Karunadu Studio

ಕರ್ನಾಟಕ

Hema Committee Report: ಹೇಮಾ ಸಮಿತಿ ವರದಿ ಜಾರಿಗೆ ವಿಳಂಬ: ಕೇರಳ ಸರ್ಕಾರದ ವಿರುದ್ಧ ʼಮಿಲನʼ ನಟಿ ಪಾರ್ವತಿ ಆಕ್ರೋಶ – Kannada News | Parvathy Thiruvothu slams Kerala government’s inaction on Hema Committee’s findings


ತಿರುವನಂತಪುರಂ: ಮಲಯಾಳಂ ಚಿತ್ರರಂಗದ ವ್ಯವಸ್ಥಿತ ಸಮಸ್ಯೆಗಳನ್ನು ಬಹಿರಂಗ ಪಡಿಸಿ, ಪರಿಹಾರವನ್ನು ಸೂಚಿಸಿ ಸಲ್ಲಿಕೆಯಾದ ಹೇಮಾ ಸಮಿತಿ (Hema Committee) ವರದಿಯ ಶಿಫಾರಸುಗಳನ್ನು ಜಾರಿಗೊಳಿಸದ ಕೇರಳ ಸರ್ಕಾರದ (Kerala government) ವಿರುದ್ಧ ನಟಿ ಪಾರ್ವತಿ ತಿರುವೊತು (Parvathy Thiruvothu) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವು ಸಮಯಗಳ ಹಿಂದೆಯೇ ಸಲ್ಲಿಕೆಯಾದ ಈ ವರದಿಯ ಮೇಲಿನ ಕ್ರಮದ ಕುರಿತು ಸರ್ಕಾರ ಯಾವುದೇ ಪ್ರಗತಿಯನ್ನು ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.

ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ನೇರವಾಗಿ ಪ್ರಶ್ನಿಸಿರುವ ಪಾರ್ವತಿ, “ಈ ಸಮಿತಿಯನ್ನು ರಚಿಸಿದ ನಿಜವಾದ ಕಾರಣದತ್ತ ಈಗ ಗಮನ ಹರಿಸಬಹುದೇ? ಚಿತ್ರರಂಗದಲ್ಲಿನ ಸಮಸ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ನೀತಿಗಳನ್ನು ಜಾರಿಗೊಳಿಸುವುದು ಯಾವಾಗ?” ಎಂದು ಬರೆದಿದ್ದಾರೆ. ವಿಳಂಬವನ್ನು ಗುರಿಯಾಗಿರಿಸಿ, “ಐದೂವರೆ ವರ್ಷಗಳಿಂದ ವರದಿ ಸಲ್ಲಿಕೆಯಾಗಿದ್ದರೂ ಯಾವುದೇ ಆತುರವಿಲ್ಲ!” ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Anju Aravind: ಎರಡು ಮದುವೆಯಾದ್ರೂ ಮುರಿದು ಬಿದ್ದ ದಾಂಪತ್ಯ ಜೀವನ; ಈಗ ಬೆಂಗಳೂರಿನ ಈ ವ್ಯಕ್ತಿಯ ಜೊತೆ ಈ ನಟಿ ಲಿವ್ ಇನ್ !

ಸ್ಥಳೀಯ ಮಾಧ್ಯಮಗಳ ವದರಿ ಪ್ರಕಾರ, ಹೇಮಾ ಸಮಿತಿಗೆ ಸಂಬಂಧಿಸಿದ ವಿವರಗಳನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ತಂಡ (SIT) ಪ್ರಕರಣವನ್ನು ಮುಚ್ಚಲು ಸಿದ್ಧವಾಗಿದೆ. ಆದರೆ SIT ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ ಮತ್ತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ. ಹೇಮಾ ಸಮಿತಿಗೆ ಹೇಳಿಕೆ ನೀಡಿದ ಕೆಲವರು ಈಗ ದೂರು ಮುಂದುವರಿಸಲು ಒಪ್ಪಿಲ್ಲ ಎಂದು SIT ನ್ಯಾಯಾಲಯಕ್ಕೆ ತಿಳಿಸಿದೆ. ಇದಕ್ಕೆ ನ್ಯಾಯಾಲಯ, “ಯಾರನ್ನೂ ಒತ್ತಾಯಿಸುವ ಅಗತ್ಯವಿಲ್ಲ. ಆದರೆ SITಯಿಂದ ಬಂದ ನೋಟಿಸ್‌ಗೆ ಉತ್ತರಿಸಬೇಕು,” ಎಂದು ಸೂಚಿಸಿದೆ.

ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಸದಸ್ಯೆ ಮತ್ತು ಚಿತ್ರ ಸಂಕಲನಕಾರೆ ಬಿನಾ ಪಾಲ್, ಸರ್ಕಾರದ ನಿಷ್ಕ್ರಿಯತೆಯನ್ನು ಟೀಕಿಸಿದ್ದಾರೆ. “ಹೇಮಾ ಸಮಿತಿ ವರದಿಯು ಕೇವಲ ಲೈಂಗಿಕ ಕಿರುಕುಳಕ್ಕೆ ಸೀಮಿತವಲ್ಲ. ಕೆಲವರು ತಮ್ಮ ದೂರನ್ನು ಮುಂದುವರಿಸದಿರಲು ಆಯ್ಕೆ ಮಾಡಿರಬಹುದು. ಆದರೆ ಇನ್ನೂ ಹಲವರು ಮುಂದುವರಿಯುತ್ತಿದ್ದಾರೆ. ಈ ವರದಿಯು ಚಿತ್ರರಂಗದಲ್ಲಿ ದೀರ್ಘಕಾಲ ಬಗೆಹರಿಯದ ಸಮಸ್ಯೆಗಳನ್ನು ಎತ್ತಿತೋರಿಸಿದೆ. ಈ ಶಿಫಾರಸುಗಳನ್ನು ಜಾರಿಗೊಳಿಸಬೇಕೆಂದು ನಾವು ಬಯಸುತ್ತೇವೆ” ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಚಲನಚಿತ್ರ ನೀತಿ ರಚನೆಯ ಪ್ರಕ್ರಿಯೆಯೂ ನಿಧಾನವಾಗಿದೆ ಎಂದು ಬಿನಾ ಪಾಲ್ ಆರೋಪಿಸಿದ್ದಾರೆ. “ಇದೊಂದು ನಿಧಾನ ಪ್ರಕ್ರಿಯೆ. ಅನೇಕ ಸಮಾಲೋಚನೆಗಳು ನಡೆದವು, ನಮ್ಮನ್ನೂ ಸಂಪರ್ಕಿಸಲಾಯಿತು. ಆದರೆ ಇದು ವಿಳಂಬವಾಗುತ್ತಿರುವುದು ನಿರಾಶಾದಾಯಕ. ಈ ಯೋಜನೆಯ ನೇತೃತ್ವ ವಹಿಸಿದ್ದ ವ್ಯಕ್ತಿಯ ನಿಧನದಿಂದ ವಿಳಂಬವಾಗಿದೆ” ಎಂದಿದ್ದಾರೆ.

ಆದರೂ ಕೆಲವು ಪ್ರಗತಿಯನ್ನು ಗುರುತಿಸಿರುವ ಬಿನಾ, “ಐದು ವರ್ಷಗಳ ಹಿಂದೆ ಯಾರೂ ಮಹಿಳೆಯರ ಸಮಸ್ಯೆಯ ಬಗ್ಗೆ ಮಾತನಾಡುತ್ತಿರಲಿಲ್ಲ. ಈಗ ಚಿತ್ರರಂಗದ ಎಲ್ಲ ಹಂತಗಳಲ್ಲಿ ಈ ಕುರಿತು ಚರ್ಚೆಯಾಗುತ್ತಿದೆ. ಇದು ಗೋಚರವಾಗದ ಸಮಸ್ಯೆಯಾಗಿತ್ತು. ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »