Karunadu Studio

ಕರ್ನಾಟಕ

IPL 2025: ಕೊಹ್ಲಿಯನ್ನು ಟ್ರೋಲ್, ಟೀಕೆ ಮಾಡಿದವರ ವಿರುದ್ಧ ರಾಜೀವ್ ಶುಕ್ಲಾ ವಾಗ್ದಾಳಿ – Kannada News | Virat Kohli isn’t right for an IPL team, people said: Rajeev Shukla slams critics


ನವದೆಹಲಿ: ಮಂಗಳವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 18ನೇ ಆವೃತ್ತಿಯ ಐಪಿಎಲ್ ಫೈನಲ್(IPL 2025) ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು ಆರು ರನ್‌ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs PBKS Final) ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ಸಾಧನೆ ಮಾಡಿತು. ಇದೇ ವೇಳೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಅವರು ವಿರಾಟ್ ಕೊಹ್ಲಿ(Virat Kohli)ಯನ್ನು ಹೊಗಳಿದರು ಮತ್ತು ಅವರ ವಿರುದ್ಧ ಟೀಕೆಗಳನ್ನು ಮಾಡಿದವರ ಮೇಲೆ ವಾಗ್ದಾಳಿ ನಡೆಸಿದರು.

ಆರ್‌ಸಿಬಿ ಗೆಲುವಿನ ಬಳಿಕ ಮಾತನಾಡಿದ ರಾಜೀವ್ ಶುಕ್ಲಾ, ಸೋಲು, ಗೆಲುವು, ಟ್ರೋಲ್, ಮುಖಭಂಗ ಸೇರಿದಂತ ಎಲ್ಲವನ್ನು ನೋಡಿದ ಆರ್‌‌ಸಿಬಿಯ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿ. ಆರ್‌ಸಿಬಿ ಮಾಲೀಕನಿಂದ ಹಿಡಿದು ಎಲ್ಲಾ ಆಟಗಾರರು ಬದಲಾಗಿದ್ದಾರೆ. ಮ್ಯಾನೇಜ್ಮೆಂಟ್, ಕೋಚ್, ಸ್ಟಾಫ್ ಎಲ್ಲರೂ ಬದಲಾಗಿದ್ದಾರೆ. ಆದರೆ ಮೊದಲ ಆವೃತ್ತಿಯಿಂದ ವಿರಾಟ್ ಕೊಹ್ಲಿ ಆರ್‌ಸಿಬಿಗೆ ಆಡಿದ್ದಾರೆ. ಅವರು ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡಲು ಹಲವು ಬಾರಿ ಪ್ರಯತ್ನಿಸಿದರು, ಜನರು ಅವರನ್ನು ಹೆಚ್ಚಾಗಿ ಟೀಕಿಸುತ್ತಿದ್ದರು, ಅವರು ಒಳ್ಳೆಯ ನಾಯಕನಲ್ಲ. ಅವರು ಐಪಿಎಲ್ ತಂಡಕ್ಕೆ ಸರಿಯಾದವರಲ್ಲ. ಫೈನಲ್‌ ಪಂದ್ಯದಲ್ಲಿಯೂ ಅವರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದಕ್ಕೆ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಟೀಕೆಗಳನ್ನು ಮಾಡಿದ್ದರು.

ಆದರೆ ಏನೇ ಇರಲಿ, ಆರ್‌ಸಿಬಿ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಮತ್ತು ಜನಪ್ರಿಯತೆಯನ್ನು ಹೊಂದಿರುವುದು ವಿರಾಟ್ ಅವರ ಕಾರಣದಿಂದಾಗಿ. ಪ್ರಪಂಚದಾದ್ಯಂತ ಜನರು ಈ ತಂಡವನ್ನು ಅನುಸರಿಸುತ್ತಾರೆ ಏಕೆಂದರೆ ಅದು ಕೊಹ್ಲಿ ಕಾರಣದಿಂದಾಗಿ. ವಿರಾಟ್ ತಂಡ ಎಲ್ಲಿ ಪಂದ್ಯ ಆಡಿದರೂ, ಅದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತದೆ” ಎಂದು ಹೇಳುವ ಮೂಲಕ ಇದುವರೆಗೂ ಕೊಹ್ಲಿಯನ್ನು ಟೀಕಿಸಿದವರಿಗೆ ರಾಜೀವ್ ಶುಕ್ಲಾ ಸರಿಯಾಗಿ ಚಾಟಿ ಬೀಸಿದರು.

ಇದನ್ನೂ ಓದಿ IPL 2025: ʼಈ ಸಲ ಕಪ್‌ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ

ಆರ್‌ಸಿಬಿ ಫೈನಲ್‌ ಗೆಲುವಿನ ಬಳಿಕ ಮಾತನಾಡಿ ಕೊಹ್ಲಿ, “ನಾನು ಆರ್‌ಸಿಬಿ ತಂಡಕ್ಕೆ ನಿಷ್ಠೆಯಿಂದ ಆಡಿದ್ದೇನೆ. ಎಲ್ಲರೂ ಇತರ ತಂಡಕ್ಕೆ ಹರಾಜಾಗುತ್ತಿದ್ದರು. ತಂಡ ಟ್ರೋಫಿ ಗೆಲ್ಲಲೇ ಇಲ್ಲ. ಹೀಗಾಗಿ ಮತ್ತೊಂದು ತಂಡಕ್ಕೆ ಹೋಗುವ ಆಲೋಚನೆ ಬಂದಿದ್ದು ಸುಳ್ಳಲ್ಲ. ಆದರೆ ದೃಢ ನಿರ್ಧಾರದಿಂದ ಆರ್‌ಸಿಬಿಯಲ್ಲೇ ಉಳಿದೆ. ನನ್ನ ಮನಸ್ಸು, ಹೃದಯ, ಆತ್ಮ ಬೆಂಗಳೂರಿನೊಂದಿಗೆ ಬೆಸದು ಕೊಂಡಿದೆ. ತಂಡ ಕೊನೆಗೂ ಕಪ್‌ ಗೆದ್ದ ಖುಷಿಯಲ್ಲಿ ನಾನು ಮಗುವಿನಂತೆ ನಿದ್ರಿಸುತ್ತೇನೆ ಎಂದು ಕೊಹ್ಲಿ ಹೇಳಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »