ರಷ್ಯಾ: ಕಳೆದ 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧ (Russia-Ukraine Conflict) ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇತ್ತೀಚೆಗೆ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿ ಯುದ್ಧ ವಿಮಾನವನ್ನು ಧ್ವಂಸಗೊಳಿಸಿದ ಉಕ್ರೇನ್ ಇದೀಗ ಮತ್ತೊಂದು ಬಲವಾದ ಹೊಡೆತ ನೀಡಿದೆ. ಹಿಂದಿನ ದಾಳಿ ನಡೆದ 72 ಗಂಟೆಗಳ ಒಳಗೆ ಉಕ್ರೇನ್‌ನ ಸೇನೆಯು ರಷ್ಯಾದ ಕ್ರಿಮಿಯನ್ ಸೇತುವೆಯ ಮೇಲೆ 1,100 ಕಿಲೋಗ್ರಾಂಗಳಷ್ಟು ನೀರೊಳಗಿನ ಸ್ಫೋಟಕಗಳನ್ನು ಇರಿಸಿ ಮೂಲಕ ಮೂಲ ಸೌಕರ್ಯದ ಮೇಲೆ ಮತ್ತೊಂದು ಮಹತ್ವದ ದಾಳಿ ನಡೆಸಿದೆ. ಈ ಸ್ಫೋಟವು ಸೇತುವೆಗೆ ವ್ಯಾಪಕ ಹಾನಿಯನ್ನುಂಟು ಮಾಡಿದೆ. ಸದ್ಯ ಈ ದಾಳಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೂ ಸೇರಿ ಉಕ್ರೇನ್ 3ನೇ ಬಾರಿಗೆ ಕ್ರಿಮಿಯನ್ ಸೇತುವೆಯ ಮೇಲೆ ದಾಳಿ ನಡೆಸಿದೆ. ಈ ಬಾರಿ ಹೊಸ ಮಾದರಿಯನ್ನು ಪರಿಚಯಿಸಿದ್ದು, ನೀರಿನೊಳಗೆ ಸ್ಫೋಟ ನಡೆಸಿದೆ. ರಷ್ಯಾದ ಮಿಲಿಟರಿ ಪ್ರದೇಶ ಮತ್ತು ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸ್ಪೈಡರ್ಸ್ ವೆಬ್’ ನಡೆಸಿದ 2 ದಿನಗಳ ನಂತರ ಉಕ್ರೇನ್‌ನಿಂದ ಈ ದಾಳಿ ನಡೆದಿದೆ.
💥 Ukraine’s SBU mined multiple underwater pillar supports of the Kerch Bridge over 4 months and detonated the first (!!) 1,100kg explosive at 4:44am. (2,425 lbs)
The bridge, vital for Russia’s ability to maintain occupation of the Crimea peninsula, is now in critical condition. pic.twitter.com/JGyoXDELCz— Igor Sushko (@igorsushko) June 3, 2025
ಈ ಸುದ್ದಿಯನ್ನೂ ಓದಿ: Russia-Ukraine Conflict: ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಮಾತುಕತೆ; ಸಮರ ಅಂತ್ಯಕ್ಕೆ ಕಾಲ ಸನ್ನಿಹಿತ?
ಉಕ್ರೇನ್ ಬಿಡುಗಡೆ ಮಾಡಿದ ವಿಡಿಯೊದಲ್ಲಿ ನೀರಿನೊಳಗೆ ಸ್ಫೋಟ ನಡೆಯುತ್ತಿರುವುದು ಕಂಡು ಬಂದಿದೆ. ಸೇತುವೆಗೆ ಆದ ಹಾನಿಯೂ ವಿಡಿಯೊದಲ್ಲಿ ಗೋಚರಿಸುತ್ತಿದೆ. ಈ ಸೇತುವೆ ರಷ್ಯಾದ ಮುಖ್ಯ ಭೂಭಾಗ ಮತ್ತು ಕ್ರಿಮಿಯನ್ ಪರ್ಯಾಯ ದ್ವೀಪದ ನಡುವಿನ ಪ್ರಮುಖ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತದೆ.
ಸ್ಫೋಟದಿಂದ ಉಂಟಾದ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ. ಎಎಫ್‌ಪಿ ವರದಿಯ ಪ್ರಕಾರ ಸೇತುವೆಯ ನೀರೊಳಗಿನ ಕಂಬಗಳಲ್ಲಿ ಒಂದರ ಮೇಲೆ ಬಾಂಬ್‌ಗಳನ್ನು ಇರಿಸಲಾಗಿತ್ತು.