Karunadu Studio

ಕರ್ನಾಟಕ

Krunal Pandya: ಐಪಿಎಲ್‌ ಫೈನಲ್‌ ಇತಿಹಾಸದಲ್ಲಿ ದಾಖಲೆ ಬರೆದ ಕೃನಾಲ್‌ ಪಾಂಡ್ಯ – Kannada News | Krunal Pandya becomes 1st player to accomplish this IPL feat


ಅಹಮದಾಬಾದ್‌: ಆರ್‌ಸಿಬಿ ತಂಡದ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಸ್ಪಿನ್‌ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ ಅವರು ಫೈನಲ್‌ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ ಐಪಿಎಲ್‌ ಇತಿಹಾಸದಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಫೈನಲ್‌ನಲ್ಲಿ 2 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಅವರು 2017 ರಲ್ಲಿ ಪುಣೆ ವಿರುದ್ಧ ಮುಂಬೈ ಇಂಡಿಯನ್ಸ್‌ ಫೈನಲ್‌ನಲ್ಲಿ ಗೆದ್ದಾಗಲೂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಂದು 38 ಎಸೆತಕ್ಕೆ 47 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದ್ದರು. ಇದೀಗ ಆರ್‌ಸಿಬಿಯನ್ನು ಫೈನಲ್‌ನಲ್ಲಿ ತಮ್ಮ ಸ್ಪಿನ್‌ ಕೈಚಳಕದ ಮೂಲಕ ಚಾಂಪಿಯನ್‌ ಮಾಡಿದ್ದಾರೆ.

ಮಧ್ಯಮ ಓವರ್‌ಗಳಲ್ಲಿ ಪಂಜಾಬ್‌ ಮೇಲೆ ಒತ್ತಡ ಹಾಕಿದ ಕೃನಾಲ್‌ ಪಾಂಡ್ಯ 4 ಓವರ್‌ಗೆ ಕೇವಲ 17 ರನ್‌ ನೀಡಿ 2 ವಿಕೆಟ್‌ ಕಿತ್ತು ಮಿಂಚಿದರು. ಕೃನಾಲ್‌ಗೆ ಇದು ತವರಿನ ಮೈದಾನವೂ ಆಗಿತ್ತು. ಹೀಗಾಗಿ ಅವರು ತವರಿನ ಲಾಭವೆತ್ತಿ ಎದುರಾಳಿ ತಂಡಕ್ಕೆ ಸೋಲುಣಿಸುವಲ್ಲಿ ಮಹತ್ವ ಕೊಡುಗೆ ಸಲ್ಲಿಸಿದರು. ಹರಾಜಿನಲ್ಲಿ ಅವರನ್ನು ಖರೀದಿ ಮಾಡುವಾಗ ಸ್ವತಃ ಆರ್‌ಸಿಬಿ ಅಭಿಮಾನಿಗಳೇ ಅವರನ್ನು ಟ್ರೋಲ್‌ ಮಾಡಿದ್ದರು. ಇದೀಗ ಪಂದ್ಯವನ್ನು ಗೆಲ್ಲಿಸಿದ ಬಳಿಕ ಅವರನ್ನು ಕೊಂಡಾಡಿದ್ದಾರೆ. ಕೃನಾಲ್‌ ಪಾಂಡ್ಯ ಒಟ್ಟು 4 ಐಪಿಎಲ್‌ ಟ್ರೋಫಿ ಗೆದ್ದ ಸಾಧನೆ ಮಾಡಿದ್ದಾರೆ. ಮೂರು ಬಾರಿ ಮುಂಬೈ ಪರ ಮತ್ತು ಒಂದು ಬಾರಿ ಆರ್‌ಸಿಬಿ ಪರ.

ಇದನ್ನೂ ಓದಿ IPL 2025: ಕೊಹ್ಲಿಯನ್ನು ಟ್ರೋಲ್, ಟೀಕೆ ಮಾಡಿದವರ ವಿರುದ್ಧ ರಾಜೀವ್ ಶುಕ್ಲಾ ವಾಗ್ದಾಳಿ

ದಾಖಲೆ ಬರೆದ ಪಾಟೀದಾರ್‌

ಆರ್‌ಸಿಬಿಗೆ ಚೊಚ್ಚಲ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರಜತ್‌ ಪಾಟೀದಾರ್‌ ಈ ಸಾಧನೆ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಪಂದ್ಯ ಆಡದೆ ಐಪಿಎಲ್‌ ಟ್ರೋಫಿ ಗೆದ್ದ ನಾಯಕರ ಪಟ್ಟಿಗೆ ಸೇರಿದರು. ಜತೆಗೆ ನಾಯಕನಾಗಿ ಮೊದಲ ಪ್ರಯತ್ನದಲ್ಲೇ ಕಪ್‌ ಗೆದ್ದು ದಿಗ್ಗಜ ಶೇನ್‌ ವಾರ್ನ್‌ ಜತೆ ಎಲೈಟ್‌ ಪಟ್ಟಿಗೆ ಸೇರಿದರು. ವಾರ್ನ್‌ 2008ರ ಚೊಚ್ಚಲ ಆವೃತ್ತಿಯಲ್ಲಿ ನಾಯಕನಾಗಿ ರಾಜಸ್ಥಾನ್‌ಗೆ ಕಪ್‌ ಗೆಲ್ಲಿಸಿಕೊಟ್ಟಿದ್ದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »