Karunadu Studio

ಕರ್ನಾಟಕ

ಆರ್‌ಸಿಬಿ ಮೊದಲ ಫೈನಲ್‌ ಸೋಲಿಗೂ, ಚೊಚ್ಚಲ ಟ್ರೋಫಿ ಗೆಲುವಿಗೂ ಇದೆ ಸಾಮ್ಯತೆ – Kannada News | RCB first final defeat and their first trophy win. Both were decided by a margin of 6 runs


ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ(RCB) ತನ್ನ ನಾಲ್ಕನೇ ಫೈನಲ್‌ ಪ್ರವೇಶದಲ್ಲಿ ಚೊಚ್ಚಲ ಐಪಿಎಲ್‌ ಕಪ್‌ ಗೆದ್ದು ಸಂಭ್ರಮಿಸಿದೆ. ಮಂಗಳವಾರ ನಡೆದಿದ್ದ ಪ್ರಶಸ್ತಿ ಕಾಳಗದಲ್ಲಿ(RCB vs PBKS Final) ಪಂಜಾವ್‌ ವಿರುದ್ಧ ರೋಚಕ ಗೆಲುವು ಸಾಧಿಸಿತ್ತು. ಈ ಹಿಂದೆ 2009ರಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌(RCB first final) ಪ್ರವೇಶಿಸಿ ಸೋತ್ತಿತ್ತು. ಈ ಸೋಲು ಮತ್ತು ಚೊಚ್ಚಲ ಟ್ರೋಫಿ(IPL Final 2025) ಗೆದ್ದಿರುವಲ್ಲಿ ಸಾಮತ್ಯೆಯೊಂದು ಕಂಡುಬಂದಿದೆ.

ಹೌದು, ಆರ್‌ಸಿಬಿ ಮೊದಲ ಬಾರಿಗೆ ಫೈನಲ್‌ ಆಡಿದ್ದು 2009ರಲ್ಲಿ. ಡೆಕ್ಕನ್‌ ಚಾರ್ಜಸ್‌ ಎದುರು. ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಈ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಕ್ಕನ್‌ 6 ವಿಕೆಟ್‌ಗೆ 143 ರನ್‌ ಬಾರಿಸಿತು. ಅನಿಲ್‌ ಕುಂಬ್ಳೆ 16ಕ್ಕೆ 4 ವಿಕೆಟ್‌ ಉರುಳಿಸಿದ್ದರು. ಆದರೆ ಈ ಅಲ್ಪ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಆರ್‌ಸಿಬಿ ಬ್ಯಾಟರ್‌ಗಳು 9ಕ್ಕೆ 137 ರನ್‌ ಮಾಡಿ 6 ರನ್‌ ಸೋಲಿನಿಂದ ಚೊಚ್ಚಲ ಕಪ್‌ ಕೈಚೆಲ್ಲಿತ್ತು.

ಕಾಕತಾಳಿಯ ಎನ್ನುವಂತೆ ಆರ್‌ಸಿಬಿ ತನ್ನ ಚೊಚ್ಚಲ ಕಪ್‌ ಗೆದ್ದಿರುವುದು ಕೂಡ 6 ರನ್‌ ಅಂತರದಿಂದಲೇ. ಹೀಗಾಗಿ ಚೊಚ್ಚಲ ಸೋಲಿಗೂ ಮತ್ತು ಚೊಚ್ಚಲ ಫೈನಲ್‌ ಗೆಲುವಿಗೂ 6 ರನ್‌ ಕಾರಣವಾಯಿತು. ಅಂದು ಕಂಟಕವಾಗಿದ್ದ 6 ರನ್‌ ಈ ಬಾರಿ ಆರ್‌ಸಿಯ ಕೈ ಹಿಡಿಯಿತು.

ಅತ್ಯಂತ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು. ಆರ್‌ಸಿಬಿ ಗೆದ್ದು ಕಪ್‌ ಬರಗಾಲ ನೀಗಿಸಿತು.

ಇದನ್ನೂ ಓದಿ IPL 2025: ಕೊಹ್ಲಿಯನ್ನು ಟ್ರೋಲ್, ಟೀಕೆ ಮಾಡಿದವರ ವಿರುದ್ಧ ರಾಜೀವ್ ಶುಕ್ಲಾ ವಾಗ್ದಾಳಿ



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »