಇದಕ್ಕೆ ಅವರು ಭಾರತದ ರಾಷ್ಟ್ರೀಯ ಭಾಷೆ ‘ವೈವಿಧ್ಯತೆಯಲ್ಲಿ ಏಕತೆ’ ಎಂದು ಹೇಳಿದ್ದಾರೆ. ಇದು ಅವರ ನಿಯೋಗವು ಜಗತ್ತಿಗೆ ತಿಳಿಸುವ ಗುರಿಯನ್ನು ಹೊಂದಿರುವ ಸಂದೇಶವಾಗಿದೆ ಎಂದು ತಿಳಿಸಿದರು.

ಮ್ಯಾಡ್ರಿಡ್‌ನಲ್ಲಿರುವ ಭಾರತೀಯ ವಲಸಿಗ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ರಾಷ್ಟ್ರೀಯ ಭಾಷೆ ಏಕತೆ ಮತ್ತು ವೈವಿಧ್ಯತೆ. ಈ ನಿಯೋಗವು ಜಗತ್ತಿಗೆ ನೀಡುವ ಸಂದೇಶವದು. ಇದು ಇಂದಿನ ಅತ್ಯಂತ ಮುಖ್ಯ ವಿಷಯ ಎಂದು ಹೇಳಿದರು.

ಭಾಷೆಯ ವಿಷಯದಲ್ಲಿ ವಿಶೇಷವಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರಲ್ಲಿ ತ್ರಿಭಾಷಾ ಸೂತ್ರದ ವಿಷಯದಲ್ಲಿ ತಮಿಳುನಾಡಿನ ಡಿಎಂಕೆ ಸರ್ಕಾರ ಮತ್ತು ಕೇಂದ್ರದ ನಡುವೆ ಇತ್ತೀಚೆಗೆ ತೀವ್ರ ಘರ್ಷಣೆಗಳು ಉಂಟಾಗಿತ್ತು. ಹೀಗಾಗಿ ಅವರು ಸ್ಪೇನ್ ನಲ್ಲಿ ಈ ಪ್ರಶ್ನೆಯನ್ನು ಎದುರಿಸಬೇಕಾಯಿತು.

ಭಯೋತ್ಪಾದನೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ದೇಶದಲ್ಲಿ ತುಂಬಾ ಕೆಲಸ ಮಾಡಬೇಕಾಗಿದೆ. ನಾವು ಅದನ್ನು ಮಾಡಲು ಬಯಸುತ್ತೇವೆ. ದುರದೃಷ್ಟವಶಾತ್ ನಮ್ಮನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ನಾವು ಭಯೋತ್ಪಾದನೆಯನ್ನು ಎದುರಿಸಬೇಕಾಗಿದೆ. ಇದು ಸಂಪೂರ್ಣವಾಗಿ ಅನಗತ್ಯವಾದ ಯುದ್ಧ. ಭಾರತ ಸುರಕ್ಷಿತ ಸ್ಥಳವಾಗಿದೆ ಮತ್ತು ಸರ್ಕಾರ ಕಾಶ್ಮೀರ ಸುರಕ್ಷಿತವಾಗಿದೆ ಎಂದು ಸರ್ಕಾರ ಖಚಿತಪಡಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹರಾಜಿನಲ್ಲಿ ಮಾರಾಟವಾಗದ ಬೇಸರದಲ್ಲಿ ಕಬಡ್ಡಿಗೆ ನಿವೃತ್ತಿ ಘೋಷಿಸಿದ ಪರ್ದೀಪ್ ನರ್ವಾಲ್

ಭಾರತೀಯರಾಗಿ ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ನಾವು ಸ್ಪಷ್ಟಪಡಿಸಬೇಕು. ಭಯೋತ್ಪಾದಕೃ ಹೇಗೆ ಬೇಕಾದರೂ ಪ್ರಯತ್ನಿಸಬಹುದು. ಅವರು ನಮ್ಮನ್ನು ಹಳಿತಪ್ಪಿಸಲು ಸಾಧ್ಯವಿಲ್ಲ. ಕಾಶ್ಮೀರ ಸುರಕ್ಷಿತ ಸ್ಥಳವಾಗಿ ಉಳಿಯುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು. ಕನಿಮೋಳಿ ನೇತೃತ್ವದ ನಿಯೋಗದಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ, ಬಿಜೆಪಿಯ ಬ್ರಿಜೇಶ್ ಚೌಟ, ಎಎಪಿಯ ಅಶೋಕ್ ಮಿತ್ತಲ್, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ಮಾಜಿ ರಾಜತಾಂತ್ರಿಕ ಮಂಜೀವ್ ಸಿಂಗ್ ಪುರಿ ಇದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »